ಚೆನ್ನೈ:ಸೂಪರ್​ಸ್ಟಾರ್​ ರಜನೀಕಾಂತ್​ ಅವರು ರಾಜಕೀಯ ಪ್ರವೇಶಿಸುತ್ತಾರೆ…ಚುನಾವಣಾ ರಾಜಕಾರಣದಲ್ಲಿ ಸಕ್ರಿಯರಾಗುತ್ತಾರೆಂಬ ಮಾತು ಎರಡು ವರ್ಷಗಳಿಂದ ಕೇಳಿಬರುತ್ತಲೇ ಇದೆ. ಅವರ ಪಕ್ಷವಿನ್ನೂ ಅಧಿಕೃತವಾಗಿ ಉದ್ಘಾಟನೆಯಾಗಿಲ್ಲ. ಆದರೆ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ಚುನಾವಣೆ ಒಳಗೆ ರಜನೀಕಾಂತ್​ ಪಕ್ಷ ಹೊರಬರಲಿದೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ವರದಿಯಾಗಿತ್ತು. ಅದಕ್ಕೆ ಪುಷ್ಟಿ ನೀಡುವಂತೆ ಎಂಟು ತಿಂಗಳ ಹಿಂದೆ ರಜನೀಕಾಂತ್ ಅವರು ಮಕ್ಕಳ್​ ಮಂದ್ರಮ್​ ಸದಸ್ಯರೊಂದಿಗೆ ಸಭೆಗಳನ್ನೂ ನಡೆಸಿದ್ದರು.
ಆದರೆ ಇಂದು ರಜನೀಕಾಂತ್​ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮತ್ತೊಮ್ಮೆ ಯೋಚಿಸಿ, ಒಂದು ಸೂಕ್ತ ಸಮಯದಲ್ಲಿ ತಿಳಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಮಕ್ಕಳ್​ ಮಂದ್ರಮ್​ ಪಕ್ಷದ ಪದಾಧಿಕಾರಿಗಳ ಜತೆ ಇನ್ನೊಮ್ಮೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ರಜನೀಕಾಂತ್​ ಅವರ ಈ ಹೇಳಿಕೆಗೆ ಕಾರಣ ಒಂದು ಪತ್ರ…
ಇತ್ತೀಚೆಗೆ ರಜನೀಕಾಂತ್​ ಅವರು ತಮ್ಮ ಅಭಿಮಾನಿಗಳಿಗೆ ಬರೆದಿದ್ದಾರೆ ಎಂಬ ಅರ್ಥದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಪತ್ರದಲ್ಲಿ ರಜನೀಕಾಂತ್​ ಅವರ ಆರೋಗ್ಯದ ಬಗ್ಗೆ ಮಾಹಿತಿ ಇದೆ. ನನ್ನ ಆರೋಗ್ಯ ಸರಿ ಇಲ್ಲದ ಕಾರಣ ರಾಜಕೀಯದಿಂದ ಸದ್ಯದ ಮಟ್ಟಿಗೆ ದೂರವೇ ಉಳಿಯುವುದು ಉತ್ತಮ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹಾಗಾಗಿ ನಾನು ಈ ಬಾರಿ ರಾಜಕೀಯ ಪ್ರವೇಶ ಮಾಡುವುದು ಅನುಮಾನ ಎಂದು ಆ ಪತ್ರದಲ್ಲಿ ಉಲ್ಲೇಖವಾಗಿದೆ.ಇದನ್ನೂ ಓದಿ:ಸುಟ್ಟ ಕಾರಿನ ಡಿಕ್ಕಿಯಲ್ಲಿ ಶವ ಪತ್ತೆ ಪ್ರಕರಣ: ಬಯಲಾಯ್ತು ಪತ್ನಿ, ಮಾವನ ಭಯಾನಕ ಕೃತ್ಯ!
ರಜನೀಕಾಂತ್​ ಅವರಿಗೆ 2016 ಮೂತ್ರಪಿಂಡ ಕಸಿ ಮಾಡಲಾಗಿದೆ. ಅವರಲ್ಲಿ ರೋಗನಿರೋಧಕ ಶಕ್ತಿಯೂ ಕಡಿಮೆ ಇದೆ. ಹಾಗಾಗಿ ಅವರಿಗೆ ಕೊವಿಡ್​-19 ಸೋಂಕು ಬೇಗನೇ ತಗುಲುವ ಸಾಧ್ಯತೆ ಇದೆ. ಇದೀಗ ಕರೊನಾ ಪ್ರಮಾಣ ಜಾಸ್ತಿಯೇ ಇರುವುದರಿಂದ ಅವರು ಸಾರ್ವಜನಿಕ ಜೀವನದಿಂದ ದೂರ ಉಳಿಯುವುದು ಉತ್ತಮ. ಒಂದೊಮ್ಮೆ ರಜನೀಕಾಂತ್​ ರಾಜಕೀಯ ಪ್ರವೇಶ ಮಾಡಿ, ಚುನಾವಣಾ ಪ್ರಚಾರಕ್ಕೆ ಇಳಿದರೆ ಹೊರಗಡೆ ಓಡಾಟ ಮಾಡುವುದು ಅನಿವಾರ್ಯವಾಗುತ್ತದೆ. ಸೋಂಕಿನಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ ಎಂಬಿತ್ಯಾದಿ ಅಂಶಗಳು ಪತ್ರದಲ್ಲಿ ಇದ್ದವು. ರಜನೀಕಾಂತ್​ ಅವರು ತಮ್ಮ ಅನಾರೋಗ್ಯದ ಕಾರಣಗಳನ್ನೆಲ್ಲ ವಿವರಿಸದಂತೆ ಪತ್ರದ ಸ್ವರೂಪ ಇದೆ.ಸೋಷಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಪತ್ರವನ್ನು ನೋಡಿದ ಅವರ ಅಭಿಮಾನಿಗಳು ನಿರಾಸೆಗೊಂಡ ಬೆನ್ನಲ್ಲೇ ಇಂದು ತಮ್ಮ ಟ್ವಿಟರ್​ ಮೂಲಕ ರಜನೀಕಾಂತ್​ ಸ್ಪಷ್ಟನೆ ನೀಡಿದ್ದಾರೆ.ಇದನ್ನೂ ಓದಿ:VIDEO | ಊಟ ಮಾಡಿದ್ಯಾ? ಗರ್ಭಿಣಿ ಪತ್ನಿ ಬಗ್ಗೆ ಕೊಹ್ಲಿ ಕಾಳಜಿ ತೋರಿದ ವಿಡಿಯೋ ವೈರಲ್
ಈ ಪತ್ರ ಬರೆದವನು ನಾನಲ್ಲ. ಆದರೆ ಅದರಲ್ಲಿ ಹೇಳಲಾದ ವಿಚಾರಗಳೆಲ್ಲ ಸತ್ಯ. ನನಗೆ ಮೂತ್ರಪಿಂಡ ಕಸಿಯಾಗಿರುವುದೂ ನಿಜ. ರಾಜಕೀಯದಿಂದ ದೂರ ಇರಿ ಎಂದು ವೈದ್ಯರು ಸಲಹೆ ನೀಡಿದ್ದೂ ಹೌದು. ಆದರೆ ಪತ್ರ ಬರೆದದ್ದು, ಸೋಷಿಯಲ್​ ಮೀಡಿಯಾದಲ್ಲಿ ಹಾಕಿದ್ದು ನಾನಲ್ಲ ಎಂದಿದ್ದಾರೆ.  ಅಲ್ಲಿಗೆ ತಮಿಳುನಾಡು ಚುನಾವಣೆಗೂ ಪೂರ್ವ ರಜನೀಕಾಂತ್​ ರಾಜಕೀಯ ಪ್ರವೇಶ ಮಾಡುವುದು ಅನುಮಾನವಾಗಿದೆ. (ಏಜೆನ್ಸೀಸ್)
ಚರ್ಚ್​ ಮೇಲೆ ದಾಳಿ: ಮಹಿಳೆಯ ರುಂಡ​ ತುಂಡರಿಸಿ ಮೂವರ ಹತ್ಯೆ ಮಾಡಿದ ದುಷ್ಕರ್ಮಿಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 + sixteen =
Remember me
