ಚೆನ್ನೈ:ಕಾಲಿವುಡ್​ ಸೂಪರ್​ಸ್ಟಾರ್ ನಟ ರಜನೀಕಾಂತ್​ ರಾಜಕೀಯಕ್ಕೆ ಇಳಿಯಲು ಸಿದ್ಧರಾಗಿದ್ದು ಗುರುವಾರ ಇದನ್ನು ದೃಢಪಡಿಸಿದ್ದಾರೆ. ಆದರೆ ಇನ್ನೂ ತಮ್ಮ ರಾಜಕೀಯ ಪಕ್ಷ ಹಾಗೂ ಅದರ ಉದ್ಘಾಟನೆ ದಿನವನ್ನು ಬಹಿರಂಗಪಡಿಸಲಿಲ್ಲ.
ಚೆನ್ನೈನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜನೀಕಾಂತ್​, ರಾಜಕೀಯದಲ್ಲಿ ವಯಸ್ಸಿನ ಮಿತಿ ಹಾಗೂ ಶಿಕ್ಷಣಗಳು ನಿರ್ಣಾಯಕ ಅಂಶಗಳಾಗಿವೆ. ಹಾಗಾಗಿ ನನ್ನ ಪಕ್ಷದಲ್ಲಿ ಹೊಸಬರಿಗೆ, ವಿದ್ಯಾವಂತರಿಗೆ ಹಾಗೂ ಯುವಕರಿಗೆ ಅವಕಾಶ ಕೊಡುತ್ತೇನೆ. ಅದರಲ್ಲೂ ಗೌರವಾನ್ವಿತರಿಗೆ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ನನಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಬೇಕು ಎಂಬ ಯಾವ ಆಸೆಯೂ ಇಲ್ಲ. ಸಿಎಂ ಹುದ್ದೆ ಮೇಲೆ ಕಣ್ಣಿಟ್ಟು ರಾಜಕೀಯಕ್ಕೆ ಬಂದು ಪಕ್ಷ ಕಟ್ಟುತ್ತಿಲ್ಲ. ನನ್ನ ಪಕ್ಷದಲ್ಲಿ ನನ್ನೊಂದಿಗೆ ಕೆಲವೇ ನಾಯಕರು ಕೆಲಸ ಮಾಡಲಿದ್ದಾರೆ. ಒಂದು ಸಮರ್ಥ ಪಕ್ಷದ ನಾಯಕ ಕೂಡ ರಾಜ್ಯವನ್ನು ಆಳಬಲ್ಲ. ತಮಿಳುನಾಡಿನ ರಾಜಕೀಯದಲ್ಲಿ ಬದಲಾವಣೆ ತರುವುದಷ್ಟೇ ನನ್ನ ಉದ್ದೇಶ ಎಂದು ರಜನೀಕಾಂತ್​ ಅವರು ತಿಳಿಸಿದ್ದಾರೆ.
ತಮಿಳುನಾಡಿನ ರಾಜಕೀಯದಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ತುಂಬ ಪ್ರಭಾವಿಗಳಾಗಿದ್ದರು. ಅವರೇ ಬೇಕು ಎಂದು ಜನರು ಮತ ಹಾಕುತ್ತಿದ್ದರು. ಆದರೆ ಈಗ ಅವರಿಲ್ಲ. ಒಂದು ನಿರ್ವಾತ ರಾಜಕೀಯ ವಾತಾವರಣ ಸೃಷ್ಟಿಯಾಗಿದೆ. ಮತ್ತೆ ಆ ಜಾಗವನ್ನು ತುಂಬಬೇಕು. ಹಾಗಾಗಿ ಒಂದು ಬದಲಾವಣೆ ತರಲು ಹೊಸ ಚಳವಳಿಯೊಂದನ್ನು ಪ್ರಾರಂಭಿಸುವುದು ನನ್ನ ಉದ್ದೇಶ ಎಂದು ಹೇಳಿದ್ದಾರೆ.
ತಾವು ರಾಜಕೀಯಕ್ಕೆ ಇಳಿಯುವುದಾಗಿ 2017ರ ಡಿಸೆಂಬರ್​ನಲ್ಲೇ ರಜನೀಕಾಂತ್​ ಅವರು ಘೋಷಣೆ ಮಾಡಿದ್ದರು. ನಾನು ಯುದ್ಧಕ್ಕೆ ಇಳಿಯುತ್ತಿದ್ದೇನೆ, ಹೋರಾಟಕ್ಕೆ ಸಿದ್ಧರಾಗಿ ಎಂದು ಚೆನ್ನೈನಲ್ಲಿ ಅಭಿಮಾನಿಗಳ ಎದುರು ಹೇಳಿದ್ದರು. (ಏಜೆನ್ಸೀಸ್​)
VIDEO: ಅಜ್ಜಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದ ಮೊಮ್ಮಗಳು ಕ್ಷಣದಲ್ಲಿ ಶಾಕ್​…; ವೃದ್ಧೆ ಆಡಿದ ಒಂದೇ ಒಂದು ಮಾತಿಗೆ ಕಂಗಾಲು !

ಜೈಲು ಶಿಕ್ಷೆ ಆದೇಶ ಪ್ರಕಟಿಸಿದ್ದರಿಂದ ಬೇಸರಗೊಂಡ ಅಪರಾಧಿ 4ನೇ ಮಹಡಿಯಿಂದ ಜಿಗಿದರೂ ಬಚಾವಾದ!

ಸತತ ಸೋಲುಗಳಿಂದ ಕಂಗೆಟ್ಟಿದ್ದೀರಾ… ಇಲ್ಲೂ ಸಿಗಬಹುದು ಗೆಲ್ಲೋದಕ್ಕೆ ಇರುವ ಟಿಪ್ಸ್​ ! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
