ಬೆಂಗಳೂರು:ತಮಿಳು ಸೂಪರ್​ಸ್ಟಾರ್ ರಜಿನಿಕಾಂತ್​ ಹೊಸ ರಾಜಕೀಯ ಪಕ್ಷದೊಂದಿಗೆ ತಮಿಳುನಾಡು ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ ಸಜ್ಜುಗೊಳಿಸಿದ್ದು, ಈ ತಿಂಗಳ ಕೊನೆಗೆ ಮಹತ್ವದ ಘೋಷಣೆ ಪ್ರಕಟಿಸುವುದಾಗಿ ಡಿಸೆಂಬರ್ 3ರಂದು ತಿಳಿಸಿದ್ದರು. ಇದರ ಬೆನ್ನಿಗೇ, ಅಣ್ಣನ ಆಶೀರ್ವಾದ ಪಡೆಯುವುದಕ್ಕೆ ಅವರು ಬೆಂಗಳೂರಿಗೆ ಆಗಮಿಸಿದ್ದರು.
ರಜಿನಿಕಾಂತ್ ಅವರು ಭಾನುವಾರ ರಾತ್ರಿ ಅಣ್ಣ ಸತ್ಯನಾರಾಯಣ ರಾವ್​ ಅವರ ನಿವಾಸಕ್ಕೆ ಆಗಮಿಸಿದ್ದರು. ಉಭಯಕುಶಲೋಪರಿ ಬಳಿಕ ಅಣ್ಣನ ಆಶೀರ್ವಾದವನ್ನೂ ಪಡೆದರು.ಅವರು ಆಶೀರ್ವಾದ ಪಡೆಯುತ್ತಿರುವ ಮತ್ತು ಅವರಿಗೆ ಅಣ್ಣ ಶಾಲು ಹೊದೆಸಿ ಶುಭಹಾರೈಸಿದ ಫೋಟೋಗಳು ಸೋಷಿಯಲ್ ಮೀಡಿಯದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ:ಹೊಸ ವರ್ಷ ಹೊಸ ಪಕ್ಷ, ಡಿಸೆಂಬರ್ 31ಕ್ಕೆ ಮಹತ್ವದ ಘೋಷಣೆ ಎಂದ ಸೂಪರ್​ ಸ್ಟಾರ್ ರಜಿನಿ !
ತಲೈವರ್ ಎಂದೇ ಅಭಿಮಾನಿಗಳಿಂದ ಕರೆಯಿಸಿಕೊಳ್ಳುತ್ತಿರುವ ರಜಿನಿಕಾಂತ್ ರಾಜಕೀಯ ಪ್ರವೇಶಕ್ಕೆ ಅಭಿಮಾನಿಗಳು ಬಹಳ ವರ್ಷಗಳಿಂದ ತವಕದೊಂದಿಗೆ ಕಾಯುತ್ತಿದ್ದಾರೆ.ಮುಂದಿನ ವರ್ಷ ಏಪ್ರಿಲ್​ -ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿರುವ ಅವರು, ಪಕ್ಷ ಗೆಲ್ಲುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ನಟಿ ವಿಜಯಶಾಂತಿ ದೆಹಲಿಯಲ್ಲಿ ಬಿಜೆಪಿ ಸೇರಿದ್ರು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
