ಲಖನೌ:ಸೂಪರ್​ಸ್ಟಾರ್​ ರಜನಿಕಾಂತ್​ ಅಭಿನಯದ ಜೈಲರ್ ಚಿತ್ರವು ಬಿಡುಗಡೆಯಾದ ದಿನದಿಂದಲ್ಲೂ ಒಂದಿಲ್ಲೊಂದು ವಿಶೇಷತೆಗಳಿಂದಾಗಿ ಸಿನಿ ರಸಿಕರ ಗಮನ ಸೆಳೆಯುತ್ತಿದೆ. ಬಾಕ್ಸ್​ಆಫೀಸ್​ನಲ್ಲಿ ಚಿತ್ರದ ಅಬ್ಬರ ಸದ್ಯಕ್ಕಂತು ನಿಲ್ಲುವ ಯಾವುದೇ ಮುನ್ಸೂಚನೆ ಕಂಡು ಬಂದಿಲ್ಲ. ಬಾಕ್ಸ್​ ಆಫೀಸ್​ ಪಂಡಿತರ ಪ್ರಕಾರ ಚಿತ್ರವು ಶನಿವಾರ 500 ಕೋಟಿ ರೂಪಾಯಿಯ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ.
ಇನ್ನು ಚಿತ್ರ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದು, ಸೂಪರ್​ಸ್ಟಾರ್​ ರಜನಿಕಾಂತ್​ ಜೈಲರ್​ ಸಿನಿಮಾವನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರೊಂದಿಗೆ ವೀಕ್ಷಿಸಲಿದ್ದಾರೆ. ಈ ವಿಚಾರವನ್ನು ಖುದ್ದು ರಜನಿಕಾಂತ್​ ಅವರೇ ಖಚಿತಪಡಿಸಿದ್ದಾರೆ.
#WATCH| Actor Rajinikanth arrives in Uttar Pradesh's Lucknow, says, "I will watch the film (Jailor) with the CM".pic.twitter.com/wsBdkosu18
ಇದನ್ನೂ ಓದಿ:ಬಾಕ್ಸ್​ಆಫೀಸ್​ನಲ್ಲಿ ಹೊಸ ದಾಖಲೆ ಬರೆದ ಗದರ್​-2; ನಿಲ್ಲುತ್ತಲೇ ಇಲ್ಲ ಚಿತ್ರದ​ ಅಬ್ಬರ
ಈ ಕುರಿತು ಮಾತನಾಡಿರುವ ರಜನಿಕಾಂತ್​ ದೇವರ ದೆಸೆಯಿಂದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಶನಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರೊಂದಿಗೆ ಚಿತ್ರ ವೀಕ್ಷಿಸಲಿದ್ದೇನೆ ಎಂದು ಲಖನೌ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.
ಚಿತ್ರ ಪ್ರದರ್ಶನಕ್ಕೂ ಮುನ್ನ ರಜಿನಿಕಾಂತ್​ ಉತ್ತರಪ್ರದೇಶ ರಾಜ್ಯಪಾಲರಾದಆನಂದಿಬೆನ್​ ಪಟೇಲ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಾಜ್ಯಪಾಲರ ಜೊತೆಗಿನ ಭೇಟಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಲಾಗಿದೆ.
प्रदेश की राज्यपाल श्रीमती आनंदीबेन पटेल से आज राजभवन में प्रसिद्ध अभिनेता व निर्देशक श्री रजनीकान्त ने शिष्टाचार भेंट की।pic.twitter.com/Nr3rVHfPwZ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − 1 =
Remember me
