ಚೆನ್ನೈ:ಲಾಕ್​ಡೌನ್​ ಸಮಯದಲ್ಲಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ಚಿತ್ರನಟರೆಲ್ಲ ವಿವಿಧ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳನ್ನು ಅಪ್​ಲೋಡ್​ ಮಾಡುತ್ತಿದ್ದಾರೆ.
ಅಂತೆಯೇ ಸೂಪರ್​ಸ್ಟಾರ್​ ರಜನಿಕಾಂತ್​ ಫೋಟೋವೊಂದು ಭಾರಿ ವೈರಲ್​ ಆಗಿದೆ. ಅಭಿಮಾನಿಗಳ ಹರ್ಷವಂತೂ ಮೇರೆ ಮೀರಿದೆ. ಒಬ್ಬರಂತೂ ಫೋಟೋ ಕ್ಲಿಕ್​ ಮಾಡಿ ಲಕ್ಷಾಂತರ ಜನರಲ್ಲಿ ಹರ್ಷವನ್ನುಂಟು ಮಾಡಿದವರು ನಿಜಕ್ಕೂ ಭಾಗ್ಯವಂತರು ಎಂದೇ ಬಣ್ಣಿಸಿದ್ದಾರೆ.
ಈ ಫೋಟೋದಲ್ಲೂ ಒಂದು ವಿಶೇಷವಿದೆ. ಐಷಾರಾಮಿ ಕಾರನ್ನು ಸ್ವತಃ ರಜನಿಕಾಂತ್​ ಚಲಾಯಿಸುತ್ತಿದ್ದಾರೆ. ಮತ್ತೂ ವಿಶೇಷವೆಂದರೆ ಈ ವೇಳೆ ರಜನಿಕಾಂತ್​ ಮಾಸ್ಕ್​ ಧರಿಸಿದ್ದಾರೆ. ಈ ಮೂಲಕ ಕರೊನಾ ವಿರುದ್ಧ ಹೋರಾಟಕ್ಕೆ ಮಾಸ್ಕ್​ ಬಳಸಿ ಎಂಬ ಸಂದೇಶ ನೀಡಿದ್ದಾರೆ ಸೂಪರ್​ಸ್ಟಾರ್​.
ಇದನ್ನೂ ಓದಿ;ಈ ಟ್ರ್ಯಾಕ್ಟರ್​ ಬೆಟ್ಟದ ಮೆಟ್ಟಿಲುಗಳನ್ನು ಏರುತ್ತೆ…! ಅಬ್ಬಾ ಭೌತಶಾಸ್ತ್ರದ ಪಂಡಿತರಿವರು
ಕೆಲವರು ‘ಲಯನ್​ ರೋರಿಂಗ್​ ಇನ್​ ಲಾಂಬೋರ್ಗಿನಿ’ ಎಂದು ಶೀರ್ಷಿಕೆ ನೀಡಿದ್ದಾರೆ. ಮತ್ತೊಬ್ಬರು ಮಗಳೊಂದಿಗೆ ಲ್ಯಾಂಬೋರ್ಗಿನಿಯಲ್ಲಿ ದಿನಸಿ ತರಲು ರಜನಿ ಹೊರಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟ್​ ಟ್ವಿಟರ್​ನಲ್ಲಿ ಈಗಾಗಲೇ #LionInLamborghini ಎಂದೇ ಟ್ರೆಮಡ್​ ಆಗಿದೆ. ಜನಪ್ರಿಯ ಎನಿಸಿಕೊಳ್ಳುವುದು ಮುಖ್ಯವಲ್ಲ, ಜನಾನುರಾಗಿಯಾಗವುದರ ಜತೆಗೆ, ಜವಾಬ್ದಾರಿಯುತವಾಗಿ ಇರುವುದು ಕೂಡ ಮುಖ್ಯ ಎಂದು ಅಭಿಮಾನಿಗಳು ರಜನಿ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ರಾಸಾಯನಿಕವಿರುವ ಹ್ಯಾಂಡ್​ ಸ್ಯಾನಿಟೈಸರ್​ ಬಳಸದಿರಿ…! ಎಚ್ಚರ ಜೀವಕ್ಕೆ ಅಪಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seventeen =
Remember me
