ಚೆನ್ನೈ:ಇಂದು ಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಿನಿ ಹಾಗೂ ರಾಜಕೀಯ ಗಣ್ಯರು ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.  ಕಂಡಕ್ಟರ್ ಲೆವೆಲ್ ನಿಂದ ಸೌತ್ ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿರುವ ರಜನಿಕಾಂತ್ ಸಿನಿಮಾ ರಂಗದಲ್ಲಿ ನಡೆದು ಬಂದ ಹಾದಿ ವಿಶಿಷ್ಟವಾಗಿದೆ.

ತಮಿಳು, ತೆಲುಗು, ಕನ್ನಡ ಮತ್ತು ಬಂಗಾಳಿ ಚಿತ್ರಗಳಲ್ಲಿ ನಟಿಸಿದ ರಜನಿಕಾಂತ್​​ ಅವರು 73ರ ಹರೆಯದಲ್ಲೂ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅವರು ಇಲ್ಲಿಯವರೆಗೆ ಸುಮಾರು 169 ಚಿತ್ರಗಳನ್ನು ಪೂರ್ಣಗೊಳಿಸಿದ್ದಾರೆ. ಅವರು ಪ್ರಸ್ತುತ ತಮ್ಮ 170 ನೇ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗ ಸೌತ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಹೀರೋ ರಜನಿ ಅವರ ಆಸ್ತಿ  ಎಷ್ಟು ಎಂದು ತಿಳಿದುಕೊಳ್ಳಲು ಬಯಸುವ ಅಭಿಮಾನಿಗಳಿ ಇಲ್ಲಿದೆ ಉತ್ತರ.

ಸೂಪರ್ ಸ್ಟಾರ್  ನಿವ್ವಳ ಮೌಲ್ಯ 500 ಕೋಟಿ ರೂ.ಕೋಟಿಗಟ್ಟಲೆ ಆಸ್ತಿ, ಹೆಸರು ಇದ್ದರೂ ರಜನಿ ಸಾಮಾನ್ಯ ಜೀವನ ನಡೆಸುತ್ತಿದ್ದಾರೆ.ಪ್ರಸ್ತುತ, ತಲೈವಾ ಅವರು ಚೆನ್ನೈನ ಬೋಯ್ಸ್ ಗಾರ್ಡನ್ಸ್‌ನಲ್ಲಿರುವ ಅವರ ಭವನದಲ್ಲಿ ವಾಸಿಸುತ್ತಿದ್ದಾರೆ.ಈ ಬಂಗಲೆಯ ಮೌಲ್ಯ ಸುಮಾರು ರೂ.40 ಕೋಟಿ ಎಂದು ವರದಿಯಾಗಿದೆ.

ಚೆನ್ನೈನ ವಿವಿಧ ಭಾಗಗಳಲ್ಲಿ ಮನೆಗಳಿವೆ.ಚೆನ್ನೈನಲ್ಲಿ ರಾಘವೇಂದ್ರ ಕಲ್ಯಾಣ ಮಂಟಪವಿದೆ.ತವರು ರಾಜ್ಯ ಕರ್ನಾಟಕದಲ್ಲೂ ಅವರಿಗೆ ಮನೆ, ಆಸ್ತಿ ಇದೆಯಂತೆ.ಸೂಪರ್ ಸ್ಟಾರ್ ಬಳಿ ಕೇವಲ 4 ದುಬಾರಿ ಕಾರುಗಳಿವೆ.ಈ ನಾಲ್ಕು ಕಾರುಗಳ ಮೌಲ್ಯ ರೂ.20 ಕೋಟಿ ಇರಲಿದೆ ಎನ್ನಲಾಗಿದೆ.

ರಜನಿಕಾಂತ್ ಅವರಿಗೆ ಆಧ್ಯಾತ್ಮಿಕತೆಯಲ್ಲಿ ತುಂಬಾ ಆಸಕ್ತಿ.ಅವರು ಯೋಗ ಮತ್ತು ಧ್ಯಾನ ಮಾಡುತ್ತಾರೆ.ಅಲ್ಲದೆ ತಮ್ಮ ಪ್ರತಿಯೊಂದು ಚಿತ್ರ ಬಿಡುಗಡೆಗೂ ಮುನ್ನ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಾರೆ.ಅವರು ಆಗಾಗ ಹಿಮಾಲಯಕ್ಕೆ ಭೇಟಿ ನೀಡುತ್ತಾರೆ.ರಾಮಕೃಷ್ಣ ಪರಮಹಂಸ, ಸ್ವಾಮಿ ಸಚ್ಚಿದಾನಂದ, ರಾಘವೇಂದ್ರ, ಸ್ವಾಮಿ ಮಹಾವತಾರ್ ಬಾಬಾಜಿ ಮತ್ತು ರಮಣ ಮಹರ್ಷಿಗಳಂತಹ ಆಧ್ಯಾತ್ಮಿಕ ಗುರುಗಳಲ್ಲಿ ನಂಬಿಕೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 17 =
Remember me
