ನವದೆಹಲಿ:ಭಾರತ-ಚೀನಾ ನಡುವೆ ಗಡಿವಿವಾದಗಳು ತಿಳಿಯಾದ ಬೆನ್ನಲ್ಲೇ, ದೇಶದ ಆರ್ಥಿಕ ಹಿತದೃಷ್ಟಿಯಿಂದ ಚೀನಾದೊಂದಿಗೆ ವ್ಯಾಪಾರ ವಹಿವಾಟನ್ನು ಮುಂದುವರಿಸಬೇಕು ಎಂದು ಬಜಾಜ್ ಆಟೋ ಎಂಡಿ ರಾಜೀವ್ ಬಜಾಜ್ ಹೇಳಿದ್ದಾರೆ. ಚೀನಾದಷ್ಟು ದೊಡ್ಡ ದೇಶ ಮತ್ತು ದೊಡ್ಡ ಮಾರುಕಟ್ಟೆಯನ್ನು ಬಿಟ್ಟು ನಾವು ವ್ಯವಹಾರ ನಡೆಸಲು ಹೋಗುವುದು ನಷ್ಟದ ಲೆಕ್ಕಾಚಾರವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ವಿದೇಶಾಂಗ ಸಚಿವಾಲಯ ಮತ್ತು ಪುಣೆ ಅಂತರರಾಷ್ಟ್ರೀಯ ಕೇಂದ್ರ ಜಂಟಿಯಾಗಿ ಆಯೋಜಿಸಿದ್ದ ಮೂರು ದಿನಗಳ ವರ್ಚುವಲ್ ‘ಏಷ್ಯಾ ಆರ್ಥಿಕ ಸಂವಾದ 2021’ ರಲ್ಲಿ ‘ಬಿಲ್ಡಿಂಗ್ ರಿಲೆಯಬಲ್ ಸಪ್ಲೈ ಚೇನ್’ ಕುರಿತ ಗೋಷ್ಠಿಯಲ್ಲಿ ಬಜಾಜ್ ಶನಿವಾರ ಮಾತನಾಡುತ್ತಿದ್ದರು. “ನಾವು ಚೀನಾದೊಂದಿಗೆ ವ್ಯಾಪಾರ ಮಾಡುವುದನ್ನು ಮುಂದುವರಿಸಬೇಕು ಎಂದು ನಾನು ನಂಬಿದ್ದೇನೆ. ಯಾಕೆಂದರೆ ಅಷ್ಟು ದೊಡ್ಡ ದೇಶ, ಅಷ್ಟು ದೊಡ್ಡ ಮಾರುಕಟ್ಟೆಯನ್ನು ಹೊರಗಿಟ್ಟು ನಾವು ನಮ್ಮ ವ್ಯವಹಾರವನ್ನು ನಡೆಸಿದೆವೆಂದರೆ, ಕಾಲಾನಂತರದಲ್ಲಿ ನಾವು ಅಪೂರ್ಣವಾಗಿ ಕಾಣುತ್ತೇವೆ; ಮತ್ತು ಆ ಅನುಭವ ಕಳೆದುಕೊಂಡದ್ದರಿಂದ ನಮಗೆ ನಷ್ಟವಾದಂತೆ ಆಗುತ್ತದೆ” ಎಂದು ಬಜಾಜ್ ಹೇಳಿದರು.
ಇದನ್ನೂ ಓದಿ:ಬಿಗ್​ಬಾಸ್​ ಆರಂಭಕ್ಕೂ ಮುನ್ನವೇ ಸ್ಪರ್ಧಿಯೊಬ್ಬರ ಹೆಸರು ಬಹಿರಂಗ..!?
ಆಟೋ ಉದ್ಯಮಕ್ಕೆ ಬೇಕಾಗುವ ಹಲವಾರು ಬಿಡಿಉತ್ಪನ್ನಗಳ ಹಿನ್ನೆಲೆಯಲ್ಲಿ, ಮಾರುಕಟ್ಟೆಯಲ್ಲಿ ಪೂರೈಕೆಯ ಸರಪಳಿ ಉತ್ತಮವಾಗಿರಬೇಕು. ವಸ್ತುಗಳ ಪೂರೈಕೆಯಲ್ಲಿ ನಿರಂತರತೆ ಕಾಪಾಡಿಕೊಳ್ಳುವುದು ಮುಖ್ಯ ಎಂದ ಬಜಾಜ್, ಕೇಂದ್ರ ಸರಕಾರವು 2020 ಜೂನ್-ಜುಲೈ ಸಮಯದಲ್ಲಿ ಆಮದಿನ ಬಗ್ಗೆ, ವಿಶೇಷವಾಗಿ ಚೀನಾದಿಂದ ಮಾಡುವ ಆಮದುಗಳ ಬಗ್ಗೆ ಕಠಿಣ ನಿಲುವು ವಹಿಸಿದ್ದರ ಬಗ್ಗೆ ಪ್ರಸ್ತಾಪಿಸಿದರು. “ಈ ರೀತಿಯ ಕ್ರಮವು ಇನ್ನೊಬ್ಬರಿಗೆ ಶಿಕ್ಷೆ ನೀಡಲು ಹೋಗಿ ತಮಗೇ ತೊಂದರೆ ಮಾಡಿಕೊಳ್ಳುವಂಥ ಪರಿಸ್ಥಿತಿ ಎಂದು ನನಗನ್ನಿಸುತ್ತದೆ. ಯಾಕೆಂದರೆ, ಗ್ರಾಹಕರಿಗೆ ಅಂತಿಮ ಘಟ್ಟದ ಉತ್ಪನ್ನವನ್ನು ನೀಡಲು ಅಗತ್ಯವಾದ, ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದ, ಕಾಂಪೊನೆಂಟ್​ಗಳನ್ನು ಹೇಗೆ ಪಡೆದುಕೊಳ್ಳುತ್ತೀರಿ ಎಂಬುದು ಪ್ರಶ್ನೆಯಾಗುತ್ತದೆ” ಎಂದು ವಿವರಿಸಿದರು.
ಬಜಾಜ್ ಕಂಪೆನಿ ಭೂಮಿ, ಕಾರ್ಮಿಕರು, ವಿದ್ಯುತ್, ಲಾಜಿಸ್ಟಿಕ್ಸ್ ಮತ್ತು ಕಾನೂನು ವ್ಯವಸ್ಥೆ – ಈ ಐದು ಮೆಟ್ರಿಕ್‌ಗಳನ್ನು ಆಧರಿಸಿ, ಭಾರತ, ವಿಯೆಟ್ನಾಂ, ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಮಲೇಷ್ಯಾವನ್ನು ಸಮಗ್ರ ಹೋಲಿಕೆ ಮಾಡುವ ಅಧ್ಯಯನ ನಡೆಸಿತು. ಅದರ ಪ್ರಕಾರ ಭಾರತದಲ್ಲಿ ಎದುರಿಸಬೇಕಾಗುವ ಪರಿಸ್ಥಿತಿಗಳಿಗೆ ಹೋಲಿಸಿದರೆ, ವ್ಯವಹಾರವನ್ನು ನಡೆಸುವ ಸುಲಭತೆ ದೃಷ್ಟಿಯಿಂದ ಆಸಿಯಾನ್ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುವುದು ಭಾರತದಲ್ಲಿ ಕಾರ್ಯ ನಿರ್ವಹಿಸುವುದಕ್ಕಿಂತ ಹೆಚ್ಚು ಸುಲಭವಾಗಿದೆ ಎಂದು ಬಜಾಜ್ ಹೇಳಿದರು.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

“ಮೋದಿಗೆ ತಮಿಳುನಾಡು ಟಿವಿ ಥರ… ರಿಮೋಟ್​ನಿಂದ ಸಿಎಂನ ಕಂಟ್ರೋಲ್ ಮಾಡ್ತಾರೆ !”
2ನೇ ಹಂತದ ಕರೊನಾ ಲಸಿಕೆ ಅಭಿಯಾನ : ಇಲ್ಲಿದೆ, ನಿಮ್ಮ ಪ್ರಶ್ನೆಗಳಿಗೆ ಉತ್ತರ
ಭಾರತೀಯ ಆಟಿಕೆಗಳಾದ ಬುಗುರಿ, ಕ್ಯಾಟರ್​ಬಿಲ್ಲು ವಿಜ್ಞಾನ ಕಲಿಸುತ್ತವೆ : ಪ್ರಧಾನಿ ಮೋದಿ


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 20 =
Remember me
