ನವದೆಹಲಿ: ರಾಜೀವ್ ಗಾಂಧಿ ಪ್ರತಿಷ್ಠಾನಕ್ಕೆ ಚೀನಾದ ರಾಯಭಾರ ಕಚೇರಿಯಿಂದ ದೇಣಿಗೆ ಸಂದಾಯವಾಗಿದೆ ಎಂದು ಬಿಜೆಪಿ ಆರೋಪಿಸಿದ ಬೆನ್ನಲ್ಲೇ ಬಳಿಕ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕುಟುಂಬಕ್ಕೆ ಸಂಬಂಧಿಸಿದ ಮೂರು ಟ್ರಸ್ಟ್​ಗಳ ವಿರುದ್ಧ ಕೇಂದ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ರಾಜೀವ್ ಗಾಂಧಿ ಪ್ರತಿಷ್ಠಾನ, ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್ ಮತ್ತು ಇಂದಿರಾ ಗಾಂಧಿ ಸ್ಮಾರಕ ಟ್ರಸ್ಟ್​ಗಳಿಗೆ ವಿವಿಧ ಮೂಲಗಳಿಂದ ಹರಿದುಬಂದಿರುವ ದೇಣಿಗೆಗಳ ತನಿಖೆ ನಡೆಸುವುದಕ್ಕೆ ಕೇಂದ್ರ ಅಂತರ ಸಚಿವಾಲಯ ಸಮಿತಿಯೊಂದನ್ನು ರಚಿಸಿದೆ.
ಸೋನಿಯಾ ಗಾಂಧಿ ಅಧ್ಯಕ್ಷರಾಗಿರುವ ಈ ಮೂರೂ ಟ್ರಸ್ಟ್​ಗಳ ವಿರುದ್ಧ ಆದಾಯ ತೆರಿಗೆ ವಂಚನೆ ಜತೆಗೆ ವಿದೇಶಿ ದೇಣಿಗೆ ನಿಯಮ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಟ್ವೀಟ್​ನಲ್ಲಿ ತಿಳಿಸಿದೆ. ಚೀನಾ ಜತೆಗೆ ಬಿಕ್ಕಟ್ಟು ಆರಂಭವಾದಾಗಿನಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಜಟಾಪಟಿ ನಡೆಯುತ್ತಿದೆ. ಚೀನಾದ ಕಂಪನಿಗಳಿಂದ ಪಿಎಂ ಕೇರ್ಸ್​ಗೆ ದೇಣಿಗೆ ಪಡೆಯಲಾಗಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದರೆ, ಚೀನಾ ರಾಯಭಾರ ಕಚೇರಿಯಿಂದ ಗಾಂಧಿ ಟ್ರಸ್ಟ್​ಗಳಿಗೆ ದೇಣಿಗೆ ಪಡೆಯಲಾಗಿದೆ ಮತ್ತು ಯುಪಿಎ ಆಡಳಿತದ ಅವಧಿಯಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದಲೂ ಅಪಾರ ಪ್ರಮಾಣದ ಹಣ ಈ ಟ್ರಸ್ಟ್​ಗಳಿಗೆ ಹರಿದುಬಂದಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ಮೂರೂ ಟ್ರಸ್ಟ್​ಗಳಲ್ಲಿ ರಾಹುಲ್ ಗಾಂಧಿ ಸದಸ್ಯರಾಗಿದ್ದರೆ, ರಾಜೀವ್​ಗಾಂಧಿ ಪ್ರತಿಷ್ಠಾನದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಕೂಡ ಸದಸ್ಯರಾಗಿದ್ದಾರೆ.
ಬಿಜೆಪಿ ವಾದವೇನು:ಸಾರ್ವಜನಿಕವಾಗಿ ಈ ಟ್ರಸ್ಟ್​ಗಳ ವಿರುದ್ಧ ಆರೋಪ ಕೇಳಿಬಂದಿದ್ದರಿಂದ ತನಿಖೆಗೆ ನಿರ್ಧರಿಸಲಾಗಿದೆ.
ಕಾಂಗ್ರೆಸ್ ನಿಲುವೇನು?:ಮೂರೂ ಟ್ರಸ್ಟ್ ಗಳ ಲೆಕ್ಕಪತ್ರ ಆಯಾ ಆರ್ಥಿಕ ವರ್ಷದಲ್ಲೇ ಪರಿಶೋಧನೆಗೆ ಒಳಪಟ್ಟಿದ್ದು ಬಿಜೆಪಿ ದ್ವೇಷ ಸಾಧಿಸುತ್ತಿದೆ.
ಬಿಜೆಪಿ ಹೇಳುವುದೇನು?:ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರ ಆರೋಪಗಳುಯುಪಿಎ ಆಡಳಿತ ಅವಧಿಯಲ್ಲಿ ಪ್ರಧಾನಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದ್ದ ದೇಣಿಗೆ ರಾಜೀವ್ ಗಾಂಧಿ ಟ್ರಸ್ಟ್​ಗೆ ವರ್ಗಾವಣೆ ಆಗಿತ್ತುಇದರ ಜತೆಗೆ ಎಸ್​ಬಿಐ, ಜಿಎಐಎಲ್, ಗೃಹ ಇಲಾಖೆ, ಆರೋಗ್ಯ ಇಲಾಖೆಗಳಿಂದಲೂ ರಾಜೀವ್ ಗಾಂಧಿ ಫೌಂಡೇಶನ್​ಗೆ ಹಣ ನೀಡಿದ್ದ ಪಟ್ಟಿ ಬಿಡುಗಡೆಪ್ರಧಾನಿ ಪರಿಹಾರ ನಿಧಿಗೆ ಜನರು ನೀಡಿದ್ದ ಹಣವನ್ನು ಸ್ವಂತ ಟ್ರಸ್ಟ್​ಗೆ ಬಳಸಿಕೊಂಡಿದ್ದು ಸೋನಿಯಾ ಜನತೆಗೆ ಮಾಡಿದ ದ್ರೋಹವಲ್ಲವೇ?2005-06ರಲ್ಲಿ ಚೀನಾ ರಾಯಭಾರ ಕಚೇರಿಯಿಂದ ದೇಣಿಗೆ ರೂಪದಲ್ಲಿ ಬಂದ ಲಂಚದ ಋಣ ಸಂದಾಯಕ್ಕಾಗಿಯೇ ಚೀನಾ ಜತೆಗೆ ಮುಕ್ತ ವಾಣಿಜ್ಯ ಒಪ್ಪಂದಕ್ಕೆ ಈ ಟ್ರಸ್ಟ್ ಗಳು ಶಿಫಾರಸು ಮಾಡಿದ್ದವೇ?
ಯಾವ ನಿಯಮದಡಿ ತನಿಖೆ?:ಮೂರೂ ಟ್ರಸ್ಟ್​ಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್​ಎ), ಆದಾಯ ತೆರಿಗೆ ಕಾಯ್ದೆ, ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ ಅಡಿಯಲ್ಲಿ ತನಿಖೆ ನಡೆಯಲಿದೆ . ಜಾರಿ ನಿರ್ದೇಶನಾಲಯ (ಇ.ಡಿ) ವಿಶೇಷ ನಿರ್ದೇಶಕರು ಸಮನ್ವಯ ಸಮಿತಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಗೃಹ ಸಚಿವಾಲಯ ಹೇಳಿದೆ.
ಸರ್ಕಾರದ ಕ್ರಮ ಹೇಡಿತನ ಮತ್ತು ಬೇಟೆಯಾಡುವ ಪ್ರವೃತ್ತಿಯದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಡೀ ಜಗತ್ತು ತಮ್ಮಂತೆ ಇದೆ ಎಂದು ನಂಬಿದ್ದಾರೆ. ಯಾರನ್ನು ಬೇಕಾದರೂ ಖರೀದಿಸಬಹುದು ಅಥವಾ ಬೆದರಿಸಬಹುದು ಎಂದುಕೊಂಡಿದ್ದಾರೆ. ಆದರೆ, ಸತ್ಯಕ್ಕೆ ಹೋರಾಡುವವರು ಬಿಕರಿಯಾಗುವುದಿಲ್ಲ ಮತ್ತು ಯಾವ ಬೆದರಿಕೆಗೂ ಜಗ್ಗುವುದಿಲ್ಲ ಎಂಬುದು ಅವರಿಗೆ ಅರ್ಥವಾದಂತೆ ಕಾಣುತ್ತಿಲ್ಲ.| ರಾಹುಲ್ ಗಾಂಧಿಕಾಂಗ್ರೆಸ್ ನಾಯಕ
ಪ್ರಮುಖ ಆರೋಪಗಳೇನು?ನೈಸರ್ಗಿಕ ವಿಕೋಪ, ದುರಂತ, ಅಪಘಾತಗಳ ಸಂತ್ರಸ್ತರು, ಗಂಭೀರ ಅನಾರೋಗ್ಯದಿಂದ ಬಳಲುತ್ತಿರುವ ಬಡವರಿಗೆ ಪಿಎಂಎನ್​ಆರ್​ಎಫ್ ನೆರವು ಮೀಸಲು, ಆದರೆ ಇದನ್ನು ಕಾಂಗ್ರೆಸ್ ಪಕ್ಷದ ಟ್ರಸ್ಟ್​ಗಳಿಗೆ ಬಳಸಲಾಗಿದೆ.2005ರಲ್ಲಿ ಚೀನಾದ ರಾಯಭಾರಿ ಕಚೇರಿ ಯಿಂದಲೂ ಗಾಂಧಿ ಟ್ರಸ್ಟ್​ಗಳು ದೇಣಿಗೆ ಪಡೆದಿವೆ1991ರ ಬಜೆಟ್​ನಲ್ಲಿ ಹಣಕಾಸು ಸಚಿವ ಮನ ಮೋಹನ್ ಸಿಂಗ್, ರಾಜೀವ್ ಗಾಂಧಿ ಟ್ರಸ್ಟ್​ಗೆ 100 ಕೋಟಿ ರೂ. ಅನುದಾನ ಘೋಷಿಸಿದ್ದರು.
ವಿವಾದಾತ್ಮಕ ಧರ್ಮ ಪ್ರಚಾರಕ ಜಾಕಿರ್ ನಾಯ್್ಕ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ 2011ರಲ್ಲಿ 50 ಲಕ್ಷ ರೂ.ಗಳನ್ನು ರಾಜೀವ್ ಗಾಂಧಿ ಚಾರಿಟಬಲ್ ಟ್ರಸ್ಟ್​ಗೆ ಚೆಕ್ ಮೂಲಕ ನೀಡಿತ್ತು. ಇದು ವಿವಾದಕ್ಕೆ ಆಸ್ಪದ ಮಾಡಿಕೊಟ್ಟ ನಂತರ ಈ ಮೊತ್ತವನ್ನು ಟ್ರಸ್ಟ್ 2016ರ ಜುಲೈನಲ್ಲಿ ನಾಯ್್ಕ ಎನ್​ಜಿಒಗೆ ಹಿಂದಿರುಗಿಸಿತು.
ಇದನ್ನೂ ಓದಿ:ಚೀನಾ ಆಮದು ದ್ವಾರ ಬಂದ್?: ವಾಣಿಜ್ಯ ಸಚಿವಾಲಯದ ಸಲಹೆ ಕೋರಿದ ಪಿಎಂಒ
ಬಿಜೆಪಿ ಆರೋಪವೇನು:ರಾಷ್ಟ್ರೀಯ ಹಿತಾಸಕ್ತಿಯ ಲವಲೇಶವೂ ಇಲ್ಲದ ಅಧ್ಯಯನವೊಂದನ್ನು ಕೈಗೊಳ್ಳುವ ಹೆಸರಿನಲ್ಲಿ 2005-06ರಲ್ಲಿ ರಾಜೀವ್ ಗಾಂಧಿ ಪ್ರತಿಷ್ಠಾನ ಚೀನಾ ಸರ್ಕಾರ ಮತ್ತು ರಾಯಭಾರ ಕಚೇರಿಯಿಂದ 3 ಲಕ್ಷ ಡಾಲರ್ ದೇಣಿಗೆ ಸ್ವೀಕರಿಸಿದೆ ಎಂದು ಜೂ.25ರಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಆರೋಪಿಸಿದ್ದರು. ಚೀನಾದಿಂದ ಹಣ ಪಡೆದಿರುವ ಕಾಂಗ್ರೆಸ್​ಗೆ ಗಲ್ವಾನ್ ಗಡಿ ಬಿಕ್ಕಟ್ಟು ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವುದಕ್ಕೆ ಯಾವುದೇ ನೈತಿಕ ಹಕ್ಕಿಲ್ಲ. ಇವರು ಚೀನಾದಿಂದ ಹಣ ಪಡೆದು ನಮ್ಮ ದೇಶದ ವಿರುದ್ಧವೇ ಮಾತನಾಡುತ್ತಾರೆ. ಇವರು 2005-06ರಲ್ಲಿ ಚೀನಾದಿಂದ ದೊಡ್ಡ ಮೊತ್ತ ಪಡೆದಿದ್ದಕ್ಕೆ ಪ್ರತಿಯಾಗಿ ಯಾವ ಅಧ್ಯಯನ ನಡೆಸಿದ್ದರು. ಅದರಲ್ಲಿ ಯಾವ ರಾಷ್ಟ್ರೀಯ ಹಿತಾಸಕ್ತಿಯಿತ್ತು ಎಂದು ಜನ ತಿಳಿಯಲು ಬಯಸುತ್ತಾರೆ ಎಂದು ಜನಸಂವಾದ ವರ್ಚುವಲ್ ರ‍್ಯಾಲಿ ಉದ್ದೇಶಿಸಿ ಮಾತನಾಡುವಾಗ ನಡ್ಡಾ ಆರೋಪಿಸಿದ್ದರು.
ಜಯರಾಜ್, ಬೆನಿಕ್ಸ್ ಪ್ರಕರಣ ಸಂಬಂಧ ಸಿಬಿಐನಿಂದ 2 ಎಫ್​ಐಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eleven =
Remember me
