ಪುಣೆ:ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿದ ಜಾವೆಲಿನ್ ಥ್ರೋ ತಾರೆ ನೀರಜ್ ಚೋಪ್ರಾಗೆ ಭಾರತೀಯ ಸೇನೆಯ ವತಿಯಿಂದ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಶುಕ್ರವಾರ ಸನ್ಮಾನಿಸಿದರು. ಭೂಸೇನೆಯಲ್ಲಿ ಸುಬೇದಾರ್ ಆಗಿರುವ 23 ವರ್ಷದ ನೀರಜ್ ಜತೆಗೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಇತರ ಸೈನಿಕರನ್ನೂ ಆರ್ಮಿ ಸ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ (ಎಎಸ್‌ಐ) ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಎಎಸ್‌ಐ ಕ್ರೀಡಾಂಗಣವನ್ನು ‘ನೀರಜ್ ಚೋಪ್ರಾ ಸ್ಟೇಡಿಯಂ’ ಎಂದು ಮರುನಾಮಕರಣಗೊಳಿಸಲಾಯಿತು. ಸೇನೆಯ ಈ ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು ಇಟ್ಟಿರುವುದು ಅವರಿಗೆ ನೀಡಲಾದ ವಿಶೇಷ ಗೌರವವೂ ಆಗಿದೆ. ಇದೇ ವೇಳೆ ಒಲಿಂಪಿಯನ್ ಸೈನಿಕರ ಸಹಿ ಇದ್ದ ಶಾಲು ಒಂದನ್ನು ರಾಜ್‌ನಾಥ್ ಸಿಂಗ್ ಅವರಿಗೆ ಉಡುಗೊರೆ ನೀಡಲಾಯಿತು.
ಇದನ್ನೂ ಓದಿ:ಜುವೆಂಟಸ್‌ ತಂಡಕ್ಕೆ ಕ್ರಿಶ್ಚಿಯಾನೊ ರೊನಾಲ್ಡೊ ಗುಡ್‌ಬೈ, ಹೊಸ ಕ್ಲಬ್ ಯಾವುದು?
ಸನ್ಮಾನ ಸ್ವೀಕರಿಸಿದ ಇತರ ಒಲಿಂಪಿಯನ್ ಸೈನಿಕರೆಂದರೆ ತರುಣ್‌ದೀಪ್ ರೈ (ಆರ್ಚರಿ), ಪ್ರವೀಣ್ ಜಾಧವ್ (ಆರ್ಚರಿ), ಅಮಿತ್ ಪಾಂಗಲ್ (ಬಾಕ್ಸಿಂಗ್), ಮನೀಷ್ ಕೌಶಿಕ್ (ಬಾಕ್ಸಿಂಗ್), ಸತೀಶ್ ಕುಮಾರ್ (ಬಾಕ್ಸಿಂಗ್), ದೀಪಕ್ ಪೂನಿಯಾ (ಕುಸ್ತಿ), ಅರ್ಜುನ್ ಲಾಲ್ ಜಾಟ್, ಅರವಿಂದ್ ಸಿಂಗ್ (ರೋಯಿಂಗ್), ವಿಷ್ಣು ಸರವಣನ್ (ಸೈಲಿಂಗ್). ತರಬೇತುದಾರರಾದ ಸಿಎ ಕುಟ್ಟಪ್ಪ (ಬಾಕ್ಸಿಂಗ್ ಕೋಚ್), ಚೋಟೆಲಾಲ್ ಯಾದವ್ (ಮೇರಿ ಕೋಮ್ ಬಾಕ್ಸಿಂಗ್ ಕೋಚ್) ಅವರನ್ನೂ ಸನ್ಮಾನಿಸಲಾಯಿತು. ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಉಪಸ್ಥಿತರಿದ್ದರು.
Felicitated Subedar Neeraj Chopra at the Army Sports Institute in Pune today for his amazing performance at Tokyo Olympics. He made the country proud by winning the Olympics Gold Medal. Now, the ASI has renamed the Stadium after him. Wishing him success in his future endeavours.pic.twitter.com/N9fbL8vOqN
— Rajnath Singh (@rajnathsingh)August 27, 2021

‘ಕ್ರೀಡೆಗೆ ಪ್ರೋತ್ಸಾಹ ನೀಡಲು ಸರ್ಕಾರ ಎಲ್ಲವನ್ನೂ ಮಾಡಲಿದೆ. ಕ್ರೀಡಾ ಪ್ರೋತ್ಸಾಹಕ್ಕೆ ಸರ್ಕಾರ ಮತ್ತು ಸೇನೆ ಬದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಕ್ರೀಡೆ ಮತ್ತು ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಭಾರತ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಅವಕಾಶವನ್ನು ಯಾವಾಗ ಪಡೆಯುತ್ತದೆ ಎಂಬುದನ್ನು ನಾನು ಕಾಯುತ್ತಿರುವೆ’ ಎಂದು ರಾಜ್‌ನಾಥ್ ಸಿಂಗ್ ಹೇಳಿದರು.
Delighted to felicitate all the Armed Forces personnel who participated in the Tokyo Olympics. My good wishes to them for a successful career ahead.pic.twitter.com/lOJT0eQmVy
— Rajnath Singh (@rajnathsingh)August 27, 2021

ನೀರಜ್ ನಡೆಗೆ ಪ್ರಶಂಸೆಪಾಕ್ ಸ್ಪರ್ಧಿ ತಮ್ಮ ಜಾವೆಲಿನ್ ಬಳಸಿದ್ದಕ್ಕೆ ವಿವಾದ, ಧರ್ಮ-ದ್ವೇಷದ ಬಣ್ಣ ಹಚ್ಚಬೇಡಿ ಎನ್ನುವ ಮೂಲಕ ಕ್ರೀಡಾಸ್ಫೂರ್ತಿಯನ್ನು ಮೆರೆದ ನೀರಜ್ ಚೋಪ್ರಾಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪಾಕ್ ವಿರುದ್ಧ ದ್ವೇಷಕಾರಲು ನನ್ನ ಹೆಸರು ಉಪಯೋಗಿಸಬೇಡಿ, ಕ್ರೀಡೆ ನಮಗೆ ಒಗ್ಗಟ್ಟು ಕಲಿಸಿದೆ ಎಂಬ ನೀರಜ್ ಮಾತಿಗೂ ಪ್ರಶಂಸೆ ವ್ಯಕ್ತವಾಗಿದೆ. ಸ್ಪಷ್ಟನೆ ನೀಡುವ ಮೂಲಕ ಸತ್ಯಕ್ಕೆ ನಿಷ್ಠೆ ತೋರಿರುವ ಅವರ ಪ್ರಾಮಾಣಿಕತೆಗೂ ‘ನಿಜವಾದ ಕ್ರೀಡಾಪಟು’ ಎಂಬ ಹೊಗಳಿಕೆ ಕೇಳಿಬಂದಿದೆ.
ಮಹಿಳಾ ಟಿ20 ಪಂದ್ಯದಲ್ಲಿ 20 ಓವರ್ ಪೂರ್ತಿ ಆಡಿ 32 ರನ್ ಗಳಿಸಿದ ಜರ್ಮನಿ!

VIDEO | ಪಾಕ್ ಸ್ಪರ್ಧಿ ಜಾವೆಲಿನ್ ಬಳಸಿದ ವಿವಾದಕ್ಕೆ ನೀರಜ್ ಚೋಪ್ರಾ ಸ್ಪಷ್ಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
