ನವದೆಹಲಿ:ದೆಹಲಿಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಎಲ್ಲ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಪ್ರಚಾರದಲ್ಲಿ ಭಾಗಿಯಾಗಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ತಾವು ದ್ವೇಷ ರಾಜಕಾರಣ ಮೂಲಕ ಚುನಾವಣೆ ಗೆಲ್ಲುವುದಿಲ್ಲ ಎಂದು ತಿಳಿಸಿದ್ದಾರೆ.ನಿನ್ನೆ (ಜ. 29) ಆದರ್ಶ ನಗರದಲ್ಲಿ ಪ್ರಚಾರ ಸಮಾವೇಶ ನಡೆದಿದ್ದು, ಅದರಲ್ಲಿ ಮುಖ್ಯ ಪ್ರಚಾರಕರಾಗಿ ರಾಜನಾಥ್​ ಸಿಂಗ್​ ಆಗಮಿಸಿದ್ದರು. ಸಮಾವೇಶದಲ್ಲಿ ಮಾತನಾಡಿದ ಅವರು, “ನಮ್ಮ ಪಕ್ಷ ದ್ವೇಷ ರಾಜಕಾರಣವನ್ನು ಮಾಡುವುದಿಲ್ಲ. ಹಾಗೆ ಮಾಡಿ ಗೆಲ್ಲುವ ಗೆಲುವು ನಮಗೆ ಬೇಡ.” ಎಂದು ಹೇಳಿದರು.ಸಿಎಎ ಕುರಿತಾಗಿ ಮಾತನಾಡಿದ ಸಿಂಗ್​, “ದೆಹಲಿಯ ಕೆಲ ಪ್ರದೇಶಗಳಲ್ಲಿ ಸಿಎಎ ವಿರೋಧದ ಪ್ರತಿಭಟನೆ ಜೋರಾಗಿದೆ. ಆದರೆ ಸಿಎಎ ಕುರಿತಾಗಿ ಮುಸ್ಲಿಂ ಬಾಂಧವರು ಹೆದರುವುದು ಬೇಡ. ಮುಸ್ಲಿಂ ಧರ್ಮದವರ ಪೌರತ್ವ ತೆಗದುಹಾಕಿ ಅವರನ್ನು ದೇಶದಿಂದ ಹೊರಗಟ್ಟಲಾಗುತ್ತದೆ ಎಂದು ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಆ ರೀತಿಯಲ್ಲಿ ಆಗುವುದಿಲ್ಲ. ನೀವು ನಮಗೆ ಮತ ನೀಡದಿದ್ದರೂ ತೊಂದರೆ ಇಲ್ಲ, ಆದರೆ ನಮ್ಮ ಸಮಗ್ರತೆ ಬಗ್ಗೆ ಅನುಮಾನಿಸಬೇಡಿ. ದೇಶದ ರಕ್ಷಣಾ ಸಚಿವನಾಗಿ ದೇಶದ ಪ್ರತಿಯೊಬ್ಬ ಮುಸ್ಲಿಂ ಬಾಂಧವನೂ ಸಹ ದೇಶದ ಪ್ರಜೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಸರ್ಕಾರಕ್ಕೆ ಆ ರೀತಿಯ ದುರುದ್ದೇಶ ಇದ್ದಿದ್ದರೆ ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಎನ್ನುವ ಘೋಷಣೆಯನ್ನು ಕೂಗುತ್ತಿರಲಿಲ್ಲ” ಎಂದು ಹೇಳಿದರು.70 ವಿಧಾನಸಭಾ ಕ್ಷೇತ್ರಗಳಿರುವ ದೆಹಲಿಯಲ್ಲಿ ಫೆಬ್ರವರಿ 8ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
