ನವದೆಹಲಿ:ಪ್ರಜಾಪ್ರಭುತ್ವವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಸಂಸತ್ತಿನಲ್ಲಿ ಯಾವುದೇ ಸದಸ್ಯರು ಮಾತನಾಡುವಾಗ ನಾವು ಮಧ್ಯಪ್ರವೇಶಿಸಬಾರದು ಮತ್ತು ಅಡ್ಡಿಪಡಿಸಬಾರದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷ ಸಭೆಯಲ್ಲಿ ಮನವಿ ಮಾಡಿದರು ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ(ಜುಲೈ 21) ಹೇಳಿದ್ದಾರೆ.
ಇದನ್ನು ಓದಿ:ಕೇರಳದಲ್ಲಿ ನಿಫಾ ವೈರಸ್ ಸೋಂಕಿ​ಗೆ ಬಾಲಕ ಬಲಿ; ಎಚ್ಚರದಿಂದಿರುವಂತೆ ಸರ್ಕಾರದಿಂದ ಸೂಚನೆ
ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರಪತಿಗಳಿಗೆ ಧನ್ಯವಾದ ನಿರ್ಣಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅಡ್ಡಿಪಡಿಸಲಾಯಿತು. ಇದು ಸಂಸತ್ತಿನ ಸಂಪ್ರದಾಯಕ್ಕೆ ಸರಿಹೊಂದುವುದಿಲ್ಲ. ಪ್ರಧಾನಿ ಮಾತನಾಡುವಾಗ ಸದನ ಮತ್ತು ದೇಶ ಕೇಳಬೇಕು. ಅಲ್ಲದೆ ಯಾವುದೇ ಸಂಸದರು ಮಾತನಾಡುವಾಗ ಮಧ್ಯಪ್ರವೇಶಿಸದೆ ಅವರ ಮಾತನ್ನು ಕೇಳಬೇಕೆಂದು ಸಲಹೆ ನೀಡಿದರು ಎಂದು ಅವರು ತಿಳಿಸಿದರು.
ಸಂಸತ್ತಿನ ಕಲಾಪಕ್ಕೆ ಒಮ್ಮತ ಮೂಡಿಸುವ ವಿಚಾರವಾಗಿ ಈ ಸಭೆ ನಡೆದಿದೆ. ಕೇಂದ್ರ ಸಚಿವ ರಾಜನಾಥ್​​ ಸಿಂಗ್​​ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸಭೆಯನ್ನು ಆಯೋಜಿಸಿದ್ದರು. ಸಭೆಯಲ್ಲಿ ಕಾಂಗ್ರೆಸ್‌ನ ಜೈರಾಮ್ ರಮೇಶ್ ಮತ್ತು ಕೆ.ಸುರೇಶ್, ಎಐಎಂಐಎಂನ ಅಸಾದುದ್ದೀನ್ ಓವೈಸಿ, ಆರ್‌ಜೆಡಿಯ ಅಭಯ್ ಕುಶ್ವಾಹ, ಜೆಡಿಯು ಸಂಜಯ್ ಝಾ, ಎಎಪಿಯ ಸಂಜಯ್ ಸಿಂಗ್, ಎಸ್‌ಪಿ ನಾಯಕ ರಾಮಗೋಪಾಲ್ ಯಾದವ್ ಮತ್ತು ಎನ್‌ಸಿಪಿಯ ಪ್ರಫುಲ್ ಪಟೇಲ್ ಉಪಸ್ಥಿತರಿದ್ದರು.
ಬಿಜೆಪಿ ಸೇರಿದಂತೆ ಒಟ್ಟು 44 ರಾಜಕೀಯ ಪಕ್ಷಗಳ 55 ನಾಯಕರು ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ್ದರು. ಬಜೆಟ್ ಅಧಿವೇಶನಕ್ಕೆ ಸಂಬಂಧಿಸಿದಂತೆ ಹಲವು ಉತ್ತಮ ಸಲಹೆಗಳನ್ನೂ ನಾಯಕರು ನೀಡಿದ್ದಾರೆ. ಸಭೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಸಮಸ್ಯೆಗಳನ್ನು ಮಂಡಿಸಿವೆ. ಉಭಯ ಸದನಗಳ ಬಿಎಸಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಎಲ್ಲ ವಿಷಯಗಳ ಕುರಿತು ಚರ್ಚಿಸಿ, ಲೋಕಸಭೆಯಲ್ಲಿ ಸ್ಪೀಕರ್ ಮತ್ತು ರಾಜ್ಯಸಭೆಯಲ್ಲಿ ಸಭಾಪತಿಯೊಂದಿಗೆ ಚರ್ಚಿಸಿ, ಸದನದಲ್ಲಿ ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಕಿರಣ್ ರಿಜಿಜು ತಿಳಿಸಿದ್ದಾರೆ. (ಏಜೆನ್ಸೀಸ್​​)
ಬಾಂಗ್ಲಾದಲ್ಲಿ ಹಿಂಸಾತ್ಮಕ ಪ್ರತಿಭಟನೆ; ಶೂಟ್​​ ಆನ್​​ ಸೈಟ್​​ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
