ವಿಶಾಖಪಟ್ಟಣಂ (ಆಂಧ್ರಪ್ರದೇಶ) :ಕಡಲ್ಗಳ್ಳತನ ಮತ್ತು ಕಳ್ಳಸಾಗಣೆಯನ್ನು ಯಾವುದೇ ಸಂದರ್ಭದಲ್ಲೂ ಸಹಿಸಲಾಗುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶನಿವಾರ ವಿಶಾಖಪಟ್ಟಣದಲ್ಲಿ ಹೇಳಿದರು, ಇದು ‘ನವ ಭಾರತ’ದ ಭರವಸೆಯಾಗಿದೆ ಎಂದೂ ಅವರು ತಿಳಿಸಿದರು.
ಇದನ್ನೂ ಓದಿ:ಷೇರು ಮಾರುಕಟ್ಟೆಯಲ್ಲಿ ಗೂಳಿ ಗುಟುರು: ಇಂಟ್ರಾ ಡೇ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ನಿಫ್ಟಿ
ವಿಶಾಖಪಟ್ಟಣಂನ ನೌಕಾ ನೌಕಾನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಮೊದಲ ಸರ್ವೇ ವೆಸೆಲ್ ಲಾರ್ಜ್ (ಎಸ್‌ವಿಎಲ್) ಹಡಗು ಐಎನ್‌ಎಸ್ ಸಂಧಾಯಕ್‌ ಅನ್ನು ಭಾರತೀಯ ನೌಕಾಪಡೆಗೆ ನಿಯೋಜಿಸಿದ ಬಳಿಕ ಮಾತನಾಡಿದರು.
ಹಿಂದೂ ಮಹಾಸಾಗರ ಮತ್ತು ಇಂಡೋ-ಪೆಸಿಫಿಕ್ ವಲಯದ ಭದ್ರತೆಗೆ ಆದ್ಯತೆ ನೀಡಲಾಗಿದೆ. ಭದ್ರತೆ ಖಾತ್ರಿಪಡಿಸುವ ವಿಷಯದಲ್ಲಿ ಹಿಂದಡಿ ಇಡುವ ಮಾತೇ ಇಲ್ಲ. ನೌಕಾಪಡೆಯ ಮೊದಲ ಪ್ರತಿಸ್ಪಂದಕ ಇದಾಗಿದ್ದು, ನೌಕಾಪಡೆಯ ಶಕ್ತಿ ಮತ್ತು ದೃಢತೆ ಇದಾಗಿದೆ ಎಂದು ಅವರು ಹೇಳಿದರು.
“ಜಾಗತಿಕ ವ್ಯಾಪಾರಕ್ಕೆ ಬಂದಾಗ, ಹಿಂದೂ ಮಹಾಸಾಗರದ ಪ್ರದೇಶವನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಲಾಗುತ್ತದೆ. ಅಡೆನ್ ಗಲ್ಫ್ ಮತ್ತು ಗಿನಿಯಾ ಕೊಲ್ಲಿಗಳಂತಹ ಅನೇಕ ಚಾಕ್ ಪಾಯಿಂಟ್‌ಗಳು ಹಿಂದು ಮಹಾಸಾಗರದಲ್ಲಿವೆ. ದೊಡ್ಡ ಪ್ರಮಾಣದ ಅಂತರರಾಷ್ಟ್ರೀಯ ವ್ಯಾಪಾರವು ಇಲ್ಲಿ ನಡೆಯುತ್ತದೆ. ಈ ಪ್ರದೇಶಗಳು ಈ ಚೋಕ್ ಪಾಯಿಂಟ್‌ಗಳು ಬಹು ಬೆದರಿಕೆಗಳನ್ನು ಎದುರಿಸುತ್ತಿವೆ, ಅದರಲ್ಲಿ ದೊಡ್ಡದು ಕಡಲ್ಗಳ್ಳರಿಂದ ಆಗಿದೆ” ಎಂದು ರಕ್ಷಣಾ ಸಚಿವರು ಹೇಳಿದರು.ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್, ನೌಕಾಪಡೆ ಮುಖ್ಯಸ್ಥ ವೈಸ್ ಅಡ್ಮಿರಲ್ ರಾಜೇಶ್ ಪೆಂಡಾರ್ಕ ಭಾಗವಹಿಸಿದ್ದರು. ಸಂಧಾಯಕ್ ಹಡಗಿನ ಕಮಾಂಡಿಂಗ್ ಆಫೀಸರ್ ಕ್ಯಾಪ್ಟನ್ ಆರ್.ಎಂ. ಥಾಮಸ್ ಕಾರ್ಯನಿರ್ವಹಿಸಲಿದ್ದಾರೆ.
“ನಾವು ಏನೇ ಆದರೂ, ಎಷ್ಟೇ ವೆಚ್ಚವಾದರೂ, ನ್ಯಾವಿಗೇಷನ್, ವ್ಯಾಪಾರ ಮತ್ತು ವಾಣಿಜ್ಯದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕೆಂದು ಬಯಸುತ್ತೇವೆ. ವಿವಿಧ ದೇಶಗಳನ್ನು ಒಳಗೊಂಡ ಅಡೆತಡೆಯಿಲ್ಲದ ವ್ಯಾಪಾರ ಇರಬೇಕು. ನಮ್ಮ ಬೆಳೆಯುತ್ತಿರುವ ನೌಕಾ ಶಕ್ತಿ ಮತ್ತು ಸಮುದ್ರದ ಪ್ರಭಾವವು ಈ ಪ್ರದೇಶದಲ್ಲಿ ಮಾದಕ ದ್ರವ್ಯ ಮತ್ತು ಮಾನವ ಕಳ್ಳಸಾಗಣೆಯನ್ನು ನಿಲ್ಲಿಸುವ ಕಡೆಗೆ ನಿರ್ದೇಶಿಸುತ್ತಿದೆ” ಎಂದು ಸಿಂಗ್ ಹೇಳಿದರು.
ಐಎನ್‌ಎಸ್ ಸಂಧಾಯಕ್ ವಿಶೇಷತೆ ಏನು: ಹೈಡ್ರೋಗ್ರಾಫಿಕ್ ಸಮೀಕ್ಷೆ ನಡೆಸಲು ಕೇಂದ್ರ ರಕ್ಷಣಾ ಸಚಿವಾಲಯದ ಆದೇಶದ ಮೇರೆಗೆ ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ ಬಿಲ್ಡಿಂಗ್ ಇಂಜಿನಿಯರ್ಸ್ (ಜಿಆರ್‌ಎಸ್‌ಇ) ಐಎನ್‌ಎಸ್ ಸಂಧಾಯಕ್ ಅನ್ನು ನಿರ್ಮಿಸಿದೆ. ಇದು 110 ಮೀಟರ್ ಉದ್ದವಿದ್ದು 3,800 ಟನ್ ಸಾಮರ್ಥ್ಯ ಹೊಂದಿದೆ. ಹೆಲಿಪ್ಯಾಡ್, ಸರ್ವೆ ತಾಂತ್ರಿಕ ಉಪಕರಣಗಳು ಮತ್ತು ಎರಡು ಡೀಸೆಲ್ ಎಂಜಿನ್‌ಗಳನ್ನು ಹೊಂದಿದೆ.
ಸಿದ್ರಾಮಯ್ಯ ಹೆಂಗಸರ ಥರ ಕುಂಕುಮ ಇಡ್ಬೇಕಿತ್ತೇನ್ರೀ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
