ನವದೆಹಲಿ: ಬೆಂಗಳೂರಿನಲ್ಲಿ ಮುಂದಿನವರ್ಷ ಫೆಬ್ರವರಿ 3ರಿಂದ 7ರ ತನಕ ನಡೆಯಲಿರುವ ಏರೋ ಇಂಡಿಯಾ 2021ರ ವೆಬ್​ಸೈಟ್​ (https://aeroindia.gov.in)ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಚಾಲನೆ ನೀಡಿದರು.
ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಈ ವೈಮಾನಿಕ ಪ್ರದರ್ಶನ ನಡೆಯಲಿದೆ. ಇದು 13ನೇ ಆವೃತ್ತಿಯ ಪ್ರದರ್ಶನವಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲ ಆನ್​ಲೈನ್ ಸೇವೆಗಳನ್ನೂ ಈ ವೆಬ್​ಸೈಟ್ ಮೂಲಕ ಪಡೆಯಬಹುದಾಗಿದೆ. ಪ್ರದರ್ಶಕರು ಈ ಸೈಟ್​ ಮೂಲಕವೇ ನೋಂದಣಿ ಮಾಡಿಕೊಳ್ಳಬಹುದು. ಪ್ರದರ್ಶನ ಸ್ಥಳ ಮುಂಗಡ ಕಾಯ್ದಿರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೊದಲು ಬಂದವರಿಗೆ ಮೊದಲ ಆದ್ಯತೆಯ ಅನುಸಾರ ಪ್ರದರ್ಶನ ಸ್ಥಳ ವಿತರಣೆಯಾಗಲಿದೆ. ಅಕ್ಟೋಬರ್ 31ರೊಳಗೆ ಮುಂಗಡ ಕಾಯ್ದಿರಿಸುವವರಿಗೆ ವಿನಾಯಿತಿ ಸಿಗಲಿದೆ.
ಇದನ್ನೂ ಓದಿ:ಅರ್ಹರಿಗಷ್ಟೇ ಮನೆ ವಿತರಿಸಿ ; ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಸಲಹೆ
ವೆಬ್​ಸೈಟ್​ನಲ್ಲಿ ರಕ್ಷಣಾ ಸಚಿವಾಲಯದ ಇತ್ತೀಚಿನ ನೀತಿ, ನಿಯಮಗಳು, ಹೊಸ ಯೋಜನೆಗಳ ವಿವರಗಳು ಲಭ್ಯ ಇವೆ. ವಾಣಿಜ್ಯ ಮತ್ತು ಇತರೆ ಉದ್ದೇಶದ ವಿಸಿಟರ್ಸ್​ ಪ್ರದರ್ಶನ ಟಿಕೆಟ್​ಗಳನ್ನು ಆನ್​ಲೈನ್ ಮೂಲಕವೇ ಖರೀದಿಸಬಹುದಾಗಿದೆ. ಪ್ರದರ್ಶನ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿರುವ ಕೋವಿಡ್ ನಿಯಮಗಳು ಚಾಲ್ತಿಯಲ್ಲಿರಲಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ವಿಡಿಯೋ: ಹುಟ್ಟುವ ಮಗುವಿನ ಲಿಂಗ ತಿಳಿಯಲು ಜಗತ್ತನ್ನೇ ನಿಬ್ಬೆರಗಾಗಿಸಿದರು ಈ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − two =
Remember me
