ನವದೆಹಲಿ :ನಿನ್ನೆಯ ರಾಜ್ಯಸಭಾ ಕಲಾಪದ ವೇಳೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪೆಗಾಸಸ್​ ಬಗ್ಗೆ ಹೇಳಿಕೆ ನೀಡಲು ಹೊರಟಾಗ, ಅಹಿತಕರ ಘಟನೆಯೊಂದು ನಡೆಯಿತು. ಸಚಿವರ ಕೈಯಿಂದ ಪತ್ರವನ್ನು ಕಸಿದ ತೃಣಮೂಲ ಕಾಂಗ್ರೆಸ್ ಸಂಸದ ಡಾ.ಶಂತನು ಸೇನ್​, ಅದನ್ನು ಹರಿದು, ಕಾಗದದ ತುಂಡುಗಳನ್ನು ಪೀಠಾಸೀನರಾಗಿದ್ದ ಡೆಪ್ಯುಟಿ ಚೇರ್​ಮನ್​ ಹರಿವಂಶ್​ ಎನ್​.ಸಿಂಗ್ ಅವರ ಮೇಲಕ್ಕೇ ಚೆಲ್ಲಿದರು.
ಈ ಪ್ರಸಂಗದ ಹಿನ್ನೆಲೆಯಲ್ಲಿ, ರಾಜ್ಯ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಇಂದು ಡಾ. ಸೇನ್ ಅವರನ್ನು ಸದನದ ಸೇವೆಯಿಂದ ಸಸ್ಪೆಂಡ್ ಮಾಡಬೇಕೆಂಬ ಪ್ರಸ್ತಾಪ ಮಾಡಿದರು. “ರಾಜ್ಯಸಭಾ ಸದಸ್ಯರು ನಡೆದುಕೊಳ್ಳಬೇಕಾದ ರೀತಿಯನ್ನು ಬಿಟ್ಟು, ದುರ್ವರ್ತನೆ ತೋರಿದ್ದಾರೆ” ಎಂದರು. ಕೆಲವೇ ನಿಮಿಷಗಳಲ್ಲಿ ಈ ಪ್ರಸ್ತಾವನೆ ಅಂಗೀಕರಿಸಲ್ಪಟ್ಟು, ಮುಂಗಾರು ಅಧಿವೇಶನದ ಉಳಿದ ಅವಧಿಗೆ ಡಾ.ಸೇನ್ ಅವರು, ಸದನ ಕಲಾಪಗಳಲ್ಲಿ ಭಾಗವಹಿಸದಂತೆ ಸಸ್ಪೆಂಡ್ ಮಾಡಲಾಯಿತು.
ಇದನ್ನೂ ಓದಿ:ಸದನದ ಬಾವಿಗೆ ನುಗ್ಗಿ ಗದ್ದಲ; ಸಚಿವರ ಕೈಯಿಂದ ಹೇಳಿಕೆ ಪತ್ರ ಕಸಿದ ಟಿಎಂಸಿ ಸಂಸದ!
ಈ ಹಿನ್ನೆಲೆಯಲ್ಲಿ ಚೇರ್​ಮನ್ ಎಂ.ವೆಂಕಯ್ಯ ನಾಯ್ಡು ಅವರು, ಸಂಸದ ಡಾ.ಸೇನ್ ಅವರಿಗೆ “ಸದನ ಬಿಟ್ಟು ಹೋಗಿ” ಎಂದು ಮನವಿ ಮಾಡಿದರು. ತೃಣಮೂಲ ಕಾಂಗ್ರೆಸ್​ನ ಇತರ ಸಂಸದರು ಎಬ್ಬಿಸಿದ ಗದ್ದಲದಿಂದಾಗಿ ರಾಜ್ಯಸಭಾ ಕಲಾಪವನ್ನು ಮುಂದೂಡಲಾಯಿತು.(ಏಜೆನ್ಸೀಸ್)
ಪ್ರವಾಹ ಸಂದರ್ಭದಲ್ಲಿ ಸಿಎಂ ಬದಲಾವಣೆ ದುರದೃಷ್ಟಕರ : ಎಚ್​​ಡಿಕೆ

VIDEO | ವೇದಿಕೆಯಲ್ಲಿ ‘ಬ್ಯಾಟಿಂಗ್’ ಸಿದ್ಧತೆ ತೋರಿದ ಸಿಧು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − nine =
Remember me
