ಮುಂಬೈ:ನಟಿ ರಾಖಿ ಸಾವಂತ್​ ಅವರು ಬಾಲಿವುಡ್​ ಅಂಗಳದಲ್ಲಿ ಸಖತ್​​ ಸುದ್ದಿಯಲ್ಲಿರುವ ನಟಿ. ಈಕೆ ಇದೀಗ ನಟ ಸಲ್ಮಾನ್​​ ಖಾನ್​ ಅವರ ಮದುವೆ ವಿಚಾರವಾಗಿ ಮಾತನಾಡಿ ಮತ್ತೆ ಇಂದು ಸುದ್ದಿಯಲ್ಲಿದ್ದಾರೆ.
ಹೌದು.. ಬಾಲಿವುಡ್ ಕಾಂಟ್ರವರ್ಸಿ ಆಂಡ್ ಸೆನ್ಸೇಷನ್ ಕ್ರಿಯೇಟರ್ ರಾಖಿ ಸಾವಂತ್ ಏರ್‌ಪೋರ್ಟ್‌ನಲ್ಲಿ ಮತ್ತೊಂದು ಹೈ ಡ್ರಾಮಾ ಶುರು ಮಾಡಿಕೊಂಡಿದ್ದಾರೆ. ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾಖಿ ಸಾವಂತ್ ಗ್ರೀನ್ ಕ್ರಾಪ್ ಟಾಪ್‌ಗೆ ಬ್ಯೂ ಡೆನಿಮ್ ಪ್ಯಾಂಟ್ ಧರಿಸಿ ಪಿಂಕ್ ಬಣ್ಣದ ಜಾಕೆಟ್‌ನಲ್ಲಿ ಮುಖ ಮುಚ್ಚಿಕೊಂಡು ಬರುತ್ತಿರುತ್ತಾರೆ.
ಇದನ್ನೂ ಓದಿ:ಜಮೀನಿಗಾಗಿ ಗಲಾಟೆ; ನಟಿ ಅನಿತಾ ಗೌಡ ಮೇಲೆ ಹಲ್ಲೆ
ಏಕೆ ಹೀಗೆ ಎಂಬ ಪ್ರಶ್ನೆ ಎದುರಾಯಿತು. ಯಾಕೆ ಚಪ್ಪಲಿ ಹಾಕಿಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿರುವ ರಾಖಿ, ‘ನಾನು ಸಲ್ಮಾನ್ ಖಾನ್ ಮದುವೆ ಆಗೋವರೆಗೂ ಚಪ್ಪಲಿ ಹಾಕಬಾರದು ಎನ್ನುವ ನಿರ್ಧಾರಕ್ಕೆ ಬಂದಿರುವೆ. ಆ ರೀತಿ ಶಪಥ ಮಾಡಿರುವೆ’ ಎಂದಿದ್ದಾರೆ. ಈ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಇದನ್ನೂ ಓದಿ:ಎಷ್ಟು ಕೋಟಿ ಬೇಕಾದ್ರು ಕೊಡ್ತೀನಿ ಬಾ…ಕೃತಿ ಶೆಟ್ಟಿಗೆ ಆಹ್ವಾನ ಕೊಟ್ಟ ಸ್ಟಾರ್ ನಟನ ಮಗ
ಸಲ್ಮಾನ್ ಖಾನ್ ಮೇಲೆ ನಟಿ ರಾಖಿ ಸಾವಂತ್​​ಗೆ ಅಭಿಮಾನ ಮತ್ತು ಪ್ರೀತಿ. ರಾಖಿಯ ಕಷ್ಟದ ದಿನಗಳಲ್ಲಿ ಸಲ್ಮಾನ್ ಕೈ ಹಿಡಿದಿದ್ದರು ಎನ್ನುವ ಕಾರಣಕ್ಕಾಗಿ ಸಲ್ಮಾನ್ ಪರ ಬ್ಯಾಟಿಂಗ್ ಮಾಡುತ್ತಲೇ ಇರುತ್ತಾರೆ.
ಚಲಿಸುತ್ತಿದ್ದ ಸ್ಕೂಟಿಗೆ ಲಾರಿ ಡಿಕ್ಕಿ; ಸ್ಥಳದಲ್ಲೇ ಪ್ರಾಣ ಬಿಟ್ಟ ಶಿಕ್ಷಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × one =
Remember me
