ಮುಂಬೈ:ಬಾಲಿವುಡ್​​ ನಟಿ ರಾಖಿ ಸಾವಂತ್ ಮೆಕ್ಕಾದ ಉಮ್ರಾ ಯಾತ್ರೆಯಿಂದ ವಾಪಸ್ಸಾಗಿದ್ದಾರೆ. ಭಾರತಕ್ಕೆ ಬರುತ್ತಿದ್ದಂತೆ, ‘ನನ್ನನ್ನು ರಾಖಿ ಎಂದು ಕರೆಯಬೇಡಿ ಇನ್ಮುಂದೆ ನನ್ನ ಹೆಸರು ಫಾತಿಮಾ’ ಎಂದಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ರಾಖಿ ಸಾವಂತ್ ಅವರು ಉಮ್ರಾದಿಂದ ಹಿಂತಿರುಗಿದ ನಂತರ ಮುಂಬೈ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತವನ್ನು ಪಡೆದರು. ಈ ವೇಳೆ ರಾಖಿ ಸಾವಂತ್​ ಬಿಳಿ ಬಣ್ಣದ ಬುರ್ಕಾ ಧರಿಸಿದ್ದರು. ರಾಖಿ ಬದಲು ಫಾತಿಮಾ ಎಂದು ಕರೆಯುವಂತೆ ಪಾಪರಾಜಿಗೆ ನಟಿ ವಿನಂತಿಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ರಾಖಿ ಮಾತಾನಾಡಿದ್ದಾರೆ. ಮೆಕ್ಕಾದ ಉಮ್ರಾ ಯಾತ್ರೆಯ ಬಗ್ಗೆ ಅನುಭವವನ್ನು ತಿಳಿಸಿದ್ದಾರೆ.
‘ದೇವರಿಗೆ ನಾನು ಇರುವ ಹಾಗೆಯೇ ಇಷ್ಟ. ಅದಕ್ಕಾಗಿ ಯಾವುದೇ ದಾಖಲೆಗಳಲ್ಲಿ ಹೆಸರನ್ನು ಬದಲಾಯಿಸುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ. ಆದರೆ ಇನ್ಮುಂದೆ ಫಾತಿಮಾ ಎಂದು ಕರೆಯಿರಿ ಎಂದಿದ್ದಾರೆ.

A post shared by Viral Bhayani (@viralbhayani)
ಮೆಕ್ಕಾ ಭೇಟಿಯ ಹಲವು ವಿಡಿಯೋಗಳನ್ನು ರಾಖಿ ಹಂಚಿಕೊಂಡಿದ್ದಾರೆ. ಇದೆಲ್ಲಾ ಕೇವಲ ಪ್ರಚಾರಕ್ಕಾಗಿ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಗ್ರಾಹಕರಿಗೆ ಜಾಹೀರಾತಿನಲ್ಲಿ ತೋರಿಸೋದು ಬೇರೆ.. ಕೊಡೋದು ಬೇರೆ..ಬರ್ಗರ್ ಕಿಂಗ್ ಕಂಪನಿ ವಿರುದ್ಧ ಕೋರ್ಟ್​​​ನಲ್ಲಿ ಕೇಸ್


Sign in to your account
Please enter an answer in digits:eleven + ten =
Remember me
