ಮುಂಬೈ:ಬಾಲಿವುಡ್‌ನ ಡ್ರಾಮಾ ಕ್ವೀನ್ ರಾಖಿ ಸಾವಂತ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿದ್ದಾರೆ. ಒಂದಲ್ಲ ಒಂದು ಕಾರಣದಿಂದ ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಾರೆ. ರಾಖಿ ಸಾವಂತ್  ಕಾರ್​​ ಚಾಲಕನ ವಿಚಾರವಾಗಿ ತುಂಬಾ ಅಸಮಾಧಾನಗೊಂಡಿದ್ದಾರೆ.
ರಾಖಿ ಸಾವಂತ್ ಪಾಪರಾಜಿ ಫೋಟೋಗ್ರಾಫರ್​ಗಳ ಜತೆಗೆ ಮಾತನಾಡುವಾಗ, ತನ್ನ ಚಾಲಕ ತನ್ನ ಕಾರಿನ ಕೀಲಿ, ಫೋನ್ ಮತ್ತು ಹಣವನ್ನು ಕದ್ದು ಓಡಿ ಹೋಗಿರುವುದಾಗಿ ಹೇಳಿ ರಾಖಿ ಬೇಸರ ವ್ಯಕ್ತ ಪಡಿಸಿದ ವಿಡಿಯೋ ವೈರಲ್​ ಆಗಿದೆ.
ಇದನ್ನೂ ಓದಿ:ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!

ಇದನ್ನೂ ಓದಿ:ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?ರಾಖಿ ಮಾತನಾಡಿ, ಈ ಘಟನೆಯ ನಂತರ ನಾನು ತುಂಬಾ ನೊಂದಿದ್ದೇನೆ. ನಾನು ಎಲ್ಲಿಗೆ ಹೋಗಬೇಕು ಮತ್ತು ಯಾವ ಗ್ರಹಕ್ಕೆ ಹೋಗಿ ನೆಲೆಸಬೇಕು? ಅವನು ಬಡವನಾಗಿದ್ದರಿಂದ ನಾನು ನೇಮಿಸಿಕೊಂಡೆ. ಆದರೆ ಅವನು ನನಗೆ ಮೋಸಾ ಮಾಡಿದ್ದಾನೆ. ನನ್ನ ಜೀವನಕ್ಕೆ ಗ್ರಹಣ ಹಿಡಿದಿದೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.  ಈಗ ನನಗೆ ರಿಕ್ಷಾದಲ್ಲಿ ಪ್ರಯಾಣಿಸುವ ಸಮಯ ಬಂದಿದೆ ಎಂದು ಹೇಳಿದ್ದಾರೆ.

ಕಾರ್​ ಚಾಲಕ ಓಡಿ ಹೋಗಿದ್ದಾನೆ. ಅವನ ಮನೆಯಲ್ಲಿ ಸಹೋದರಿ ಕೆಲಸ ಮಾಡುತ್ತಾರೆ ಎಂದು ಅವನು ಹೇಳಿಕೊಂಡಿದ್ದನು. ನನ್ನ ಕಾರ್​​ ಚಾಲಕನಾದ ಉತ್ತರ ಪ್ರದೇಶದ ಪಪ್ಪು ಯಾದವ್ ವಿರುದ್ಧ ದೂರು ನೀಡಲು ಓಶಿವಾರ ಪೊಲೀಸ್ ಠಾಣೆಗೆ ಹೋಗುತ್ತಿದ್ದೇನೆ ಎಂದು ರಾಖಿ ಹೇಳಿದ್ದಾರೆ.
ಇದನ್ನೂ ಓದಿ:ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್​​ ನಟ ಅಭಿಷೇಕ್ ಬಚ್ಚನ್ !

A post shared by F I L M Y G Y A N (@filmygyan)
ರಾಖಿಯ ಈ ವೀಡಿಯೊಗೆ ಬಳಕೆದಾರರು ಈಗ ಕಾಮೆಂಟ್ ಮಾಡುತ್ತಿದ್ದಾರೆ. ಮೇಡಂ, ಅವರು ಚಂದ್ರಲೋಕಕ್ಕೆ ಹೋಗಿದ್ದಾರೆ. ನೀವು ಅವರಿಗೆ ಸಂಬಳ ನೀಡುತ್ತಿರಲಿಲ್ಲ ಎನ್ನಿಸುತ್ತದೆ ಎಂದು ಹೀಗೆ ಕಾಮೆಂಟ್​ ಮಾಡುವ ಮೂಲಕವಾಗಿ ನೆಟ್ಟಿಗರು ರಾಖಿಗೆ ತಮಾಷೆ ಮಾಡಿದ್ದಾರೆ.
13 ದಿನಗಳ ಕಂದಮ್ಮನ ಮೇಲೆ ಕೋತಿ ದಾಳಿ; ಮಗುವನ್ನು ಆಸ್ಪತ್ರೆಗೆ ದಾಖಲಿಸಿದ ಕುಟುಂಬಸ್ಥರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − ten =
Remember me
