ಹೈದರಾಬಾದ್​:ಗ್ಲೋಬಲ್ ಸ್ಟಾರ್ ರಾಮ್ ಚರಣ್-ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ `ಗೇಮ್ ಚೇಂಜರ್’ ಚಿತ್ರಕ್ಕೆ ಕಂಟಕಗಳು ದೂರವಾಗುವಂತೆ ಕಾಣುತ್ತಿಲ್ಲ. ಚಿತ್ರ ನಿರ್ಮಾಣಕ್ಕೆ ಮುಂದಾಗಿ ವರ್ಷಗಳೇ ಗತಿಸಿದ್ದರೂ, ಹಲವು ಬಾರಿ ಮುಂದೂಡುವುದಾಗಿ ಹೇಳುವುದು, ಮತ್ತೆ ಚಿತ್ರೀಕರಣ ನಡೆಯುತ್ತಿದೆ ಎಂದು ಪ್ರಕಟಿಸುವುದು ನಡೆದೇ ಇದೆ. ನಿಜ ಹೇಳಬೇಕೆಂದರೆ ಈ ಸಿನಿಮಾ ಶೇ.50ರಷ್ಟೂ ಚಿತ್ರೀಕರಣ ಪೂರೈಸಿಲ್ಲ. ಇದು ರಾಮ್​ ಚರಣ್​ ಅಭಿಮಾನಿಗಳ ನಿರಾಶೆಗೆ ಕಾರಣವಾಗಿದೆ.
ಬಾಲಕಿ ಬರೆದ ಪತ್ರಕ್ಕೆ ಎರಡು ಗಂಟೆಯಲ್ಲೇ ಸಿಎಂ ಕಚೇರಿ ಸ್ಪಂದನೆ; ವಿಜಯವಾಣಿಗೆ ಮನವಿ ಮಾಡಿದ್ದ 3ನೇ ತರಗತಿ ವಿದ್ಯಾರ್ಥಿನಿ

ನಿರ್ದೇಶಕ ಶಂಕರ್​ ಚಿತ್ರೀಕರಣ ಮುಂದೂಡುತ್ತಿರುವುದರಿಂದ ಚಿತ್ರದ ಬಜೆಟ್​ ಏರಿಕೆಯಾಗುತ್ತಿದೆ. ಈ ನಡುವೆ ಮತ್ತೆ 2 ತಿಂಗಳು ಚಿತ್ರೀಕರಣ ಮುಂದೂಡಿರುವ ಮಾತುಗಳು ಕೇಳಿಬರುತ್ತಿವೆ. ಈ ಮಾತುಗಳು ನಿಜವೆಂಬಂತೆ ನಿರ್ಮಾಪಕ ದಿಲ್ ರಾಜು ಸಾಮಾಜಿಕ ಜಾಲತಾಣದಲ್ಲಿ ಶಂಕರ್​ ವಿರುದ್ಧ ಅಸಮಾಧಾನ ಹೊರಹಾಕುತ್ತಿರುವುದನ್ನು ಕಾಣಬಹುದಾಗಿದೆ.
ಗೇಮ್ ಚೇಂಜರ್ ಸಿನಿಮಾ ಇಷ್ಟೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ನಿರ್ದೇಶಕ ಶಂಕರ್ ಅವರು ಕಮಲ್ ಹಾಸನ್ ಅವರ ಇಂಡಿಯನ್ ೨ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಗೇಮ್ ಚೇಂಜರ್ ೨೦೨೫ ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂಬರುವ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ನಡುವೆ ಚಿತ್ರ ಬಿಡುಗಡೆಯಾಗದಿರುವುದಕ್ಕೆ ಬೇಸತ್ತ ರಾಮ್ ಚರಣ್ ಅಭಿಮಾನಿ ಬಾಬುಗೌಡ ಎಂಬಾತ ಚಿತ್ರದ ನಿರ್ಮಾಪಕರಿಗೆ ಸೂಸೈಡ್ ನೋಟ್ ಕಳುಹಿಸಿದ್ದಾರೆ. ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ನೀಡದಿದ್ದರೆ ಸಾಯುತ್ತೇನೆ ಎಂದು ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ. ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ
ಬಾಕ್ಸ್​​ ಆಫೀಸ್​ನಲ್ಲಿ ಸದ್ದು ಮಾಡದ ‘ದಿ ವ್ಯಾಕ್ಸಿನ್​ ವಾರ್’; ಕಾರಣ ಹೀಗಿದೆ

ಆರ್‌ಆರ್‌ಆರ್‌ನಂತಹ ಜಾಗತಿಕ ಬ್ಲಾಕ್‌ಬಸ್ಟರ್ ನಂತರ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರು ಗೇಮ್ ಚೇಂಜರ್‌ನಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಮತ್ತು ಅಂಜಲಿ ನಾಯಕಿಯರಾಗಿ ನಟಿಸುತ್ತಿದ್ದಾರೆ. ಎಸ್ ಥಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇದು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 2 =
Remember me
