ಬೆಂಗಳೂರು:ಅಯೋಧ್ಯೆಯಲ್ಲಿ ಭಗವಾನ್ ಶ್ರೀರಾಮನ ಪ್ರಾಣ ಪ್ರತಿಷ್ಠೆ ಅತ್ಯಂತ ಸಂಭ್ರಮ ಹಾಗೂ ವಿಜೃಂಭಣೆಯಿಂದ ನೆರವೇರಿದೆ.  ರಾಮಲಲ್ಲಾನ ವಿಗ್ರಹ ನೋಡಿದರೆ ಸಾಕ್ಷಾತ್‌ ರಾಮನೇ ಬಂದು ನಿಂತಿರುವಂತೆ ಭಾಸವಾಗುತ್ತದೆ. ಅತ್ಯಂತ ಆಕರ್ಷಕವಾಗಿ ಮೂಡಿ ಬಂದಿರುವ ರಾಮಲಲ್ಲಾನ ವಿಗ್ರಹ ಕೆತ್ತನೆಯ ಕುರಿತಾಗಿ ಶಿಲ್ಪಿ ಅರುಣ್‌ ಯೋಗಿರಾಜ್‌ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಶಿಲ್ಪಿ ಅರುಣ್‌ ಯೋಗಿರಾಜ್‌ ಅವರು, ರಾಮನಕಣ್ಣಗಳನ್ನು ಗರ್ಭಗುಡಿ ಹೊರಗಡೆ ಕೆತ್ತಲಾಗಿದೆ. ಅದಕ್ಕಂತಲೇ ನೇತ್ರಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತ ಫಿಕ್ಸ್‌ ಮಾಡಿದ್ದರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್‌ ಮಾಡಿದೆವು. ನಂತರ ಅವರು ಜೇನುತಪ್ಪ, ಹಳದಿ ಎಲ್ಲಾ ಹಾಕಿ ಕಣ್ಮುಚ್ಚಿ ಬಿಡುತ್ತಿದ್ದರು. ಈ ಕಣ್ಣುಗಳನ್ನು ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಯಲ್ಲಿ ಮಾಡಿರುತ್ತೇನೆ ಎಂದು ಹೇಳಿದರು.
ರಾಮನ ಕಣ್ಣುಗಳನ್ನು ಕೆತ್ತನೆ ಮಾಡುವಾಗ ತುಂಬಾ ಭಯ ಆಗಿತ್ತು. ಈ ಸಮಯದಲ್ಲಿ ನಾನು ನನ್ನ ತಂದೆಯನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೆ. ಅವರ ಬಳಿ ನಾನು ಹೆಂಗೆ ಮಾಡಿದ್ದೇನೆ ಅಪ್ಪ ಅಂತಾ ಕೇಳಬೇಕಿತ್ತು. ಆದರೆ ಅಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ಇದ್ದೆ. ಭಯ ತಡೆದುಕೊಳ್ಳಲು ಆಗದೆ ಕೊನೆಗೆ ನನ್ನ ಸಹಪಾಠಿಗಳ ಜೊತೆ ಕಣ್ಣಿನ ಬಗ್ಗೆ ಹೇಳಿಕೊಂಡೆ.
ನಮ್ಮ ಕುಟುಂಬ ಸಾಕಷ್ಟು ವರ್ಷಗಳಿಂದ ಈ ಕೆಲಸ ಮಾಡಿಕೊಂಡು ಬರುತ್ತಿದೆ. ಇಂದು ಅಷ್ಟು ದೊಡ್ಡ ದೇವಸ್ಥಾನಕ್ಕೆ ನಾನೇ ವಿಗ್ರಹ ಮಾಡಿಕೊಟ್ಟೆ ಎಂಬುದನ್ನು ನನಗೆ ನಂಬೋಕೆ ಆಗ್ತಿಲ್ಲ. ವಿಗ್ರಹವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ನನಗೆ ಮಗುವನ್ನು ಅರಮನೆಗೆ ತಂದಂತೆ ಭಾಸವಾಗ್ತಿತ್ತು ಎಂದು ಹೇಳುತ್ತಾ ಸಂತೋಷ ವ್ಯಕ್ತಪಡಿಸಿದ್ದಾರೆ.
ಬ್ರಾಹ್ಮಣ ಸಮುದಾಯದಲ್ಲಿ ಹುಟ್ಟಿ ಆಡಿ ಬೆಳೆದ ಕನ್ನಡದ ನಟಿ ಈಗ ಕ್ರೈಸ್ತ ಧರ್ಮದ ಕೌನ್ಸಿಲರ್

“ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ” ಖ್ಯಾತಿ ಶಶಿರೇಖಾ ಈಗ ಕನ್ನಡ ಸಿನಿಮಾ ಹೀರೋಯಿನ್

ಮಂದಸ್ಮಿತ, ಮುಗ್ಧಮುಖದ ಬಾಲರಾಮ ತೊಟ್ಟ ಒಂದೊಂದು ಆಭರಣಕ್ಕೂ ಇದೆ ತನ್ನದೇ ಆದ ವಿಶೇಷತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
