| ಎಸ್.ಎ. ಹೇಮಂತ್
ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ಮಂದಿರ ನಿರ್ವಿುಸುವ ಚಳವಳಿಗಳು 1987-88ರಲ್ಲಿ ಕರ್ನಾಟಕದಲ್ಲಿ ನಡೆದಿದ್ದಾಗ ನಾನು ಮತ್ತು ಇತರ ಸಾವಿರಾರು ಕಾರ್ಯಕರ್ತರು ಅದರಲ್ಲಿ ಧುಮುಕಿದ್ದೆವು. ‘ಶ್ರೀರಾಮ ಜನಿಸಿದ ಸ್ಥಳದಲ್ಲೇ ಮಂದಿರ ನಿರ್ವಿುಸುತ್ತೇವೆಂದು ನಾವು ಪ್ರಮಾಣ ಮಾಡುತ್ತೇವೆ. ರಾಮಲಲ್ಲಾ, ನಾವು ಬರುತ್ತೇವೆ. ಮಂದಿರವನ್ನು ಅಲ್ಲೇ ಕಟ್ಟುತ್ತೇವೆ’ ಎಂಬುದು ನಮ್ಮ ಘೋಷಣೆಯಾಗಿತ್ತು.
ಕರ್ನಾಟಕದಲ್ಲಿ ಒಟ್ಟು ನಾಲ್ಕು ರಥಯಾತ್ರೆಗಳು ನಡೆದಿದ್ದವು: ಶ್ರೀರಾಮ ಜಾನಕಿ ಪಾದುಕಾಯಾತ್ರೆ, ಶ್ರೀರಾಮ ಜ್ಯೋತಿಯಾತ್ರೆ, ಶ್ರೀರಾಮಶಿಲಾಯಾತ್ರೆ ಮತ್ತು ಎಲ್.ಕೆ. ಆಡ್ವಾಣಿ ನಡೆಸಿದ 10 ಸಾವಿರ ಕಿಮೀಗಳ ಸೋಮನಾಥ-ಅಯೋಧ್ಯಾ ರಥಯಾತ್ರೆ. ನಾಲ್ಕೂ ರಥಯಾತ್ರೆಗಳಲ್ಲಿ ಭಾಗವಹಿಸಿದ ಅದೃಷ್ಟ ನನ್ನದು. ಮೊದಲ ಮೂರು ಯಾತ್ರೆಗಳು ರಾಜ್ಯದ ಉದ್ದಗಲಕ್ಕೂ ಸಂಚರಿಸಿದ್ದವು. ವಿಎಚ್​ಪಿ ಮತ್ತು ಬಿಜೆಪಿ ನಾಯಕರು ಭಾಷಣ ಮಾಡಿದ ಸಾರ್ವಜನಿಕ ಸಭೆಗಳಲ್ಲಿ ಲಕ್ಷಾಂತರ ಜನರು ಭಾಗಿಯಾಗುತ್ತಿದ್ದರು. ಮಂದಿರ ನಿರ್ವಿುಸುವುದು ಇಡೀ ಹಿಂದು ಸಮಾಜದ ಹೊಣೆಯೇ ಹೊರತು ಯಾವುದೋ ಒಂದೆರಡು ಸಂಘಟನೆಗಳದ್ದಲ್ಲ ಎನ್ನುವುದನ್ನು ಖಾತರಿಪಡಿಸಲು ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯ ಮಠಗಳ ಸ್ವಾಮೀಜಿಗಳೂ ಸಕ್ರಿಯವಾಗಿ ಪಾಲ್ಗೊಂಡಿದ್ದರು.
1990 ಸೆಪ್ಟೆಂಬರ್ 25ರಂದು ಗುಜರಾತ್​ನ ಸೋಮನಾಥದಲ್ಲಿ ಆರಂಭವಾದ ಆಡ್ವಾಣಿ ಯಾತ್ರೆ ಮಹಾರಾಷ್ಟ್ರದ ಬೀಡ್ ಜಿಲ್ಲೆ ಮೂಲಕ ಕರ್ನಾಟಕ ಪ್ರವೇಶಿಸಿತ್ತು. ಕರ್ನಾಟಕ ಕೇಸರಿ ಜಗನ್ನಾಥ ರಾವ್ ಜೋಷಿ ಅವರ ‘ಸಹಾಯಕ’ನಾಗಿ ನಾನು ಪುಣೆಯ ಕೌಶಿಕ್ ಆಶ್ರಮದಲ್ಲಿ ಅವರ ಆರೈಕೆ ಮಾಡುತ್ತಿದ್ದೆ. ಆಡ್ವಾಣಿ ಯಾತ್ರೆ ನಿರ್ಧಾರದ ಕುರಿತು ನಾನು ಗಮನ ಸೆಳೆದಾಗ ಜೋಷಿ ಹೀಗೆ ಹೇಳಿದ್ದರು: ‘ಭಾರತ ವಿಶ್ವಗುರುವಾಗಿ ಹೊರಹೊಮ್ಮುವ ಪಥದ ಅಡಿಗಲ್ಲು ಇಡುವಲ್ಲಿ ಆಡ್ವಾಣಿ ಪ್ರಮುಖ ವ್ಯಕ್ತಿಯಾಗಲಿದ್ದಾರೆ’. ಜೋಷಿ 1991ರ ಜುಲೈ 15ರಂದು ನಿಧನರಾದರು. ಆದರೆ, ಅವರ ಮಾತು ನಿಜವಾಯಿತು.
ಅಡ್ವಾಣಿ ರಥಯಾತ್ರೆ ರಾಜ್ಯದ ಸಣ್ಣ ಪಟ್ಟಣ ಹುಮ್ನಾಬಾದ್​ನಲ್ಲಿ ನಡೆಯಿತು. ಅಲ್ಲಿ ಸುಮಾರು 40,000 ಜನರು ಆಡ್ವಾಣಿ ಮತ್ತು ಪ್ರಮೋದ್ ಮಹಾಜನ್​ರ ಭಾಷಣವನ್ನು ಆಲಿಸಿದರು. ಆರ್​ಎಸ್​ಎಸ್, ವಿಎಚ್​ಪಿ ಮತ್ತು ಬಿಜೆಪಿಯ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ‘ರಾಮ ಮಂದಿರ ವಿಷಯವನ್ನು ಕೈಗೆತ್ತಿಕೊಳ್ಳುವ ಮೂಲಕ ದೇಶದ ರಾಜಕೀಯದಲ್ಲಿ ಆಗಿರುವ ವಿರೂಪವನ್ನು ಸರಿಪಡಿಸುವುದು ಬಿಜೆಪಿಯ ಉದ್ದೇಶ. ಜಾತ್ಯತೀತತೆ ಎಂದರೆ ಹಿಂದು-ವಿರೋಧಿಯಾದುದು, ಧರ್ಮ-ವಿರೋಧಿಯಾದುದು ಅಥವಾ ಧರ್ಮವೇ ಇಲ್ಲದಿರುವಂಥದ್ದು ಎಂಬುದು ಈ ವಿರೂಪದ ಸಾರಾಂಶವಾಗಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಆಚರಿಸುತ್ತಿರುವುದು ಹುಸಿ ಜಾತ್ಯತೀತತೆ. ವಾಸ್ತವವಾಗಿ ಹಿಂದುತ್ವವನ್ನು ಅಗೌರವಿಸುವ, ಖಂಡಿಸುವುದಕ್ಕೆ ಸಂವಾದಿಯಾಗಿ ಜಾತ್ಯತೀತತೆ ಪದವನ್ನು ಬಳಸಲಾಗುತ್ತದೆ’ ಎಂದು ಆಡ್ವಾಣಿ ವಿಶ್ಲೇಷಿಸಿದ್ದರು.
ಆಡ್ವಾಣಿಯವರ, 6000 ಕಿ.ಮೀ. ಉದ್ದದ ಸೋಮನಾಥ-ಅಯೋಧ್ಯಾ ರಥಯಾತ್ರೆಯಲ್ಲಿ ಭಾಗಿಯಾಗುವ ಸುಯೋಗ ನನಗೆ ಸಿಕ್ಕಿತ್ತು. ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ದೆಹಲಿ ಮತ್ತು ಬಿಹಾರಗಳಲ್ಲಿ ನಾನು ಸಂಚರಿಸಿದೆ. ತೀರಾ ಒಳನಾಡಿನ ಹಳ್ಳಿಗಳಲ್ಲೂ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಸಾವಿರಾರು ಜನರು ರಥಯಾತ್ರೆಯನ್ನು ಸ್ವಾಗತಿಸುತ್ತಿದ್ದರು. ಮಧ್ಯರಾತ್ರಿಯಾದರೂ ಜನರು ಕಾದು ಕುಳಿತಿರುತ್ತಿದ್ದರು.
ಆಡ್ವಾಣಿ ಬಂಧನ: ಬಿಹಾರದ ಸಮಷ್ಠಿಪುರದಲ್ಲಿ ಆಡ್ವಾಣಿಯವರನ್ನು ಬಂಧಿಸಿದಾಗ ನಾನೂ ಅಲ್ಲಿದ್ದೆ. ಬಿಹಾರ-ಪಶ್ಚಿಮ ಬಂಗಾಳ ಗಡಿಯ ಮಸಂಜೋರ್ ಅತಿಥಿಗೃಹಕ್ಕೆ ಅವರನ್ನು ಕರೆದೊಯ್ಯಲಾಯಿತು.
1990ರ ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿ ಕರಸೇವಕರನ್ನು ಸೇರಿಸುವ ಉದ್ದೇಶದಿಂದ ಸಾವಿರಾರು ಸಭೆಗಳನ್ನು ನಡೆಸಲಾಯಿತು. ಅದೊಂದು ‘ಸಾಂಕೇತಿಕ ಕರಸೇವೆ’ಯ ದಿನದ ಬದಲಿಗೆ ‘ನಿರ್ಣಾಯಕ ಕರಸೇವೆ’ ನಡೆಸುವ ದಿನವಾಗಿತ್ತು. ಕರಸೇವಕರು ಮೊದಲು ಅಲಹಾಬಾದ್ ಹಾಗೂ ಅಲ್ಲಿಂದ ಅಯೋಧ್ಯೆ ತಲುಪಲು ಎಲ್ಲ ತಯಾರಿಗಳನ್ನು ನಡೆಸಲಾಗಿತ್ತು. ಬೆಂಗಳೂರಿನಿಂದ ಮಧ್ಯಪ್ರದೇಶದ ಇಟಾರ್ಸಿ, ಅಲ್ಲಿಂದ ಅಲಹಾಬಾದ್ ತಲುಪಲು ನಿರ್ಧರಿಸಲಾಯಿತು. ಬೆಂಗಳೂರಿನಿಂದ ಸುಮಾರು 500 ಕರಸೇವಕರು ಹೊರಟಿದ್ದರು. ಲಖನೌ ಮತ್ತು ಉತ್ತರ ಪ್ರದೇಶದ ಇತರ ರೈಲು ನಿಲ್ದಾಣದಲ್ಲಿ ಇಳಿಯುವ ಎಲ್ಲರನ್ನೂ ಮುಲಾಯಂ ಸಿಂಗ್ ಸರ್ಕಾರ ಬಂಧಿಸಲಿದೆ ಎಂಬ ಮಾಹಿತಿ ಸಿಕ್ಕಿತ್ತು. ಹೀಗಾಗಿ ಸಾಮೂಹಿಕ ಬಂಧನ ತಪ್ಪಿಸಿಕೊಳ್ಳುವುದ್ಕಾಗಿ ಕರಸೇವಕರು ತಂತ್ರವನ್ನು ಬದಲಾಯಿಸಿದರು. ಅವರಲ್ಲಿ ನೂರಾರು ಜನರು ಈಶಾನ್ಯ ರಾಜ್ಯಗಳಿಗೆ ಹೋಗುವ ಟ್ರಕ್​ಗಳಲ್ಲಿ ತೆರಳಿದರು. ಅಲಹಾಬಾದ್​ನಿಂದ ಅಯೋಧ್ಯೆಗೆ ಹೋಗಲು ವಿಎಚ್​ಪಿ ಮೂರು ಬಸ್​ಗಳನ್ನು ವ್ಯವಸ್ಥೆ ಮಾಡಿತ್ತು.
ಬಂಧನದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕರಸೇವಕರು ರಾತ್ರಿಯೆಲ್ಲ ಹೊಲಗಳಲ್ಲಿ ನಡೆಯುತ್ತಿದ್ದರು. ಹಗಲು ಹೊತ್ತಿನಲ್ಲಿ ಉತ್ತರ ಪ್ರದೇಶದ ಹಳ್ಳಿಗಳ ಜನರ ಮನೆಗಳಲ್ಲಿ ಇರುತ್ತಿದ್ದರು. ‘ಗ್ರಾಮಸ್ಥರ ಆತಿಥ್ಯ ಮರೆಯಲಸಾಧ್ಯವಾದದ್ದು. ಜನರು ನಮಗೆ ತೋರಿದ ಗೌರವದಿಂದ ನಾವು ಭಾವಪರವಶರಾಗಿದ್ದೆವು’ ಎಂದು ಬೆಂಗಳೂರು ಜಿಲ್ಲೆ ಆನೇಕಲ್ ತಾಲೂಕು ಸರ್ಜಾಪುರದಿಂದ ಭಾಗವಹಿಸಿದ್ದ ಕರಸೇವಕ ಚಿದಾನಂದ ನೆನಪಿಸಿಕೊಂಡಿದ್ದಾರೆ.
1989 ನವೆಂಬರ್ 9ರಂದು ನಡೆದ ಮೊದಲ ಕರಸೇವೆಯಲ್ಲಿ ಕರ್ನಾಟಕದ ಸುಮಾರು 500 ಮಂದಿ ಭಾಗವಹಿಸಿದ್ದರು. 1990 ಅಕ್ಟೋಬರ್ 30ರಂದು ನಿಗದಿಯಾಗಿದ್ದ ಎರಡನೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಲ್ಲಿಂದ ಸುಮಾರು 2000 ಜನರು ತೆರಳಿದ್ದರು. ಆದರೆ, ಮುಲಾಯಂ ಸರ್ಕಾರ ಕರಸೇವಕರ ಮೇಲೆ ಗೋಲಿಬಾರ್ ನಡೆಸಿದ್ದರಿಂದ ನೂರಾರು ಜನರು ಮೃತಪಟ್ಟರು. ‘ಸರಯೂ ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಅನೇಕ ಹೆಣಗಳು ತೇಲಿಬಂದಿದ್ದನ್ನು ನಾವು ಕಂಡೆವು’ ಎನ್ನುತ್ತಾರೆ ಚಿದಾನಂದ.
ಬಿಜೆಪಿ ಕಾರ್ಯಕರ್ತ ಎಸ್. ಪ್ರಕಾಶ್ ಪ್ರಕಾರ, 1992 ಡಿಸೆಂಬರ್ 6ರಂದು ನಡೆದ ಮೂರನೇ ಕರಸೇವೆಯಲ್ಲಿ ಕರ್ನಾಟಕದಿಂದ ಸುಮಾರು 10,000 ಮಂದಿ ಪಾಲ್ಗೊಂಡಿದ್ದರು. ಅದು, ವಿವಾದಿತ ಕಟ್ಟಡವನ್ನು ಕರಸೇವಕರು ಉರುಳಿಸಿದ ದಿನ. ‘ನಾನು ಹಾಗೂ ಇತರ ಅನೇಕರು ಧರಾಶಾಯಿಯಾದ ಕಟ್ಟಡದಿಂದ ಕೆಲವೇ ಗಜಗಳ ದೂರದಲ್ಲಿದ್ದೆವು. ಕಟ್ಟಡದ ಒಂದು ಗುಮ್ಮಟವನ್ನು ನಾನು ಏರಿದ್ದೆ. ಅದು ಕುಸಿದಾಗ ನಾನು ಕೆಳಗೆ ಬೀಳದಂತೆ ಸಂಭಾಳಿಸಿಕೊಂಡೆ. ನಮ್ಮ ದೇಶಕ್ಕೆ ಕಪು್ಪಚುಕ್ಕೆಯಂತಿದ್ದ ಕಟ್ಟಡ ಉರುಳಿಸಿದ ಐತಿಹಾಸಿಕ ಕೃತ್ಯದಲ್ಲಿ ಭಾಗವಹಿಸಿದ್ದಕ್ಕೆ ಹೆಮ್ಮೆಯಿದೆ’ ಎಂದು ಮುಳಬಾಗಿಲಿನ ಬಿಜೆಪಿ ನಾಯಕ ಪಿ.ಎಂ. ರಘುನಾಥ್ ಹೇಳುತ್ತಾರೆ.
1989ರ ನವೆಂಬರ್​ನ ಪ್ರಥಮ ಕರಸೇವೆಯಲ್ಲಿ ನಾನು ಒಬ್ಬ ಕಾರ್ಯಕರ್ತನಾಗಿ ಪಾಲ್ಗೊಂಡಿದ್ದೆ. ಮೂರನೇ ಕರಸೇವೆಯಲ್ಲಿ ಸಹಾರಾ ಇಂಡಿಯಾ ಮಾಸ್ ಕಮ್ಯುನಿಕೇಶನ್ ಸಂಸ್ಥೆಯ ಪತ್ರಕರ್ತನಾಗಿ ಭಾಗವಹಿಸಿದ್ದೆ. ಗೋಲಿಬಾರ್ ನಡೆದ ಎರಡನೇ ಕರಸೇವೆ ವೇಳೆ ಅಲ್ಲಿರಲಿಲ್ಲ ಎಂಬ ವಿಷಾದ ನನಗಿದೆ.
2020 ಆಗಸ್ಟ್ 5ರಂದು ಮಂದಿರ ನಿರ್ವಣಕ್ಕೆ ಭೂಮಿಪೂಜೆ ನಡೆಯಲಿದೆ ಎಂದು ರಾಮ ಜನ್ಮಭೂಮಿ ಟ್ರಸ್ಟ್ ಪದಾಧಿಕಾರಿಗಳು ಪ್ರಕಟಿಸಿದಾಗ ನಾನು ಟಿವಿ ಪರದೆ ಮೇಲೆ ಕಣ್ಣು ನೆಟ್ಟು ಕೂತಿದ್ದೆ. ಆಗ ಭಾವಾವೇಶದಿಂದ ಕಣ್ಣಂಚಿನಿಂದ ನೀರು ಹರಿಯುವುದನ್ನು ತಡೆಯಲಾಗಲಿಲ್ಲ. ಮೂರು ದಶಕಗಳಷ್ಟು ಹಳೆಯದಾದ ಅಯೋಧ್ಯೆ ಸಂಬಂಧಿತ ಚಳವಳಿಗಳಲ್ಲಿ ಭಾಗವಹಿಸಿದವನೂ ಪ್ರತ್ಯಕ್ಷದರ್ಶಿಯೂ ಆಗಿದ್ದೆ. ಈಗ ಇತಿಹಾಸ ನಿರ್ವಣವಾಗುತ್ತಿರುವುದನ್ನು ಕಾಣುತ್ತಿದ್ದೇನೆ.
ಭಗವಾನ್ ರಾಮ, ನಿನ್ನ ಹಕ್ಕಿನ ಸ್ಥಳಕ್ಕಿದೋ ಸ್ವಾಗತ…
(ಲೇಖಕರು ಹಿರಿಯ ಪತ್ರಕರ್ತರು)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eleven − 6 =
Remember me
