ಲಖನೌ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಜತೆಗಿನ ಭೂಮಿ ವಹಿವಾಟಿನಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಭ್ರಷ್ಟಾಚಾರದ ಆರೋಪ ಮಾಡಿದವರಿಗೆ ಯಾರೋ ತಪು$್ಪ ಮಾಹಿತಿ ನೀಡಿದ್ದಾರೆ ಎಂದು ಟ್ರಸ್ಟ್​ಗೆ ಭೂಮಿ ಮಾರಾಟ ಮಾಡಿದವರ ಪೈಕಿ ಒಬ್ಬರಾದ ಸುಲ್ತಾನ್​ ಅನ್ಸಾರಿ ಮಂಗಳವಾರ ಸ್ಪಷ್ಟವಾಗಿ ಹೇಳಿದ್ದಾರೆ.ಭೂಮಿ ಮಾರಾಟದ ಒಪ್ಪಂದವನ್ನು ಕಾನೂನು ಪ್ರಕಾರವೇ ಮಾಡಲಾಗಿದೆ. ಆರಂಭದ ಒಪ್ಪಂದ 2011ರಲ್ಲಿ ಮಾಡಲಾಗಿತ್ತು. ನಂತರ ಅದನ್ನು 2014 ಮತ್ತು 2019ರಲ್ಲಿ ನವೀಕರಿಸಲಾಗಿದೆ. ಕೊನೆಗೆ 2021ರಲ್ಲಿ ಮಾರಾಟ ಒಪ್ಪಂದವನ್ನು ದೃಢೀಕರಿಸಿ ಕೊನೆಗೊಳಿಸಲಾಗಿದೆ. ಜಮೀನನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ ಎಂಬುದು ನಿಜ. ಆದರೆ, ಈ ಮಾರಾಟ ಒಪ್ಪಂದ ಹಿಂದೆಯೇ ಮಾಡಿರುವಂಥದ್ದು. ಅದೂ ಅಲ್ಲದೆ ಈ ಭೂಮಿ ರಾಮ ಮಂದಿರಕ್ಕೆ ಸಂಬಂಧಿಸಿದ್ದು ಎಂದು ಸುಲ್ತಾನ್​ ವಿವರಿಸಿದ್ದಾರೆ.ಸಮಾಜವಾದಿ ಪಾರ್ಟಿ ನಾಯಕ ಪವನ್​ ಪಾಂಡೆ ಆರೋಪ ವಾಸ್ತವಕ್ಕೆ ದೂರವಾದುದು. ಅವರಿಗೆ ಯಾರೋ ತಪು$್ಪ ಮಾಹಿತಿ ಕೊಟ್ಟಿದ್ದಾರೆ. ಹಿಂದೆ ನಾನು ಪಕ್ಷದಲ್ಲಿದ್ದೆ. ಈಗ ಯಾವುದೇ ಪಕ್ಷದ ಜತೆಗೂ ನಂಟಿಲ್ಲ ಎಂದು ಸುಲ್ತಾನ್​ ಹೇಳಿದ್ದಾರೆ. 2 ಕೋಟಿ ರೂಪಾಯಿ ಬೆಲೆ ಬಾಳು ಭೂಮಿಯನ್ನು 18.50 ಕೋಟಿ ರೂಪಾಯಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಖರೀದಿಸಿದೆ ಎಂದು ಎಸ್​ಪಿ ಮತ್ತು ಎಎಪಿ ನಾಯಕರು ಆರೋಪಿಸಿದ್ದರು. ಈ ಆರೋಪಕ್ಕೆ ದನಿಗೂಡಿಸಿದ ಕಾಂಗ್ರೆಸ್​ನ ನಾಯಕರಾದ ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿ, ವಾದ್ರಾ, ರಣದೀಪ್​ ಸುರ್ಜೆವಾಲಾ, ರಾಜ್​ ಬಬ್ಬರ್​ ಇನ್ನಿತರರು, ಭಕ್ತರ ನಂಬಿಕೆಗೆ ವಂಚನೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು. ಟ್ರಸ್ಟ್​ನ ಲೆಕ್ಕಪತ್ರವನ್ನು ಸುಪ್ರೀಂಕೋರ್ಟ್​ ನಿಗಾದಲ್ಲಿ ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು. ಈ ಆರೋಪವನ್ನು ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್​ ರಾಯ್​ ಸೋಮವಾರ ಅಲ್ಲಗಳೆದಿದ್ದು, ಭೂಮಿ ಖರೀದಿಯದಾಖಲೆಸಹಿತ ಸುದೀರ್ ಸ್ಪಷ್ಟನೆ ನೀಡಿದ್ದರು.
ಟ್ರಸ್ಟ್​ ವಿರುದ್ಧ ದೂರುಮಧ್ಯಪ್ರದೇಶದ ಕಾಂಗ್ರೆಸ್​ ನಾಯಕ ಕೆ.ಕೆ.ಮಿಶ್ರಾ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ವಿರುದ್ಧ ಇಂದೋರ್​ನಲ್ಲಿ ಛತ್ರಿಪುರ ಠಾಣೆಗೆ ದೂರು ನೀಡಿದ್ದು, ಎ್​ಐಆರ್​ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಟ್ರಸ್ಟ್​ನ ಪದಾಧಿಕಾರಿಗಳು 16 ಕೋಟಿ ರೂ.ಗಳ ಅವ್ಯವಹಾರ ಮಾಡಿ ವಂಚನೆ ಗೈದಿದ್ದಾರೆ ಎಂದು ಆರೋಪವನ್ನು ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − six =
Remember me
