ಅಯೋಧ್ಯೆ:ರಾಮಮಂದಿರದ ಗರ್ಭಗುಡಿಯಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ರಾಮಲಲ್ಲಾ ಮೂರ್ತಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸರ್ವಾನುಮತದಿಂದ ಆಯ್ಕೆಯಾದ ಮೂರ್ತಿಯನ್ನು ಜ.22 ರಂದು ಪ್ರತಿಷ್ಠಾಪನೆ ಮಾಡಲಾಗುವುದು.
ಇದನ್ನೂ ಓದಿ:ಬಾಲರಾಮನ ಪ್ರತಿಷ್ಠಾಪನೆ ವೇಳೆ ರಾಮನಾಮ ಜಪಿಸುವಂತೆ ಕರೆ; ಗಾಯಕಿ ಕೆ.ಎಸ್​. ಚಿತ್ರಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಟೀಕೆ
ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಪೂರ್ವಭಾವಿಯಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಿದೆ. ಜನವರಿ 23ರಿಂದ ರಾಮಲಲ್ಲಾನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ‍್ಯದರ್ಶಿ ಚಂಪತ್‌ ರಾಯ್‌ ಸೋಮವಾರ ಹೇಳಿದ್ದಾರೆ.
ಸೀತಾ ಮಾತೆಯ ಊರಾದ ನೇಪಾಳದಿಂದ ಸುಮಾರು 3,000 ಕ್ಕೂ ಹೆಚ್ಚು ಉಡುಗೊರೆ, 2,100 ಕೆ.ಜಿ ತೂಕದ ಗಂಟೆ, ರಾಮಮಂದಿರ ಪರಿಕಲ್ಪನೆಯಲ್ಲಿ ಅರಳಿದ ವಜ್ರದ ಸರ ಹೀಗೆ ಹಲವು ಬಗೆಯ ಉಡುಗೊರೆಗಳನ್ನು ರಾಮಭಕ್ತರು ನೀಡಿದ್ದಾರೆ.
ಈ ನಡುವೆಯೇ ದೇಶದಲ್ಲಿಯೇ ಪ್ರಸಿದ್ಧಿ ಪಡೆದಿರುವ ಆಗ್ರಾ ಪೇಠಾ ಇಂದು ಅಯೋಧ್ಯೆ ತಲುಪಿದೆ. ಆಗ್ರಾದಿಂದ ಅಯೋಧ್ಯೆಗೆ ಸುಮಾರು 56 ಬಗೆಯ ಪೇಠಾವನ್ನು ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.
ಅಗರಬತ್ತಿಗೆ ಅಗ್ನಿ ಸ್ಪರ್ಶ:ರಾಮನ ಭಕ್ತ ಗುಜರಾತ್‌ನ ವಡೋದರದ ಗೋರಕ್ಷಕ ವಿಹಾಭಾಯಿ ಭರ್ವಾಡ್ ಎಂಬವರು 108 ಅಡಿ ಉದ್ದದ ಅಗರಬತ್ತಿಯನ್ನು ತಯಾರಿಸಿದ್ದಾರೆ. ಇನ್ನು ಇದರ ಅಗಲವು 3.5 ಅಡಿಗಳು. ಈ ದೊಡ್ಡ ಅಗರಬತ್ತಿಯನ್ನು ರಾಮಮಂದಿರದಲ್ಲಿ ಒಂದರಿಂದ ಒಂದೂವರೆ ತಿಂಗಳವರೆಗೆ ಬೆಳಗಿಸಲಾಗುತ್ತದೆ.
ಗುಜರಾತ್‌ನಿಂದ ತಂದ 108 ಅಡಿ ಉದ್ದದ ಅಗರಬತ್ತಿಯನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮಹಂತ್ ನೃತ್ಯಗೋಪಾಲ್ ದಾಸ್ ಜಿ ಮಹಾರಾಜ್ ಅವರ ಸಮ್ಮುಖದಲ್ಲಿ ಹೊತ್ತಿಸಲಾಯಿತು. ಈ ವೇಳೆ ಹಲವು ರಾಮ ಭಕ್ತರು ಹಾಜರಿದ್ದರು.
ರನ್​ವೇನಲ್ಲಿ ಕುಳಿತು ಪ್ರಯಾಣಿಕರಿಂದ ಆಹಾರ ಸೇವನೆ: ಇಂಡಿಗೋ, ಮುಂಬೈ ಏರ್​ಪೋರ್ಟ್​ಗೆ ಕೇಂದ್ರದ ನೋಟಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 9 =
Remember me
