ನವದೆಹಲಿ:ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಚಾಲನೆ ದೊರೆತಿದೆ. ಮಂದಿರವು ಯಾವುದೇ ನೈಸರ್ಗಿಕ ವಿಕೋಪ ಸಂಭವಿಸಿದರೂ ತಾಳಿಕೊಳ್ಳಲಿದೆ. ಅಂದಾಜು ಒಂದು ಸಾವಿರ ವರ್ಷ ಸುದೃಢವಾಗಿರಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಹೇಳಿದೆ.
ಟ್ರಸ್ಟ್​ ಸದಸ್ಯರು ಗುರುವಾರ ದೆಹಲಿಯಲ್ಲಿ ಸಭೆ ನಡೆಸಿ ಮಂದಿರ ನಿರ್ಮಾಣದ ಪ್ರಕ್ರಿಯೆಗಳ ಬಗ್ಗೆ ಚರ್ಚೆ ನಡೆಸಿದರು. ಮಂದಿರವನ್ನು ಭಾರತದ ಪುರಾತನ ಹಾಗೂ ಸಾಂಪ್ರದಾಯಿಕ ಕಟ್ಟಡ ನಿರ್ಮಾಣ ತಂತ್ರಗಳನ್ನು ಬಳಸಿಕೊಂಡು ಕಟ್ಟಲಾಗುತ್ತದೆ. ಇದು ಎಂಥದ್ಧೇ ಭೂಕಂಪ, ಬಿರುಗಾಳಿ ಅಥವಾ ಬೇರಾವುದೇ ನೈಸರ್ಗಿಕ ವಿಕೋಪ ಸಂಭವಿಸಿದರೂ ತಾಳಿಕೊಳ್ಳಲಿದೆ ಎಂದು ಸದಸ್ಯರು ಹೇಳಿದ್ದಾರೆ.
ಇದನ್ನೂ ಓದಿ;ಮಸೀದಿಗಳನ್ನು ಒಡೆದು ಅದೇ ಜಾಗದಲ್ಲಿ ಶೌಚಗೃಹ, ಮದ್ಯದಂಗಡಿ ನಿಮಿರ್ಸಿದ ಚೀನಾ ಸರ್ಕಾರ….!
ಮಂದಿರ ನಿರ್ಮಾಣಕ್ಕೆ ಕಬ್ಬಿಣ ಬಳಸಲಾಗುವುದಿಲ್ಲ. ಆದರೆ, ಭಾರತೀಯ ವಾಸ್ತುವೈಭವದ ನಾಗರಶೈಲಿಯಲ್ಲಿ ರೂಪುಗೊಳ್ಳಲಿದೆ. ದೇಗುಲ ಒಟ್ಟು ಮೂರು ಅಂತಸ್ತುಗಳನ್ನು ಹೊಂದಿದ್ದು, 360 ಕಂಬಗಳ ಮೇಲೆ ನಿಲ್ಲಲಿದೆ.
ಟ್ರಸ್ಟ್​ ಅಧೀನದ 57 ಎಕರೆ ಭೂಮಿ ಪೈಕಿ 10 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ದೇಗುಲ ವ್ಯಾಪಿಸಿಕೊಳ್ಳಲಿದೆ. ಹಳೆಯ ವಿನ್ಯಾಸದಲ್ಲಿ ಗೋಪುರದ ಎತ್ತರ 114 ಅಡಿಗಳಿದ್ದರೆ, ಹೊಸ ಯೋಜನೆಯಲ್ಲಿ 161 ಅಡಿ ಎತ್ತರ ಇರಲಿದೆ. ಒಟ್ಟಾರೆ ನಿರ್ಮಾಣ ಪ್ರದೇಶವೂ ಹೆಚ್ಚಾಗಲಿದೆ.
ಇದನ್ನೂ ಓದಿ;ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಗೆ ಮಗನನ್ನು 105 ಕಿ.ಮೀ. ದೂರದ ಕೇಂದ್ರಕ್ಕೆ ಸೈಕಲ್​ನಲ್ಲಿ ಕರೆತಂದ ತಂದೆ..!
ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ದೇಶದ ಪ್ರತಿಷ್ಠಿತ ಕಾಲೇಜುಗಳ ಇಂಜಿನಿಯರ್​ಗಳು ಅಯೋಧ್ಯೆಗೆ ಆಗಮಿಸಿದ್ದು, ದೇಗುಲ ಪ್ರದೇಶದಲ್ಲಿನ ಮಣ್ಣು ಪರೀಕ್ಷೆ ಮಾಡುತ್ತಿದ್ದಾರೆ. ರೂರ್ಕಿ, ಐಐಟಿ ಮದ್ರಾಸ್​ ಹಾಗೂ ಎಲ್​ ಆ್ಯಂಡ್​ ಟಿ ಕಂಪನಿಯ ಇಂಜಿನಿಯರ್​ಗಳು ಕಾರ್ಯನಿರತರಾಗಿದ್ದಾರೆ. ಮಂದಿರವು 36-40 ತಿಂಗಳಲ್ಲಿ ಪೂರ್ಣಗೊಳ್ಳುವ ವಿಶ್ವಾಸವಿದೆ.
ಮಂದಿರದ ಗರ್ಭಗೃಹ ದೇಶದಲ್ಲಿಯೇ ಅತಿ ದೊಡ್ಡದು ಎನಿಸಿದರೂ ಅಚ್ಚರಿಯಿಲ್ಲ. ಏಕೆಂದರೆ, ಇದು 20 ಅಡಿ ಉದ್ದ 20 ಅಗಲ ಇರಲಿದೆ. ಮಂದಿರ ನಿರ್ಮಾಣವನ್ನು ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಅನುಕಂಪ ಆಧಾರದ ಸರ್ಕಾರಿ ಕೆಲಸ; ಗಳಿಸಿದ್ದು ಕೆಜಿಗಟ್ಟಲೇ ಚಿನ್ನ, ಬೆಳ್ಳಿ; ಕೋಟ್ಯಂತರ ಮೌಲ್ಯದ ಸ್ವತ್ತು ವಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + three =
Remember me
