ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಹೊಣೆಗಾರಿಕೆ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಯಾದ ನಂತರದಲ್ಲಿ ಇದೇ ಮೊದಲ ಬಾರಿಗೆ ಅದರ ವಿಶ್ವಸ್ಥರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.
ಟ್ರಸ್ಟ್​ನ ಮೊದಲ ಸಭೆ ಬುಧವಾರ ನಡೆದಿತ್ತು. ಮಹಾಂತ ನೃತ್ಯ ಗೋಪಾಲದಾಸ್ ಟ್ರಸ್ಟ್​ನ ಅಧ್ಯಕ್ಷರಾಗಿದ್ದು, ಜನರಲ್ ಸೆಕ್ರೆಟರಿಯಾಗಿ ವಿಶ್ವಹಿಂದು ಪರಿಷದ್​​ನ ಚಂಪತ್ ರಾಯ್​, ಖಜಾಂಚಿಯಾಗಿ ಸ್ವಾಮಿ ಗೋವಿಂದ್​ ದೇವ್​ ಗಿರಿ ಆಯ್ಕೆಯಾಗಿದ್ದಾರೆ.ಟ್ರಸ್ಟ್​ನ ಮೊದಲ ಸಭೆಯ ನಂತರ ಎಲ್ಲ ವಿಶ್ವಸ್ಥರೂ ಪ್ರಧಾನಿಯವರನ್ನು ಅವರ ದೆಹಲಿ ನಿವಾಸದಲ್ಲೇ ಭೇಟಿಯಾಗಿದ್ದಾರೆ.ನಂತರ ಸುದ್ದಿಗಾರರ ಜತೆ ಮಾತನಾಡಿದ ಗೋಪಾಲ ದಾಸ್, ಪ್ರಧಾನಿಯವರನ್ನು ಅಯೋಧ್ಯೆಗೆ ಭೇಟಿ ನೀಡುವಂತೆ ಆಹ್ವಾನಿಸದ್ದೇವೆ ಎಂದು ತಿಳಿಸಿದ್ದಾರೆ.
ರಾಮಜನ್ಮಭೂಮಿ ಸಂಬಂಧಿಸಿ ಸುಪ್ರೀಂ ಕೋರ್ಟ್​ ನವೆಂಬರ್ 9ರಂದು ನೀಡಿದ ಐತಿಹಾಸಿಕ ತೀರ್ಪಿನ ನಂತರದಲ್ಲಿ ನರೇಂದ್ರ ಮೋದಿ ಸರ್ಕಾರ 15 ವಿಶ್ವಸ್ಥರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚಿಸಿದೆ. ಈ ಟ್ರಸ್ಟ್ ರಚನೆ ವಿಚಾರವನ್ನು ಪ್ರಧಾನಿಯವರು ಲೋಕಸಭೆಯಲ್ಲಿ ಘೋಷಿಸಿದ್ದರು. (ಏಜೆನ್ಸೀಸ್)
Delhi: Ayodhya Ram Temple trust board members met Prime Minister Narendra Modi at 7 Lok Kalyan Marg, today.pic.twitter.com/aHjbYgbSn7
— ANI (@ANI)February 20, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
