ಅಯೋಧ್ಯೆ:ಶ್ರೀರಾಮಮಂದಿರ ನಮ್ಮ ರಾಷ್ಟ್ರದ ಸಂಪ್ರದಾಯಗಳ ಆಧುನಿಕ ಸಂಕೇತವಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದರು.
ಶತಮಾನಗಳ ನಿರೀಕ್ಷೆ ರಾಮಮಂದಿರಕ್ಕೆ ಇಂದು ಶಿಲಾನ್ಯಾಸ ನೆರವೇರಿಸಿ, ನಂತರ ಮಾತನಾಡಿದ ಮೋದಿ, ಇಂದು ಜೈ ಸಿಯಾ ರಾಮ್​ ಎಂಬ ಮಂತ್ರ ಘೋಷ ಕೇವಲ ಅಯೋಧ್ಯೆಯಲ್ಲಿ ಅಷ್ಟೇ ಅಲ್ಲ. ಜಗತ್ತಿನಾದ್ಯಂತ ಮೊಳಗುತ್ತಿದೆ. ಈ ಧಾರ್ಮಿಕ ಸಮಾರಂಭದ ದಿನ ನಾನು ಎಲ್ಲ ರಾಮಭಕ್ತರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.ಇದನ್ನೂ ಓದಿ:ಅಯೋಧ್ಯೆಯಲ್ಲಿ ಪತಂಜಲಿ ಯೋಗಪೀಠದ ಬೃಹತ್ ಗುರುಕುಲ: ಯೋಜನೆ ಘೋಷಿಸಿದ ಬಾಬಾ ರಾಮದೇವ್
ಶ್ರೀರಾಮಮಂದಿರ ಭಕ್ತಿ, ನಮ್ಮ ದೇಶದ ಭಾವನೆಗಳ ಸಂಕೇತವಾಗಲಿದೆ. ಕೋಟ್ಯಂತರ ಜನರ ಸಂಕಲ್ಪ ಶಕ್ತಿಯ ಪ್ರತೀಕವಾಗಲಿದೆ. ಹಾಗೇ ಮುಂದಿನ ಪೀಳಿಗೆ ಶ್ರೀರಾಮಮಂದಿರ ಸ್ಫೂರ್ತಿ ಎಂದರು.
ಇಷ್ಟ ದಿನ ಮಂದಿರವಿಲ್ಲದೆ, ಟೆಂಟ್​​ನಲ್ಲಿದ್ದ ರಾಮಲಲ್ಲಾನಿಗೆ ಭವ್ಯ ಮಂದಿರವನ್ನು ನಿರ್ಮಿಸಲಾಗುತ್ತಿದೆ ಎಂದು ಮೋದಿಯವರು ಹೇಳಿದರು.ಇಂದು ಸರಯೂ ನದಿಯ ದಡದಲ್ಲಿ, ಭಗವಾನ್​ ಭಾಸ್ಕರನ ಸಮ್ಮುಖದಲ್ಲಿ ಭಾರತದ ಇತಿಹಾಸದಲ್ಲಿ ಅದ್ಭುತ ಅಧ್ಯಾಯ ಸೃಷ್ಟಿಯಾಗುತ್ತಿದೆ ಎಂದು ಹೇಳಿದರು. (ಏಜೆನ್ಸೀಸ್​)
LIVE: ನೆರವೇರಿತು ರಾಮಮಂದಿರದ ಶಿಲಾನ್ಯಾಸ: ರಾಮ ಪರಿವರ್ತನೆಯ ಪ್ರತಿಪಾದಕ – ಪ್ರಧಾನಿ ಮೋದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 10 =
Remember me
