ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಭೂಮಿ ಪೂಜೆ ನಡೆಸುವ ಸಂಬಂಧ ಇಂದು ಮಧ್ಯಾಹ್ನ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆ ನಡೆಸಿದೆ.
ರಾಮಮಂದಿರ ನಿರ್ಮಾಣಕ್ಕೆ ಆಗಸ್ಟ್​ 5ರಂದು ಭೂಮಿ ಪೂಜೆ ನೆರವೇರಿಸಲು ಈ ಸಭೆಯಲ್ಲಿ ಟ್ರಸ್ಟ್​ ನಿರ್ಧರಿಸಿದ್ದಾಗಿ ಮೂಲಗಳು ತಿಳಿಸಿವೆ. ಆಗಸ್ಟ್​ 5ರಂದು ಮಂದಿರ ಭೂಮಿಪೂಜೆ ನಡೆಯುವುದಾಗಿ ಊಹಾಪೋಹಗಳು ಈ ಮೊದಲೇ ಎದ್ದಿದ್ದವು. ಇದೀಗ ಅದೇ ದಿನದಂದು ಪೂಜೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.
ಇನ್ನು ಅಯೋಧ್ಯೆಯಲ್ಲಿ ಆ.5ರಂದು ನಡೆಯಲಿರುವ ರಾಮಮಂದಿರ ಭೂಮಿ ಪೂಜೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಲು ಟ್ರಸ್ಟ್​ ನಿರ್ಧಾರ ಮಾಡಿದೆ. ಅಂತೆಯೇ, ಮೋದಿಯವರೂ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.ಇದನ್ನೂ ಓದಿ:ನೋಂದಣಿಯಾಗಲಿ ನಾನು ಯಾರೆಂದು ಗೊತ್ತಾಗುತ್ತೆ: ಟೀಕಾಕಾರರಿಗೆ ಡ್ರೋನ್​ ಪ್ರತಾಪ್ ಸವಾಲು
ಒಟ್ಟು 15 ಟ್ರಸ್ಟೀಗಳಲ್ಲಿ 12 ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಉಳಿದ ಮೂವರು ಆನ್​​ಲೈನ್​ ಮೂಲಕ ಪಾಲ್ಗೊಂಡಿದ್ದರು.ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಟ್ರಸ್ಟಿಗಳಲ್ಲಿ ಓರ್ವರಾದ ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ಶ್ರೀಪಾದರು ಇಂದಿನ ಸಭೆಯಲ್ಲಿ ಆನ್​ಲೈನ್​ ಮೂಲಕ ಪಾಲ್ಗೊಂಡಿದ್ದರು. (ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
