ನವದೆಹಲಿ:ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕರೊನಾ ಕಾರಣದಿಂದಾಗಿ ಅಂದಾಜು 200 ಜನರಿಗಷ್ಟೇ ಟ್ರಸ್ಟ್​ನಿಂದ ಆಹ್ವಾನ ನೀಡಲಾಗಿದೆ. ಈ ಮೊದಲು 250 ಜನರಿಗೆ ಆಹ್ವಾನಿಸುವ ಉದ್ದೇಶ ಹೊಂದಲಾಗಿತ್ತು.
ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೊರತುಪಡಿಸಿ ಬೇರಾವ ರಾಜ್ಯದ ಸಿಎಂಗಳನ್ನು ಆಹ್ವಾನಿಸಲಾಗಿಲ್ಲ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಅತಿಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.
ಇದನ್ನೂ ಓದಿ;ಅಯೋಧ್ಯೆ ಶ್ರೀರಾಮ ಮಂದಿರಕ್ಕಾಗಿ ಉಡುಪಿಯ ಪವಿತ್ರ ಮೃತ್ತಿಕೆ ರವಾನೆ
ಇದರಂತೆ ಆಗಸ್ಟ್​ ಐದರಂದು ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಲಾಲ್​ಕೃಷ್ಣ ಅಡ್ವಾಣಿ, ಮುರಳಿ ಮನೋಹರ್​ ಜೋಶಿ, ಉಮಾಭಾರತಿ, ವಿನಯ್​ ಕಟಿಯಾರ್​, ಸಾಧ್ವಿ ರಿತಂಬರಾ, ಕಲ್ಯಾಣ್​ ಸಿಂಗ್​, ಜೈಭಾನ್​ ಸಿಂಗ್​ ಪೊವಯ್ಯ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಗೃಹ ಸಚಿವ ಅಮಿತ್​ ಷಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರಮುಖರಾಗಿದ್ದಾರೆ.
ಟ್ರಸ್ಟ್​ನ 15 ಸದಸ್ಯರೂ ಇರಲಿದ್ದಾರೆ. ಇದಲ್ಲದೇ, ಆಹ್ವಾನ ನೀಡಲಾಗಿರುವ ಪ್ರಮುಖ ಸ್ವಾಮೀಜಿಗಳೆಂದರೆ, ಶ್ರೀ ಮಹೇಂದ್ರ ನಿತ್ಯ ಗೋಪಾಲ ದಾಸ್​, ಶ್ರೀ ಸ್ವಾಮಿ ಗೋವಿಂದ್​ ದೇವ್​ ಗಿರಿ, ಶ್ರೀ ಚಂಪತ್​ ರೈ ಮೊದಲಾದವರು. ಕರ್ನಾಟಕದಿಂದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಹ್ವಾನಿತರಾಗಿದ್ದಾರೆ. ಆದರೆ, ಶ್ರೀಗಳು ಚಾತುರ್ಮಾಸ್ಯದಲ್ಲಿರುವ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಇದನ್ನೂ ಓದಿ;ಹಿಂದಿಗಿಂತಲೂ ಭವ್ಯ, ಎತ್ತರ, ವಿಶಾಲ; ಹೇಗಿದೆ ಗೊತ್ತೆ ರಾಮ ಮಂದಿರದ ನೂತನ ವಿನ್ಯಾಸ..!
ಇದಲ್ಲದೇ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​, ವಿಶ್ವ ಹಿಂದು ಪರಿಷದ್​ನ ಅಧ್ಯಕ್ಷ ಅಲೋಕ್​ ಕುಮಾರ್​ ಸೇರಿ ಇವೆರಡೂ ಸಂಘಟನೆಗಳು ಇತರ ಪ್ರಮುಖರಿಗೂ ಆಹ್ವಾನ ನೀಡಲಾಗಿದೆ.
40 ಕೆಜಿ ಬೆಳ್ಳಿ ಗಟ್ಟಿಯನ್ನು ಗರ್ಭಗುಡಿಯ ಆಳದಲ್ಲಿರುವ ಮೂಲಕ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಆಗಸ್ಟ್​ 3ರಂದು ದಿನವಿಡೀ ವೈದಿಕ ವಿಧಿ-ವಿಧಾನಗಳು ನಡೆಯಲಿವೆ.
ಮತ್ತೊಂದು ಆಘಾತಕಾರಿ ಹಂತ ತಲುಪಿದ ಕರೊನಾ; ಭಾರತದ ಮೊದಲ ಪ್ರಕರಣ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
