ಲಖನೌ:ಅಯೋಧ್ಯೆಯಲ್ಲಿ ನಿರ್ವಿುಸಲಾಗುತ್ತಿರುವ ಭವ್ಯ ರಾಮಮಂದಿರ ದೊಡ್ಡ ಭೂಕಂಪಗಳನ್ನೂ ತಾಳಿಕೊಳ್ಳಲಿದೆ. ಕನಿಷ್ಠ 1 ಸಾವಿರ ವರ್ಷ ಈ ಮಂದಿರ ಗಟ್ಟಿಮುಟ್ಟಾಗಿ ಇರಲಿದೆ. ಅಡಿಪಾಯಕ್ಕೆ ಹಾಕಲಾಗುವ ಕಲ್ಲುಗಳು ನದಿಗಳಲ್ಲಿನ ಬೃಹತ್ ಸೇತುವೆಗಳಂತೆ ಬಲವಾಗಿರುತ್ತವೆ. ಮಂದಿರವನ್ನು ಎಂತಹ ಭೂಕಂಪನದಿಂದಲೂ ಸುರಕ್ಷಿಸಿಸುತ್ತವೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ.
ರಾಮಮಂದಿರ ಸಾವಿರಾರು ವರ್ಷಗಳವರೆಗೆ ನೈಸರ್ಗಿಕ ವಿಕೋಪವನ್ನು ತಡೆದುಕೊಳ್ಳಬಲ್ಲದು. ಈ ಕುರಿತ ವಿನ್ಯಾಸದ ವಿವರಗಳು ಶೀಘ್ರದಲ್ಲೇ ಸಿದ್ಧವಾಗಲಿವೆ. ಯೋಜನೆಯನ್ನು ಕಾರ್ಯಗತಗೊಳಿಸಲಿರುವ ಲಾರ್ಸೆನ್ ಮತ್ತು ಟ್ಯುಬ್ರೊ ಕಂಪನಿ ಅಧಿಕಾರಿಗಳು ಕಳೆದ ಗುರುವಾರ ಸ್ಥಳಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಯೋಜನೆಯ ನಕ್ಷೆ ಅಂತಿಮ ಹಂತದಲ್ಲಿದೆ. ನಕ್ಷೆಗೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆಯಲಿದ್ದು, ಎಲ್ಲ ಶುಲ್ಕವನ್ನೂ ಪಾವತಿಸುತ್ತೇವೆ. ಯಾವುದೇ ಶುಲ್ಕ ವಿನಾಯಿತಿ ಪಡೆಯುವುದಿಲ್ಲ ಎಂದು ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.
ಟ್ರಸ್ಟ್ ಖಾತೆಯಲ್ಲಿ ಸದ್ಯ 42 ಕೋಟಿ ರೂ.
ಮಂದಿರ ನಿರ್ವಣದ ಸ್ಥಳ ಸಮತಟ್ಟು ಮಾಡುವಾಗ ದೊರೆತ ಶಿವಲಿಂಗ, ಮೂರ್ತಿಗಳು ಹಾಗೂ ಹಳೆಯ ಕಲಾಕೃತಿಗಳನ್ನು ದೇವಾಲಯದ ಆವರಣದಲ್ಲಿ ಪ್ರದರ್ಶನಕ್ಕಿಡಲಾಗುವುದು. ರಾಮಮಂದಿರ ನಿರ್ವಣಕ್ಕೆ ದೇಶಾದ್ಯಂತ 1 ರೂ. ನಿಂದ 1 ಕೋಟಿ ರೂ. ವರೆಗೂ ದೇಣಿಗೆ ಸಂಗ್ರಹವಾಗಿದೆ. ಟ್ರಸ್ಟ್​ನ ಖಾತೆಯಲ್ಲಿ ಸದ್ಯ 42 ಕೋಟಿ ರೂ. ಜಮಾ ಆಗಿದೆ. ಕರೊನಾ ಬಿಕ್ಕಟ್ಟಿನ ಸಮಯದಲ್ಲಿ ಟೀಕೆಗಳನ್ನು ಎದುರಿಸಿದರೂ ಕೂಡ ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಗೆ ಭೇಟಿ ನೀಡಿ, ಶಿಲಾನ್ಯಾಸ ನೆರವೇರಿಸಿದ್ದಾರೆ ಎಂದು ಚಂಪತ್ ರಾಯ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
