ನವದೆಹಲಿ:ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್​ ಅವರು ಇಂದು ಮೃತಪಟ್ಟಿದ್ದಾರೆ.
ಎನ್​ಡಿಎ ಮಿತ್ರಪಕ್ಷ ಎಲ್​ಜೆಪಿ ಸಂಸ್ಥಾಪಕರಾಗಿದ್ದ ರಾಮ್​ ವಿಲಾಸ್ ಪಾಸ್ವಾನ್​ ಪ್ರಸಕ್ತ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದಿದ್ದರು. ಬಿಹಾರದ ಹಿರಿಯ ದಲಿತ ನಾಯಕರಾಗಿದ್ದ ಪಾಸ್ವಾನ್​ ಅವರಿಗೆ ಕಳೆದ ಕೆಲವು ವಾರಗಳಿಂದಲೂ ಅನಾರೋಗ್ಯ ಕಾಡುತ್ತಿತ್ತು. ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿಂದಿನಿಂದಲೂ ಹೃದಯ ಕಾಯಿಲೆ ಹೊಂದಿದ್ದ ಪಾಸ್ವಾನ್ ಆರೋಗ್ಯ ಇತ್ತೀಚಿನ ದಿನಗಳಲ್ಲಿ ಹದಗೆಟ್ಟಿತ್ತು. ಅಕ್ಟೋಬರ್​ 3ರ ಮಧ್ಯರಾತ್ರಿ ತುರ್ತಾಗಿ ಒಂದು ಶಸ್ತ್ರ ಚಿಕಿತ್ಸೆಯನ್ನೂ ಮಾಡಲಾಗಿತ್ತು. ಅಗತ್ಯ ಬಿದ್ದರೆ ಇನ್ನೊಂದು ಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ಪುತ್ರ ಚಿರಾಗ್​ ತಿಳಿಸಿದ್ದರು.
ಪಾಸ್ವಾನ್ ಆರೋಗ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಷಾ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಸೇರಿ ಹಲವು ಗಣ್ಯರು ಚಿರಾಗ್ ಪಾಸ್ವಾನ್​ ಅವರಿಗೆ ಕರೆ ಮಾಡಿ ವಿಚಾರಿಸಿದ್ದರು. ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದರು. ಅಷ್ಟೇ ಅಲ್ಲ, ಚಿರಾಗ್ ತನ್ನ ತಂದೆಯನ್ನು ಕಾಳಜಿ ಮಾಡುವ ರೀತಿಯನ್ನೂ ಮೆಚ್ಚಿಕೊಂಡಿದ್ದರು.ಇತ್ತೀಚೆಗಷ್ಟೇ ಕೇಂದ್ರ ಸಚಿವ ಸುರೇಶ್​ ಅಂಗಡಿಯವರು ಕರೊನಾದಿಂದ ಮೃತಪಟ್ಟಿದ್ದಾರೆ. ಅದರ ಬೆನ್ನಲ್ಲೇ ಇನ್ನೋರ್ವ ಸಚಿವರನ್ನು ಕಳೆದುಕೊಂಡಿದ್ದು ಕೇಂದ್ರ ಸರ್ಕಾರಕ್ಕೆ ಆಘಾತವೇ ಸರಿ.(ಏಜೆನ್ಸೀಸ್)
ಕೇಂದ್ರ ಸಚಿವ ರಾಮ್​ ವಿಲಾಸ್ ಪಾಸ್ವಾನ್ ನಿಧನ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten − 10 =
Remember me
