| ಕೃಷ್ಣರಾಜ ಕುತ್ಪಾಡಿ
ರಾಮ ಹನುಮನ ಮಾತಿನ ಬಗ್ಗೆ ಹೆಮ್ಮೆಯ ಮಾತುಗಳನ್ನಾಡುತ್ತಾನೆ. ಎಲ್ಲ ದೃಷ್ಟಿಯಿಂದಲೂ ಅವನ ಮಾತಿನ ಪರಿಪೂರ್ಣತೆಯನ್ನು ಪ್ರಶಂಸಿಸುತ್ತಾನೆ.
ವಿದ್ವಾನ್ ಏವ ವಿಜಾನಾತಿ ವಿದ್ವಜ್ಜನ- ಪರಿಶ್ರಮಂ|
‘ವಿದ್ವಾಂಸನೇ ತಿಳಿಯುತ್ತಾನೆ ಇನ್ನೊಬ್ಬನ ಅರಿವಿನ ಆಳವನ್ನು, ಮತ್ತದನ್ನು ಗಳಿಸಲು ಹಾಕಿದ ಶ್ರಮವನ್ನು.’ ರಾಮನಲ್ಲಿಯೂ ಮಾತಿನ ಪಕ್ವತೆ ಇದ್ದುದರಿಂದ ಇನ್ನೊಬ್ಬನ ಮಾತಿನ ಪಕ್ವತೆಯನ್ನು ಅಳೆಯಬಲ್ಲವನಾಗಿದ್ದ. ಅಡುಗೆಯವನೇ ಬಲ್ಲ ಬೇರೆ ಅಡುಗೆಯವರ ರುಚಿಯ ಗುಟ್ಟನ್ನು. ಅಲ್ಲವೇ?
ಸ್ಮಿತಪೂರ್ವಾಭಿಭಾಷೀ – ತಾನೇ ಮೊದಲು ನಕ್ಕು ಮಾತನಾಡಿಸುವ ಗುಣ. ಹೆಚ್ಚಿನ ಮಂದಿಗೆ ತಾವೇ ಕೆಣಕಿ ಮಾತನಾಡುವ ವ್ಯಸನವಿರುತ್ತದೆ. ಕಾಲು ಕೆದರಿ ಜಗಳ ಕಾಯುವುದು ಕೆಲವರಿಗೆ ಅಚ್ಚುಮೆಚ್ಚು. ರಾಮ ಇದಕ್ಕೆ ತದ್ವಿರುದ್ಧ. ಯಾರೇ ಸಾಮಾನ್ಯರು ಸಿಕ್ಕರೂ ತಾನೇ ತೆರಳಿ ಮಾತಾಡುವ ಸರಳತೆ ರಾಮನಿಂದಲೇ ಕಲಿಯಬೇಕಾದ್ದು. ಬಿಟ್ಟರೆ ರಾಮನನ್ನು ಚೆನ್ನಾಗಿ ಅನುಸರಿಸುವವರಿಂದಲೇ ಹೀಗೆ ಪ್ರಭಾವಿಸಲು ಸಾಧ್ಯ. ಇದರಿಂದ ಎಷ್ಟೋ ಮಾನಸಿಕ ಬಿಕ್ಕಟ್ಟುಗಳು ಕಳಚಿ ಬೀಳುತ್ತವೆ.
ನವಿಗೃಹ್ಯ ಕಥಾರುಚಿಃ – ಮಾತನ್ನು ಪೂರ್ತಿ ಕೇಳಿಸಿಕೊಳ್ಳದೆ ಉತ್ತರಿಸುತ್ತಿರಲಿಲ್ಲ. ಜಗಳ ಕಾಯುತ್ತಿರಲಿಲ್ಲ. ಕಥಾ ಎಂದರೆ ಸುಂದರ ಹರಟೆ. ವ್ಯರ್ಥ ಮಾತುಗಳಿಂದ ಹರಟೆಯ ರುಚಿಯನ್ನು ಹಾಳು ಮಾಡುತ್ತಿರಲಿಲ್ಲ. ರಾಮನ ಈ ಗುಣಗಳಿಂದಾಗಿ ಇತರರು ಎಂದೂ ನೋಯುತ್ತಿರಲಿಲ್ಲ. ತನಗೆ ತಿಳಿಯದ ಸಂಗತಿಯಾದರೆ ಆ ವಿಷಯವನ್ನು ಮುಟ್ಟುತ್ತಿರಲಿಲ್ಲ. ಇವೆಲ್ಲವೂ ನಮ್ಮಲ್ಲಿ ಪೂರ್ತಿ ವಿರುದ್ಧವೇ ಆಗಿರುತ್ತದೆ. ಮಾತಿಗೆ ಬಲ ತುಂಬುವ, ಕೇಳಿಸಿಕೊಳ್ಳುತ್ತಾ, ಕೇಳುವವನಿಗೆ ಅನುವು ಮಾಡಿಕೊಡುವ ಈ ಗುಣ ನೆನಪಿನಲ್ಲಿಡಬೇಕಾದ್ದು.
ಮೃದು ಪೂರ್ವಂಚ ಭಾಷತೇ – ಒರಟು, ಜೋರು ಮಾತು ಕೆಲವೊಮ್ಮೆ ಫಲಕಾರಿ ಎನಿಸಿದರೂ ಅದರ ಪರಿಣಾಮ ಫಲ ತೀವ್ರ ಸ್ವರೂಪವನ್ನು ಒಳಗೊಳ್ಳುತ್ತದೆ. ಮೆದು ಮಾತು ಕೆಲವರಿಗೆ ದೌರ್ಬಲ್ಯದಂತೆ ಕಾಣಬಹುದು. ಆದರೆ ಬಹಳ ಹೊತ್ತು ಹೃದಯದಲ್ಲಿ ಬಾಳುವುದು. ಇದು ಮೃದುಭಾಷಿಕರಿಗೆ ಮಾತ್ರವಲ್ಲ; ಒರಟರಿಗೂ ಮೃದುವಾದ ಮಾತು ರುಚಿಸುತ್ತದೆ. ಗುಂಪಿನಲ್ಲಿರುವಾಗ ಎಲ್ಲರಿಗೂ ತಿಳಿಯುವ ಭಾಷೆಯಲ್ಲಿ ಮಾತಾಡುವುದು ತಿಳಿದಿರಬೇಕಾದ ಒಂದು ಮುಖ್ಯ ಅಂಶ. ಅನ್ಯ ಭಾಷೆಯಲ್ಲಿ ಮಾತನಾಡುವುದು ಭಾಷೆ ಬರದವರಿಗೆ ಕಸಿವಿಸಿ ಎನಿಸುತ್ತದೆ. ತಿಳಿಯದ ಭಾಷೆ ಕರ್ಕಶವೆನಿಸುತ್ತದೆ. ತಿಳಿದಿರುವ ಭಾಷೆಯೇ ಮೃದು ಆಗುತ್ತದೆ.
ಉಚ್ಯಮಾನೋಪಿ ಪರುಷಂ ನೋತ್ತರಂ ಪ್ರತಿಪದ್ಯತೇ|
ಜಗಳ ಯಾವಾಗಲೂ ‘ಅವನು ಶುರು ಮಾಡಿದ್ದು’ ಎಂದೇ ಕೊನೆಯಾಗುತ್ತದೆ. ಶುರು ಮಾಡಿದ್ದು ಯಾರು ಎಂಬುದನ್ನು ರಾಮ ನೋಡುತ್ತಿರಲಿಲ್ಲ. ಜಗಳ ಕೊನೆಗೊಳಿಸುವವರು ಯಾರು ಎಂದು ಕಾಯುತ್ತಿದ್ದ. ತನ್ನ ವಿಷಯದಲ್ಲಿ ಹಾಗೆ ಕೆರಳಿಸುವ ಮಾತನಾಡಿದರೆ, ಮಾತು ಕಠಿಣವಾಗಿದ್ದರೆ ಏನೂ ಉತ್ತರಿಸುತ್ತಿರಲಿಲ್ಲ. ಮಾತನಾಡಿ ಕೆಣಕಲು ಬಯಸುವವನೇ ಕೆಣಕಲಾಗಿಲ್ಲ ಎಂದು ಕಂಗೆಡುತ್ತಿದ್ದ. ಖಾಲಿ ಜಾಗಕ್ಕೆ ಬಿದ್ದ ಕೆಂಡದ ತುಂಡಿನಂತೆ ತಾನೇ ಶಾಂತವಾಗುತ್ತದೆ.
ತಿಳಿದು ಮಾತಾಡುವ ಜಾಣತನ (ತತ್ವಜ್ಞ:) – ಏನೇ ಮಾತಾಡಿದರೂ ಅದರ ವಿವರವನ್ನು ತರಿಸಿಕೊಂಡು ಆ ಬಳಿಕವೇ ಪ್ರತಿಕ್ರಿಯಿಸುವ ಗುಣ ರಾಮನದ್ದು. ತಿಳಿಯದೆ ಮಾತಾಡಿ ಪರಿಸ್ಥಿತಿಯನ್ನು ಮತ್ತಷ್ಟು ರಾಡಿ ಮಾಡುವಂತೆ ಆಗಬಾರದು ಎಂಬುದೇ ರಾಮನ ಕಾಳಜಿ. ಇಂತಹ ಕಾಳಜಿ ಸಮಾಜದ ಪ್ರತಿಯೊಬ್ಬರಿಗೂ ಮೂಡಿದರೆ ಭಾಗಶಃ ರಾಮರಾಜ್ಯ ನಿರ್ಮಾಣ ಆಗಿಯೇ ಬಿಡುತ್ತದೆ. ರಾಮ ಇಂಥ ಮಾತುಗಳನ್ನು ಆಡಿ ಮಾತಿಗೆ ಮೆರುಗು ನೀಡಿದ ಮಹಾಮಹಿಮ. ಆದ್ದರಿಂದ ರಾಮ ಮತ್ತೆಮತ್ತೆ ವಂದನೀಯ.
(ಲೇಖಕರು ಸಂಸ್ಕೃತ ಉಪನ್ಯಾಸಕರು)
ಯುವಿ ಹೆಸರಿನಲ್ಲಿದ್ದ ಐತಿಹಾಸಿಕ ದಾಖಲೆಯನ್ನು ಪುಡಿ ಪುಡಿ ಮಾಡಿದ ಕರ್ನಾಟಕದ ಯುವ ಕ್ರಿಕೆಟಿಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 18 =
Remember me
