ನವದೆಹಲಿ:ರಾಮಮಂದಿರ ಲೋಕಾರ್ಪಣೆ ದಿನಾಂಕ ಪ್ರಕಟವಾದ ನಂತರ ದೇಶಾದ್ಯಂತ ಜನರು ನಿತ್ಯ ಒಂದಿಲ್ಲೊಂದು ಕಲೆ, ಸಂಗೀತ, ನೃತ್ಯ, ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ಪಯಣ…ಹೀಗೆ ಒಂದೇ ಎರಡೇ? ನಾನಾ ರೀತಿಯಲ್ಲಿ ರಾಮಭಕ್ತಿ, ಅಭಿಮಾನ ತೋರುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ಕಲಾವಿದ ಹಳೆಯ ಟಿವಿಯ ಬಿಡಿ ಭಾಗಗಳನ್ನು ಉಪಯೋಗಿಸಿಕೊಂಡು ನೆರಳು ಬೆಳಕಿನಲ್ಲಿ ರಾಮ ಮಂದಿರದ ಸುಂದರ ಕಲಾಕೃತಿಯನ್ನು ರಚಿಸಿದ್ದಾರೆ.
ಇದನ್ನೂ ಓದಿ:ಭಾರತದ ಬಹಿಷ್ಕಾರಕ್ಕೆ ಬೆಚ್ಚಿ ಚೀನಾ ಮೊರೆ ಹೋದ ಮಾಲ್ಡೀವ್ಸ್!ವಿವಿಧ ವಸ್ತುಗಳನ್ನು ಬಳಸಿಕೊಂಡು ನೆರಳು ಬೆಳಕಿನ ಕಲಾಕೃತಿಯನ್ನು ರಚಿಸುವ ಶಿಂಟು ಮೌರ್ಯ ಹಳೆಯ ಟಿವಿಯ ಬಿಡಿ ಭಾಗಗಳನ್ನು ಉಪಯೋಗಿಸಿಕೊಂಡು ತನ್ನ ಈ ವಿಶಿಷ್ಟ ಪ್ರತಿಭೆಯಿಂದ ರಚಿಸಿರುವ ಕಲಾಕೃತಿ ಜನರನ್ನು ನಿಬ್ಬೆರಗಾಗುವಂತೆ ಮಾಡಿದೆ. ಇದರ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇವರ ಅದ್ಭುತ ಕಲೆಗಾಗಿಕೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಕಲೆ ಅನ್ನೋದು ಯಾರ ಸ್ವತ್ತು ಕೂಡ ಅಲ್ಲ. ಅದು ಅಷ್ಟು ಸುಲಭವಾಗಿ ಎಲ್ಲರಿಗೂ ಒಲಿಯೋದಿಲ್ಲ. ಒಲಿದರೆ ಅದು ಎಂತವರನ್ನು ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ಇದಕ್ಕೆ ಸೂಕ್ತ ಉದಾಹರಣೆ ಚಿತ್ರ ಕಲಾವಿದ ಶಿಂಟು ಮೌರ್ಯ. ಅವರು ಯಾವುದೇ ರೀತಿಯ ಪೈಂಟಿಗ್ ಬಳಸದೆ ಟೊಮೆಟೊ ಸಾಸ್, ಕೆಚಪ್ ಚಹಾ, ಶಾಂಪೂ ಇತ್ಯಾದಿಗಳನ್ನು ಬಳಸಿ ಅದ್ಭುತ ಚಿತ್ರಗಳನ್ನು ಬಿಡಿಸುತ್ತಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 2 =
Remember me
