ಕಲ್ಕತ್ತಾ:ರಾಮಕೃಷ್ಣ ಮಿಷನ್​ನ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ಮಹಾರಾಜ್​ ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ರಾಮಕೃಷ್ಣ ಮಿಷನ್, ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್‌ ಪೂಜ್ಯನೀಯ ಅಧ್ಯಕ್ಷರಾದ ಶ್ರೀ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರು ರಾತ್ರಿ 8.14ಕ್ಕೆ ನಿಧನರಾಗಿದ್ದಾರೆ. ಸ್ಮರಣಾನಂದರು 2017ರಲ್ಲಿ ರಾಮಕೃಷ್ಣ ಮಿಷನ್‌ನ 16ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು ಎಂದು ಬಿಡುಗಡೆ ಮಾಡಲಾಗಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸ್ಮರಣಾನಂದರನ್ನು ಮೂತ್ರನಾಳದ ಸೋಂಕಿನಿಂದಾಗಿ ಜನವರಿ 29 ರಂದು ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನಕ್ಕೆ ದಾಖಲಿಸಲಾಗಿತ್ತು. ನಂತರ ಅವರು ಉಸಿರಾಟದ ವೈಫಲ್ಯ ಅನುಭವಿಸಿದ್ದರು, ಇದಕ್ಕಾಗಿ ಅವರನ್ನು ಮಾರ್ಚ್ 03ರಿಂದ ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ರಾಮಕೃಷ್ಣ ಮಿಷನ್​ನ ಅಧ್ಯಕ್ಷರಾದ ಶ್ರೀ ಸ್ವಾಮಿ ಸ್ಮರಣಾನಂದ ಮಹಾರಾಜ್ ಅವರ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
Srimat Swami Smaranananda ji Maharaj, the revered President of Ramakrishna Math and Ramakrishna Mission dedicated his life to spirituality and service. He left an indelible mark on countless hearts and minds. His compassion and wisdom will continue to inspire generations.I had…pic.twitter.com/lK1mYKbKQt
ಇದನ್ನೂ ಓದಿ:ಬೆಂಗಳೂರು ಜಲಕ್ಷಾಮ; ಕನ್ನಡದಲ್ಲಿಯೇ ಟ್ವೀಟ್​ ಮಾಡಿ ಪರಿಹಾರ ತಿಳಿಸಿದ ಮೆಗಾಸ್ಟಾರ್​
ತಮ್ಮ ಜೀವನವನ್ನೇ ಆಧ್ಯಾತ್ಮಿಕತೆ ಮತ್ತು ಸೇವೆಗೆ ಮುಡಿಪಾಗಿಟ್ಟಿದ್ದ ಸ್ಮರಣಾನಂದರು ಅಸಂಖ್ಯಾತ ಹೃದಯಗಳಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ಅವರ ಬದುಕು ಮುಂದಿನ ತಲೆಮಾರುಗಳಿಗೆ ಸ್ಫೂರ್ತಿಯಾಗಲಿದೆ. ಹಲವು ವರ್ಷಗಳಿಂದ ನಾನು ಅವರೊಂದಿಗೆ ನಿಕಟ ಸಂಪರ್ಕದಲ್ಲಿದ್ದೆ. 2020ರಲ್ಲಿ ಬೇಲೂರು ಮಠಕ್ಕೆ ಭೇಟಿ ನೀಡಿದ್ದಾಗ, ಅವರೊಂದಿಗೆ ಸಂವಾದ ನಡೆಸಿದ್ದೆ. ಕೆಲವು ವಾರಗಳ ಹಿಂದಷ್ಟೇ ಕೋಲ್ಕತ್ತದಲ್ಲಿ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ಬರೆದುಕೊಂಡಿದ್ದಾರೆ.
ಸ್ಮರಣಾನಂದರು ಭಾರತೀಯ ಆಧ್ಯಾತ್ಮಿಕತೆಯೆ ದಾರಿದೀಪವಾಗಿದ್ದರು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಕಂಬನಿ ಮಿಡಿದಿದ್ದಾರೆ. ಈ ಮಹಾನ್ ಸನ್ಯಾಸಿ ತನ್ನ ಜೀವಿತಾವಧಿಯಲ್ಲಿ ಜಗತ್ತಿಗೆ ಆಧ್ಯಾತ್ಮಿಕ ನಾಯಕತ್ವ ನೀಡಿದ್ದಾರೆ. ಸ್ಮರಣಾನಂದರ ನಿಧನದಿಂದ ತುಂಬಾ ದುಃಖವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
Srimat Swami Smaranananda Ji was one of the leading lights of Indian spiritualism who headed Ramakrishna Math and Ramakrishna Mission. Through these organisations, he promoted spirituality and social well-being. In his passing, we may have lost his earthly presence but his life…
Deeply saddened at the news of the demise tonight of Srimat Swami Smarananandaji Maharaj, the Revered President of the Ramakrishna Math and Mission. This great monk during his lifetime has given spiritual leadership to the world order of the Ramakrishnaites and remains the source…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − fourteen =
Remember me
