ಅಯೋಧ್ಯೆ: ಅಯೋಧ್ಯೆಯ ರಾಮಲಲ್ಲಾ ವಿರಾಜಮಾನ್ ಮೂರ್ತಿಯನ್ನು 27 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪರ್ಯಾಯ ಮಂಟಪಕ್ಕೆ ಸ್ಥಳಾಂತರಗೊಳಿಸಲಾಗುತ್ತಿದೆ. ಮಾರ್ಚ್ 25ರಿಂದ ಏಪ್ರಿಲ್ 3ರವರೆಗಿನ ಚೈತ್ರ ನವರಾತ್ರಿಯ ಮುನ್ನಾ ದಿನ, ಅಂದರೆ ಮಾರ್ಚ್ 24ರಂದು ಇದನ್ನು ಪ್ರತಿಷ್ಠಾಪಿಸ ಲಾಗುವುದೆಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ಫೈಬರ್​ನ ಮಂಟಪವನ್ನು ದೆಹಲಿಯಲ್ಲಿ ಸಿದ್ಧಪಡಿಸಲಾಗುತ್ತಿದೆ. ಟ್ರಸ್ಟ್​ನ ಎರಡನೇ ಸಭೆ ಏಪ್ರಿ್ರ್ 4ರಂದು ಅಯೋಧ್ಯೆಯಲ್ಲಿ ನಡೆಯಲಿದೆಯೆಂದು ರಾಯ್ ತಿಳಿಸಿದರು.
ಟ್ರಸ್ಟ್​ನ ಇತರ ಸದಸ್ಯರೊಂದಿಗೆ ರಾಯ್ ಮಂದಿರ ಸಂಕೀರ್ಣದ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಎ.ಕೆ. ಝಾ ಮತ್ತು ಇತರ ಹಿರಿಯ ಅಧಿಕಾರಿಗಳು ಇದ್ದರು. ಟ್ರಸ್ಟ್​ನ ಕಚೇರಿಯ ಸ್ಥಳವನ್ನು ಅಂತಿಮಗೊಳಿಸಲಾಗಿದೆ. ಮಂದಿರದ ಪ್ರವೇಶ ದ್ವಾರದ ಚೆಕ್ ಪಾಯಿಂಟ್​ನಲ್ಲಿ ಕಚೇರಿ ಇರಲಿದೆ ಎಂದು ರಾಯ್ ವಿವರಿಸಿದರು.
ಹಣ ಬ್ಯಾಂಕ್​ಗೆ ಜಮಾ
ಫೆಬ್ರವರಿ 20ರಿಂದ ಮಾರ್ಚ್ 5ರ ನಡುವೆ ಸಂಗ್ರಹವಾದ ಹಣವನ್ನು ಇದೇ ಮೊದಲ ಬಾರಿಗೆ ಟ್ರಸ್ಟ್​ನ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. 8,00,982 ರೂಪಾಯಿಗಳನ್ನು ಎಸ್​ಬಿಐ ಖಾತೆಗೆ ಹಾಕಲಾಗಿದೆ ಎಂದು ಲೆಕ್ಕಪತ್ರದ ಉಸ್ತುವಾರಿ ಅಧಿಕಾರಿ ಅನಿಲ್ ಮಿಶ್ರಾ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + twenty =
Remember me
