ಲಕ್ನೋ:ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀರಾಮಮಂದಿರದ 3ಡಿ ಅನಿಮೇಶನ್ ವಿಡಿಯೊವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಇಂದು ಬಿಡುಗಡೆ ಮಾಡಿದೆ.
ಐದು ನಿಮಿಷಗಳ ಈ ವಿಡಿಯೋದಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ತಾಂತ್ರಿಕ ಅಂಶಗಳನ್ನು ನಿರ್ದಿಷ್ಟವಾಗಿ ವಿವರಿಸಲಾಗಿದೆ. 10 ಎಕರೆಯಲ್ಲಿ ದೇವಸ್ಥಾನ, 57 ಎಕರೆಯಲ್ಲಿ ಪ್ರಾರ್ಥನಾ ಸಭಾಂಗಣ, ಉಪನ್ಯಾಸ ಮಂದಿರ, ವಸ್ತು ಸಂಗ್ರಹಾಲಯ, ಕೆಫೆಟೇರಿಯಾ ಮುಂತಾದವುಗಳನ್ನು ಒಳಗೊಂಡ ಕಾಂಪ್ಲೆಕ್ಸ್ ನಿರ್ಮಾಣವಾಗಲಿದೆ. ಇಂತಹ ಇನ್ನೂ ಹಲವು ವಿವರಗಳು ಈ ವಿಡಿಯೋದಲ್ಲಿ ಇವೆ.
ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶಂಕುಸ್ಥಾಪನೆ ಮಾಡಿದರು, ನಂತರ ರಾಮ ಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ಪ್ರಾರಂಭವಾಯಿತು.
ಡಿಸೆಂಬರ್‌ನೊಳಗೆ ರಾಮ್‌ಲಲ್ಲಾ:
2022ರ ಆಗಸ್ಟ್‌ ವೇಳೆಗೆ ನೆಲಮಹಡಿಯನ್ನು ಪೂರ್ಣಗೊಳಿಸಿ, ಸ್ತಂಭಗಳನ್ನು ನಿರ್ಮಿಸುವ ಮೂಲಕ ಮುಖ್ಯ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಲಾಗುವುದು. ಡಿಸೆಂಬರ್‌ ವೇಳೆಗೆ ರಾಮಲಲ್ಲಾನನ್ನು ಗರ್ಭಗುಡಿಯಲ್ಲಿ ಕೂರಿಸುವ ಮೂಲಕ ದರ್ಶನ ಆರಂಭಿಸುವುದಾಗಿ ದೇವಸ್ಥಾನದ ಟ್ರಸ್ಟ್‌ ಈಗಾಗಲೇ ಘೋಷಣೆ ಮಾಡಿದೆ.
Sign in to your account
Please enter an answer in digits:nineteen − nine =
Remember me
