ನವದೆಹಲಿ:ಪ್ರಸಿದ್ಧ ‘ರಾಮಾಯಣ’ ಧಾರಾವಾಹಿ ನಿರ್ದೇಶಕ ರಮಾನಂದ ಸಾಗರ್ ಅವರ ಮರಿ ಮೊಮ್ಮಗಳು ಸಾಕ್ಷಿ ಚೋಪ್ರಾ ಆಗಾಗ್ಗೇ ಸುದ್ದಿಯಾಗುತ್ತಾರೆ. ತನ್ನ ಬೋಲ್ಡ್​ ಲುಕ್ ಫೋಟೋಗಳನ್ನು ಇನ್ಸ್​​ಟಾಗ್ರಾಂನಲ್ಲಿ ಹರಿಬಿಟ್ಟು ಗಮನ ಸೆಳೆಯುತ್ತಿರುತ್ತಾರೆ.
ಇದೀಗ ಸಾಕ್ಷಿ ಚೋಪ್ರಾ ರಿಯಾಲಿಟಿ ಶೋ(Social Currency) ನಿರ್ಮಾಪಕರ ವಿರುದ್ಧ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಶೂಟಿಂಗ್ ಸಂದರ್ಭದಲ್ಲಿ ತನಗೆ ಕಿರುಕುಳ ನೀಡಲಾಯಿತು ಎಂದು ಇನ್ಸ್​ಟಾಗ್ರಾಂನಲ್ಲಿ ಬರೆದುಕೊಂಡು ಆರೋಪಿಸಿದ್ದಾರೆ.
ಇದನ್ನೂ ಓದಿ:PHOTOS | ಬಿಕಿನಿ ಧರಿಸಿ ಥಾಯ್ಲೆಂಡ್​ನಲ್ಲಿ ಎಂಜಾಯ್ ಮಾಡ್ತಿದ್ದಾರೆ ‘ಗಾಳಿಪಟ’ ಟೀಚರ್!
ರಿಯಾಲಿಟಿ ಶೋ ಒಪ್ಪಂದದ ಪ್ರಕಾರ ತಾಯಿಯೊಂದಿಗೆ ಪ್ರತಿದಿನ ಒಂದು ಬಾರಿ ಫೋನ್ ಕರೆ ಮಾಡಲು ಅವಕಾಶವಿತ್ತು. ಆದರೆ ಸೆಟ್​ನಲ್ಲಿ ಶೋ ಮೇಕರ್​ಗಳ ವರ್ತನೆ ಸರಿ ಇರಲಿಲ್ಲ. ಇದನ್ನು ಬಹಿರಂಗಪಡಿಸಲು ಪ್ರಯತ್ನಿಸಿದಾಗ, ಫೋನ್ ಕಸಿದುಕೊಂಡರು. ಅಲ್ಲದೆ ಅಪರಿಚಿತರು ಬೆನ್ನು ಸ್ಪರ್ಶಿಸಿ ಗಾಯ ಮಾಡುವುದು, ಊಟ ಪಡೆದುಕೊಳ್ಳುವಾಗ ಅಶ್ಲೀಲ ಪದ ಬಳಸುವುದು ಸೇರಿದಂತೆ ಕೆಲ ಅಹಿತಕರ ದೃಶ್ಯಗಳನ್ನು ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಸಾಕ್ಷಿ ಚೋಪ್ರಾ ಆರೋಪಿಸಿದ್ದಾರೆ.
A post shared by Sakshi Chopra (@sakshichopraa)
ಒಂದು ವರ್ಷಕ್ಕೂ ಹೆಚ್ಚು ಕಾಲ ಕಿರುಕುಳ ಅನುಭವಿದ್ದೇನೆ. ಈ ಬಗ್ಗೆ ಆರಂಭದಲ್ಲಿಯೇ ತಿಳಿಸಿದ್ದೆ. ಕರೆ ಮಾಡುವ ಅವಕಾಶ ಕಸಿದುಕೊಂಡದ್ದರಿಂದ, ಇಲ್ಲಿ ಏನಾಗುತ್ತಿದೆ ಎಂಬುದು ನನ್ನ ತಾಯಿಗೆ ಗೊತ್ತಾಗುತ್ತಿರಲಿಲ್ಲ. ಸಾಕಷ್ಟು ಬಾರಿ ದೂರು ನೀಡಿದ ನಂತರ ಸಭೆಗಳನ್ನು ನಡೆಸಿ ನಿಮಗೆ ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಇದು ಕೇವಲ ಹಾಡುಗಾರಿಕೆ ಹಾಗೂ ಮನರಂಜನಾ ಕಾರ್ಯಗಳಿರುವ ರಿಯಾಲಿಟಿ ಶೋ. ಗಾಸಿಪ್, ನಾಟಕ ಇಲ್ಲ ಎನ್ನುತ್ತಲೇ ನನ್ನನ್ನು ದಾರಿ ತಪ್ಪಿಸಲಾಯಿತು. ರಿಯಾಲಿಟಿ ಶೋ​ನಲ್ಲಿ ಪಾಲ್ಗೊಂಡು ಸಾಕಷ್ಟು ಮಾನಸಿಕವಾಗಿ ನೊಂದುಕೊಳ್ಳುವಂತಹ ಸನ್ನಿವೇಶಗಳು ಎದುರಾದವು. ಅಲ್ಲದೆ ಒಬ್ಬ ವ್ಯಕ್ತಿಯಂತೂ ನನ್ನ ದೇಹದ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾನೆ. ಕೆಲ ಶೋ ನಿರ್ಮಾಪಕರು ಕೇವಲ ಕೊಳಕು ಮನರಂಜನೆಗಾಗಿ ಏನು ಮಾಡಲು ಸಿದ್ಧರಿದ್ದಾರೆ ಎಂಬುದನ್ನು ಇದು ತೋರಿಸಿದೆ ಎಂದು ಸಾಕ್ಷಿ ಚೋಪ್ರಾ ಆರೋಪಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
