ನವದೆಹಲಿ:ಶ್ರೀರಾಮನ ಆಡಳಿತವು ಭಾರತದ ಸಂವಿಧಾನಕರ್ತರಿಗೆ ಪ್ರೇರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22ರಂದು ನಡೆದ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ವೇಳೆ ‘ದೇವನಿಂದ ದೇಶ’ ಮತ್ತು ‘ರಾಮನಿಂದ ರಾಷ್ಟ್ರ’ ಎಂದು ತಾವು ಉಲ್ಲೇಖಿಸಲು ಇದೇ ಕಾರಣವಾಗಿದೆ ಎಂದು ಭಾನುವಾರ ಈ ವರ್ಷದ ಮೊದಲ ‘ಮನ್ ಕೀ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಹೇಳಿದರು. ಪ್ರಾಣ ಪ್ರತಿಷ್ಠೆ ಸಮಾರಂಭ ಕೋಟ್ಯಂತರ ಜನರನ್ನು ಒಟ್ಟಿಗೆ ತಂದಿದೆ. ಆ ಕಾರ್ಯಕ್ರಮದ ವೇಳೆ ದೇಶದ ಸಾಮೂಹಿಕ ಬಲ ಎದ್ದು ಕಾಣುತ್ತಿತ್ತು ಎಂದರು.
‘ಪ್ರತಿಯೊಬ್ಬರ ಭಾವನೆ ಒಂದೇ ಆಗಿದೆ. ಪ್ರತಿಯೊಬ್ಬರ ಭಕ್ತಿ ಒಂದೇ ಆಗಿದೆ. ಪ್ರತಿಯೊಬ್ಬರ ಮಾತಿನಲ್ಲಿ ರಾಮನಿದ್ದಾನೆ, ಪ್ರತಿಯೊಬ್ಬರ ಹೃದಯದಲ್ಲಿ ರಾಮನಿದ್ದಾನೆ’ ಎಂದೂ ಪ್ರಧಾನಿ ನುಡಿದರು. ಕಾರ್ಯಕ್ರಮದ ಅವಧಿಯಲ್ಲಿ ಅನೇಕ ಜನರು ರಾಮ ಭಜನೆಗಳನ್ನು ಹಾಡಿ ಅದನ್ನು ರಾಮನಿಗೆ ಅರ್ಪಿಸಿದ್ದಾರೆ.
ಜನವರಿ 22ರ ಸಂಜೆ ಇಡೀ ದೇಶ ‘ರಾಮ ಜ್ಯೋತಿ’ ಬೆಳಗಿಸಿ ದೀಪಾವಳಿ ಆಚರಿಸಿದೆ ಎಂದು ಹೇಳಿದರು. ಆ ಸಂದರ್ಭದಲ್ಲಿ ಕಂಡು ಬಂದ ಸಾಮೂಹಿಕ ಒಗ್ಗಟ್ಟು, ವಿಕಸಿತ ಭಾರತದ ನಮ್ಮ ಸಂಕಲ್ಪದ ಆಧಾರವಾಗಿದೆ ಎಂದು ಮೋದಿ ಅಭಿಪ್ರಾಯ ಪಟ್ಟರು. ಈ ಸಾಮೂಹಿಕ ಬಲವು ದೇಶವನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಿಳಾ ಶಕ್ತಿಗೆ ಮೆಚ್ಚುಗೆ:ಗಣರಾಜ್ಯ ದಿನ ಪರೇಡ್​ನಲ್ಲಿ ಮಹಿಳಾ ಶಕ್ತಿಯ ಉಪಸ್ಥಿತಿಯನ್ನು ಪ್ರಸ್ತಾಪಿಸಿದ ಮೋದಿ, 20 ತುಕಡಿಗಳಲ್ಲಿ 11 ಸರ್ವ-ಮಹಿಳಾ ತುಕಡಿಗಳಾಗಿದ್ದವು ಎಂದು ಹೇಳಿದರು. ಸ್ತಬ್ಧ ಚಿತ್ರಗಳಲ್ಲಿ ಕೂಡ ಮಹಿಳಾ ಕಲಾವಿದರೇ ಮಿಂಚಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು ಒಂದೂವರೆ ಸಾವಿರ ಪುತ್ರಿಯರು ಭಾಗವಹಿಸಿದ್ದರು ಎಂದರು. ಮಹಿಳಾ ನೇತೃತ್ವದ ಬೆಳವಣಿಗೆಯ ಮಂತ್ರದೊಂದಿಗೆ 21ನೇ ಶತಮಾನದ ಭಾರತ ಮುನ್ನಡೆಯುತ್ತಿದೆ ಎಂದರು.
ಸಾವಿರ ಕುಟುಂಬಗಳಿಂದ ಅಂಗಾಂಗ ದಾನ:ಅಂಗಾಂಗ ದಾನಿಗಳ ಸೇವೆಯನ್ನು ಮೆಚ್ಚಿಕೊಂಡ ಪ್ರಧಾನಿ ಮೋದಿ, ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತದ ಸುಮಾರು 1,000ಕ್ಕೂ ಹೆಚ್ಚು ಕುಟುಂಬಗಳು ತಮ್ಮ ಸಂಬಂಧಿಕರ ಅಂಗಾಂಗ ದಾನ ಮಾಡಿದ್ದಾರೆ ಎಂದರು.
ರೋಗಗಳ ಹೆಸರು ಸಂಹಿತೆ:ವ್ಯಾಧಿಗಳು, ಚಿಕಿತ್ಸೆ ಮತ್ತು ಔಷಧಗಳಿಗೆ ಒಂದು ಸಾಮಾನ್ಯ ಹೆಸರಿಲ್ಲದೆ ಉಂಟಾಗಿದ್ದ ಸಮಸ್ಯೆಯನ್ನು ಈಗ ನಿವಾರಿಸಲಾಗಿದೆ. ಆಯುರ್ವೆದ, ಸಿದ್ಧ ಮತ್ತು ಯುನಾನಿ ಔಷಧ ಪದ್ಧತಿಗಳ ಹೆಸರುಗಳನ್ನು ಕ್ರೋಡೀಕರಿಸಲಾಗಿದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಕೂಡ ಸಹಕರಿಸಿದೆ ಎಂದರು.
ಜನತಾ ಪದ್ಮ:ಗಣರಾಜ್ಯ ದಿನದ ಸಂದರ್ಭ ನೀಡಲಾದ ಪದ್ಮ ಪ್ರಶಸ್ತಿಗಳನ್ನು ಉಲ್ಲೇಖಿಸಿದ ಮೋದಿ, ತಳಮಟ್ಟದಲ್ಲಿ ಕೆಲಸ ಮಾಡಿಯೂ ಪ್ರಚಾರದಿಂದ ದೂರವುಳಿ ದವರನ್ನು ಸನ್ಮಾನಿಸಿದ್ದು ಭಾರಿ ಬದಲಾವಣೆಗೆ ಕಾರಣವಾಗಲಿದೆ ಎಂದು ಹೇಳಿದರು. ಕಳೆದ ದಶಕದಲ್ಲಿ ಪದ್ಮ ಪ್ರಶಸ್ತಿಗಳ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿರುವುದಕ್ಕೆ ತಮಗೆ ಸಂತೋಷವಾಗಿದೆ. ಅದೀಗ ಜನತಾ ಪದ್ಮವಾಗಿದೆ ಎಂದು ವರ್ಣಿಸಿದರು. ಪ್ರತಿಯೊಬ್ಬ ಪದ್ಮ ಪ್ರಶಸ್ತಿ ಪುರಸ್ಕೃತರು ದೇಶದ ಜನರಿಗೆ ಪ್ರೇರಣಾದಾಯಿ ಗಳಾಗಿದ್ದಾರೆ. ಅವರಲ್ಲಿ ಅನೇಕರು ಶಾಸ್ತ್ರೀಯ ನೃತ್ಯ, ಸಂಗೀತ, ಜಾನಪದ ನೃತ್ಯ, ರಂಗಭೂಮಿ ಮತ್ತು ಭಜನೆಯಂಥ ಕ್ಷೇತ್ರಗಳಲ್ಲಿ ದೇಶಕ್ಕೆ ಹಿರಿಮೆ ತಂದುಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಚಿರ ಯುವಕನಂತೆ ಕಾಣುವ ಅಜ್ಜನ ಹೆಲ್ತ್ ಸೀಕ್ರೆಟ್ ಏನು ಗೊತ್ತಾ ? ಕೇಳಿದ್ರೆ ನೀವು ಬೆರಗಾಗೋದು ಗ್ಯಾರಂಟಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 12 =
Remember me
