ನವದೆಹಲಿ:ಮೂರು ದಶಕಗಳ ಹಿಂದೆ ಭಾರತ ಸೇರಿ 55 ರಾಷ್ಟ್ರಗಳಲ್ಲಿ 65 ಕೋಟಿಗೂ ಅಧಿಕ ಜನರನ್ನು ಟಿವಿ ಮುಂದೆ ಕೂರಿಸಿದ್ದ ರಾಮಾಯಣ ಧಾರಾವಾಹಿ ಶನಿವಾರದಿಂದ ಪುನಾರಂಭವಾಗಲಿದೆ. ಕರೊನಾ ಲಾಕ್​ಡೌನ್​ನಿಂದಾಗಿ ಮನೆಯಲ್ಲಿ ಕುಳಿತಿರುವ ಕೋಟ್ಯಂತರ ಭಾರತೀಯ ರಿಗೆ ಮನರಂಜನೆ ನೀಡುವ ನಿಟ್ಟಿನಲ್ಲಿ ಮಾ.28ರಿಂದ ಡಿಡಿ ನ್ಯಾಷನಲ್ ಚಾನಲ್​ನಲ್ಲಿ ರಾಮಾಯಣ ಮರುಪ್ರಸಾರ ಆಗಲಿದೆ.
ಪ್ರತಿ ದಿನ ಬೆಳಗ್ಗೆ ಮತ್ತು ರಾತ್ರಿ 9ರಿಂದ 10ರವರೆಗೆ 2 ಸಾರಿ ಧಾರಾವಾಹಿ ಬಿತ್ತರಗೊಳ್ಳಲಿದೆ ಎಂದು ವಾರ್ತಾ ಸಚಿವ ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ. 1987-88ರ ಅವಧಿಯಲ್ಲಿ ಪ್ರತಿ ಭಾನುವಾರ ಬೆಳಗ್ಗೆ 9ರಿಂದ 10ರವರೆಗೆ ರಾಮಾಯಣ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿ ಎಷ್ಟು ಖ್ಯಾತಿ ಪಡೆದಿತ್ತೆಂದರೆ ಆ 1 ತಾಸು ಪೂರ್ತಿ ರಸ್ತೆಗಳು ಖಾಲಿ ಹೊಡೆಯುತ್ತಿದ್ದವು. ಶೇ.82 ವೀಕ್ಷಕರನ್ನು ಹಿಡಿದಿಟ್ಟಿದ್ದ ಈ ಧಾರಾವಾಹಿಯ ಪ್ರತಿ ಸಂಚಿಕೆಯಿಂದ ದೂರದರ್ಶನಕ್ಕೆ ಆ ಕಾಲದಲ್ಲೇ 40 ಲಕ್ಷ ರೂ. ಆದಾಯವಿತ್ತು. ಅತಿ ಹೆಚ್ಚು ಜನರು ವೀಕ್ಷಿಸುವ ಧಾರ್ವಿುಕ ಧಾರಾವಾಹಿ ಎಂಬ ಲಿಮ್ಕಾ ಬುಕ್ ಆಫ್ ರೆಕಾರ್ಡ್ ದಾಖಲೆಯೂ ರಾಮಾಯಣದ ಹೆಸರಿನಲ್ಲಿದೆ.
ಕರೊನಾ ಸೋಂಕನ್ನು ಮಟ್ಟಹಾಕಲು ಪ್ರಧಾನಿ ನರೇಂದ್ರ ಮೋದಿ 21 ದಿನಗಳ ದಿಗ್ಬಂಧನ (ಲಾಕ್​ಡೌನ್) ಘೋಷಿಸಿರುವುದರಿಂದ ಜನರು ಮನೆಯಲ್ಲೇ ಇರಬೇಕಾಗಿದೆ. ಡಿಡಿಯಲ್ಲಿ ರಾಮಾಯಣ ಧಾರಾವಾಹಿ ಪ್ರಸಾರ ಜನರ ಬೇಸರವನ್ನು ತಕ್ಕಮಟ್ಟಿಗೆ ನೀಗಿಸಲಿದೆ ಎಂದು ಅಂದಾಜಿಸಲಾಗಿದೆ.
ಕರೊನಾ ವೈರಸ್​ ಕಾರಣದಿಂದಾಗಿ ಚೀನಾ ಮೃಗಾಲಯದಲ್ಲಿ 200ಕ್ಕೂ ಹೆಚ್ಚು ಪ್ರಾಣಿಗಳ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − five =
Remember me
