ನವದೆಹಲಿ: ಮೂವತ್ತ ಮೂರು ವರ್ಷಗಳ ಬಳಿಕ ಕೂಡ ರಾಮಾಯಣ ಧಾರಾವಾಹಿ ಕಡೆಗಿನ ಸೆಳೆತ ಎಳ್ಳಷ್ಟೂ ಕಡಿಮೆಯಾಗಿಲ್ಲ. ಭಾರತ ಕಿರುತೆರೆ ಇತಿಹಾಸದಲ್ಲಿ ಯಾರಿಗೂ ಸಾಧ್ಯವಾಗದ ಹೊಸ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಾ ಮುನ್ನುಗ್ಗುತ್ತಿದೆ ರಾಮಾಯಣ ಧಾರಾವಾಹಿ. ಇದೀಗ ಈ ಕಿರುತೆರೆ ಧಾರಾವಾಹಿ ಜಗತ್ತಿನಲ್ಲೇ ಅತ್ಯಧಿಕ ಮಂದಿ ವೀಕ್ಷಿಸಿದ ಕಾರ್ಯಕ್ರಮವಾಗಿ ವಿಶ್ವ ದಾಖಲೆ ಸೃಷ್ಟಿಸಿತ್ತು.
ಇದನ್ನೂ ಓದಿ:ಈ ಬೇಸಿಗೆಯಲ್ಲಿ ನೀವು ಕಲ್ಲಂಗಡಿ ಹಣ್ಣನ್ನು ಏಕೆ ಹೆಚ್ಚು ಸೇವಿಸಬೇಕು? ಕಾರಣ ಇಲ್ಲಿದೆ ನೋಡಿ!
मंगल भवन अमंगल हारी।द्रवहु सुदसरथ अजिर बिहारी॥
धर्म, प्रेम और समर्पण की अद्वितीय गाथा…एक बार फिर आ रहा है पूरे भारत का सबसे लोकप्रिय शो 'रामायण', देखिए#DDNationalपर 5 फरवरी से प्रतिदिन शाम 6 बजे और पुनः प्रसारण दोपहर 12 बजे।#Ramayan|@arungovil12|@ChikhliaDipika|…pic.twitter.com/s6wpBr2aHn
— Doordarshan National दूरदर्शन नेशनल (@DDNational)February 4, 2024

ರಮನಾಂದ ಸಾಗರ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿ ಫೆಬ್ರುವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ. ಪ್ರತಿದಿನ ಸಂಜೆ 6 ಗಂಟೆಗೆ ಹಾಗೂ ಮರುದಿನ ಮಧ್ಯಾಹ್ನ 12 ಗಂಟೆಗೆ ಪ್ರಸಾರ ಮಾಡುವುದಾಗಿ ದೂರದರ್ಶನ ವಾಹಿನಿ ಟ್ವೀಟ್ ಮಾಡಿ ಈ ಸಂತಸದ ಸುದ್ದಿಯನ್ನು ಹಂಚಿಕೊಂಡಿದೆ.
रिपु रन जीति सुजस सुर गावत।सीता सहित अनुज प्रभु आवत॥
आ गए हैं प्रभु श्री राम! एक बार फिर वापस आ गया है पूरे भारत का सबसे लोकप्रिय शो 'रामायण'। रामानंद सागर की रामायण एक बार फिर#DDNationalपर, जल्द देखिए!#Ramayan|@arungovil12|@ChikhliaDipika|@LahriSunilpic.twitter.com/xxia0t1X2b
— Doordarshan National दूरदर्शन नेशनल (@DDNational)February 1, 2024

ಧರ್ಮ, ಪ್ರೀತಿ ಮತ್ತು ಸಮರ್ಪಣಾ ಭಾವದ ಅನನ್ಯ ಸಾಹಸಗಾಥೆ… ಮತ್ತೊಮ್ಮೆ ಇಡೀ ಭಾರತದ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ರಾಮಾಯಣ’ ಬರಲಿದೆ ಎಂದು ಡಿಡಿ ನ್ಯಾಷನಲ್‌ ಎಕ್ಸ್‌ನಲ್ಲಿ ತಿಳಿಸಿದೆ.
80 ಮತ್ತು 90 ರ ದಶಕದಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ, ಶ್ರೀರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಖಾಲಿಯಾ ಮತ್ತು ಸಹೋದರ ಲಕ್ಷ್ಮಣನಾಗಿ ಸುನಿಲ್ ಲಹ್ರಿ ಕಾಣಿಸಿಕೊಂಡಿದ್ದಾರೆ. ದೇಶದಾದ್ಯಂತ ಜನಮನ್ನಣೆಯನ್ನೂ ಈ ಧಾರಾವಾಹಿ ಗಳಿಸಿತ್ತು.ಕೊರೊನಾ ಲಾಕ್‌ಡೌನ್‌ ವೇಳೆಯೂ ರಾಮಾಯಣ ಧಾರಾವಾಹಿಯನ್ನು ಪ್ರಸಾರ ಮಾಡಲಾಗಿತ್ತು. ಆಗಲೂ ಲಕ್ಷಾಂತರ ಜನರು ವೀಕ್ಷಿಸಿ ಜನಪ್ರಿಯತೆ ಪಡೆದುಕೊಂಡಿತ್ತು.
ಬಿಗ್‌ಬಾಸ್‌ ಸ್ಕ್ರಿಪ್ಟೆಡ್ ಶೋ; ವಿನ್ನರ್​ ಕಾರ್ತಿಕ್ ಮಹೇಶ್​​ ಬೆಂಕಿ ರಿಯಾಕ್ಷನ್ ಕೇಳಿ​​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
