ಹೈದರಾಬಾದ್​:ಮಾಧ್ಯಮ ದಿಗ್ಗಜ ರಾಮೋಜಿರಾವ್ ಮೃತದೇಹದ ಅಂತಿಮ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇದನ್ನೂ ಓದಿ:ಪ್ರಧಾನಿ ಪದಗ್ರಹಣ ಸಮಾರಂಭ: ಇವರೇ ನೋಡಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸಂಸದರು
ಈ ಮೊದಲೇ ಅವರ ಸ್ಮಾರಕವನ್ನು (ಸ್ಮೃತಿವನಂ) ರಾಮೋಜಿ ಫಿಲ್ಮ್ ಸಿಟಿಯ ವಿಶಾಲ ಮೈದಾನದಲ್ಲಿ ನಿರ್ಮಿಸಿದ್ದು, ಅಲ್ಲಿಯೇ ಅವರ ಅಂತಿಮ ಸಂಸ್ಕಾರ ನಡೆಯಿತು.
ರಾಮೋಜಿ ರಾವ್ ಅವರ ಪುತ್ರ ಕಿರಣ್ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು. ವಿವಿಧ ಪಕ್ಷಗಳ ಮುಖಂಡರು, ರಾಮೋಜಿ ಸಮೂಹದ ಕಂಪನಿಗಳ ಉದ್ಯೋಗಿಗಳು ಮತ್ತು ಜನರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ರಾಮೋಜಿ ರಾವ್ ಧ್ವಜಾರೋಹಣ ನೆರವೇರಿಸಿದರು. ಪೊಲೀಸರು ತಮ್ಮ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದ ನಂತರ ಅಂತಿಮ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಯಿತು.
ಇದಕ್ಕೂ ಮುನ್ನ ರಾಮೋಜಿ ಫಿಲಂಸಿಟಿಯಲ್ಲಿರುವ ರಾಮೋಜಿ ರಾವ್ ನಿವಾಸದಿಂದ ಅಂತಿಮ ಯಾತ್ರೆ ಆರಂಭಗೊಂಡು ಸ್ಮೃತಿವನ ತಲುಪಿತು. ಮೃತದೇಹವನ್ನು ಹೊತ್ತು ಸಾಗುತ್ತಿದ್ದಾಗ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ನಾರಾ ಚಂದ್ರಬಾಬು ನಾಯ್ಡು ಹೆಗಲು ನೀಡಿ ಸಾಗಿದ್ದುದು ವಿಶೇಷವಾಗಿತ್ತು.
ಮುಖಂಡರಾದ ವಿ.ಹನುಮಂತ ರಾವ್, ನಾರಾ ಲೋಕೇಶ್, ಎರ್ರಬೆಳ್ಳಿ ದಯಾಕರ್ ರಾವ್, ನಾಮ ನಾಗೇಶ್ವರ ರಾವ್, ಕೆ.ಆರ್.ಸುರೇಶ್ ರೆಡ್ಡಿ, ವಾವಿರಾಜು ರವಿಚಂದ್ರ, ಸುಜನಾ ಚೌಧರಿ, ಜೂಪಲ್ಲಿ ಕೃಷ್ಣರಾವ್, ಅರಿಕೆಪುಡಿ ಗಾಂಧಿ, ವೇಣಿಗಂಡ್ಲ ರಾಮು ಬಂಡಿ ಸಂಜಯ್, ಕಿಶನ್ ರೆಡ್ಡಿ ಮತ್ತಿತರರು ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.
ತನ್ನ ಮೇಲಿನ ದಾಳಿಯನ್ನು ಸಂಭ್ರಮಿಸುವವರಿಗೆ ಕಂಗನಾ ತಿರುಗೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 19 =
Remember me
