ಕೊಚ್ಚಿ:ಕಳೆದ ಸೆಪ್ಟೆಂಬರ್​ 3 ರಂದು 24 ವರ್ಷದ ಯುವತಿ ರಮ್ಸಿ ಹಾಸನ್​ ಕೇರಳದ ಕೊಲ್ಲಂ ಜಿಲ್ಲೆಯ ಕೊಟ್ಟಿಯಾಂನಲ್ಲಿ ಆತ್ಮಹತ್ಯೆ ಮಾಡಿಕೊಂಡಳು. ಸಾವಿಗೀಡಾಗಿ ಒಂದು ವಾರಗಳೇ ಕಳೆದರೂ ಆಕೆಯ ಸಾವಿನ ಕುರಿತು ರಾಜ್ಯದ ಜನರು ಮಾತನಾಡಿಕೊಳ್ಳುತ್ತಿದ್ದು, ಕೇರಳ ಪೊಲೀಸರು ಧಾರಾವಾಹಿ ನಟಿ ಹಾಗೂ ರಮ್ಸಿ ಭಾವಿ ಪತಿ ಹ್ಯಾರಿಸ್​ ಮುಹಮ್ಮದ್ (24) ಅತ್ತಿಗೆಯ ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಇದೇ ವೇಳೆಯಲ್ಲಿ ಹ್ಯಾರಿಸ್​ ವಿರುದ್ಧ ಅತ್ಯಾಚಾರ, ಆತ್ಮಹತ್ಯೆಗೆ ಪ್ರಚೋದನೆ ಮತ್ತು ಗರ್ಭಿಣಿ ಮಹಿಳೆಯ ಗರ್ಭಪಾತಕ್ಕೆ ಕಾರಣ ಸೇರಿದಂತೆ ವಿವಿಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಇದನ್ನು ಹೊರತುಪಡಿಸಿದರೆ ಹ್ಯಾರಿಸ್​ ಅತ್ತಿಗೆ ಹಾಗೂ ಉಳಿದ ಕುಟುಂಬಸ್ಥರ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಈ ಪ್ರಕರಣದಲ್ಲಿ ಅವರ ಪಾತ್ರದ ಬಗ್ಗೆ ಇನ್ನು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇನ್ನು ರಮ್ಸಿ ಕುಟುಂಬದ ಪ್ರಕಾರ ಸುಮಾರು 8 ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿದ್ದ ಹ್ಯಾರಿಸ್​ ಮತ್ತು ರಮ್ಸಿ 2019ರಲ್ಲಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದರು. ಆದರೂ, ಹ್ಯಾರಿಸ್​ ಮತ್ತೊಬ್ಬ ಯುವತಿಯನ್ನು ಮದುವೆ ಮಾಡಿಕೊಳ್ಳಲು ಪ್ಲ್ಯಾನ್​ ಮಾಡಿದ್ದ. ಇದು ರಮ್ಸಿಗೆ ನಿರಾಸೆಗೊಳಿಸಿತ್ತು. ರಮ್ಸಿ ಒಮ್ಮೆ ಗರ್ಭಿಣಿಯು ಆಗಿದ್ದಳು. ಹ್ಯಾರಿಸ್​ ಅತ್ತಿಗೆ ಲಕ್ಷ್ಮಿ ಪ್ರಮೋದ್​ ಮುಂದೆ ನಿಂತು ರಮ್ಸಿಗೆ ಗರ್ಭಪಾತ ಮಾಡಿಸಿದ್ದರು. ಇದಕ್ಕೆ ಹ್ಯಾರಿಸ್​ ನಕಲಿ ಮದುವೆ ಪ್ರಮಾಣ ಪತ್ರವನ್ನು ವೈದ್ಯಕೀಯ ಅಧಿಕಾರಿಗಳು ತೋರಿಸಿದ್ದ ಎಂದು ರಮ್ಸಿ ಪಾಲಕರು ಗಂಭೀರ ಆರೋಪ ಮಾಡಿದ್ದಾರೆ. ಇದೀಗ ಗರ್ಭಪಾತ ಸಂಬಂಧ ಲಕ್ಷ್ಮಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನೂ ಓದಿ:ನಟಿ ಕಂಗನಾರನ್ನು ಭಗತ್​​ ಸಿಂಗ್​ಗೆ ಹೋಲಿಸಿ ನಟ ವಿಶಾಲ್​ ಕೊಟ್ಟ ಕಾರಣ ಹೀಗಿದೆ..!
ಸುಮಾರು ಒಂದು ವರ್ಷದಿಂದಲೂ ಹ್ಯಾರಿಸ್​ ನಮ್ಮ ಬಳಿ ಹಣ ಮತ್ತು ಆಭರಣಗಳನ್ನು ಪಡೆದುಕೊಂಡಿದ್ದಾನೆ. ಇಬ್ಬರ ನಡುವಿನ ಸಂಬಂಧ ತಿಳಿದ ಬೆನ್ನಲ್ಲೇ ಮದುವೆಯಾಗುವಂತೆ 2018ರಲ್ಲೇ ಹ್ಯಾರಿಸ್​ಗೆ ಹೇಳಿದ್ದೆವು. ಅದೇ ಸಮಯದಲ್ಲಿ ರಮ್ಸಿ ತಂಗಿಗೂ ಮದುವೆ ನಿಶ್ಚಯವಾಗಿತ್ತು. ಆದರೆ, ತನ್ನದೇ ಬಿಸಿನೆಸ್​ ಶರು ಮಾಡಬೇಕಿದೆ. ಸದ್ಯ ಮದುವೆಯಾಗಲಾರೆ, ಕೇವಲ ನಿಶ್ಚಿತಾರ್ಥ ಮಾತ್ರ ಮಾಡಿಕೊಳ್ಳುತ್ತೇನೆಂದಿದ್ದ ಎಂದು ರಮ್ಸಿ ಪಾಲಕರು ಹೇಳಿದ್ದಾರೆ.
ಇದರ ನಡುವೆ ರಮ್ಸಿ ಪಾಲಕರು ಹ್ಯಾರಿಸ್​ ತಾಯಿ ಮತ್ತು ರಮ್ಸಿ ನಡುವೆ ನಡೆದಿರುವ ಫೋನ್​ ಸಂಭಾಷಣೆಯನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲಿ ರಮ್ಸಿ ಹ್ಯಾರಿಸ್​ ಬಿಟ್ಟು ಬದುಕಲು ಸಾಧ್ಯವಿಲ್ಲ. ಅವನೊಂದಿಗೆ ಬಾಳುವುದೇ ನನ್ನ ಕನಸು ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ, ನಿಮ್ಮ ಮಗ ನನ್ನನ್ನು ತ್ಯಜಿಸಿದ್ದಾನೆ ಎನ್ನುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸುವ ಹ್ಯಾರಿಸ್​ ತಾಯಿ ನಾನು ರಮ್ಸಿಗಾಗಿ ಪ್ರಾರ್ಥಿಸುತ್ತೇನೆ. ನಿಮ್ಮ ಕುಟುಂಬದವರು ಆಯ್ಕೆ ಮಾಡಿದ ಹುಡುಗನನ್ನು ಮದುವೆ ಆಗು ಎಂದು ಹೇಳುವುದು ಆಡಿಯೋ ರೆಕಾರ್ಡ್​ನಲ್ಲಿದೆ.
ಇನ್ನು ಹ್ಯಾರಿಸ್​ ಮತ್ತು ರಮ್ಸಿ ನಡುವೆ ನಡೆದ ಸಂಭಾಷಣೆಯಲ್ಲಿ ರಮ್ಸಿ ಅಳುತ್ತಾ ನಾನೊಮ್ಮೆ ನಿನ್ನನ್ನು ಭೇಟಿ ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಆದರೆ, ಭೇಟಿಯಾಗಲು ನನಗೆ ಇಷ್ಟವಿಲ್ಲ. ನಿನ್ನೊಂದಿಗೆ ಮಾತನಾಡಲು ನನಗೆ ಸಮಯವು ಇಲ್ಲ ಎಂದು ಹೇಳುವುದು ದಾಖಲಾಗಿದೆ. ಜನರು ನಿನ್ನ ಬಗ್ಗೆ ಮಾತನಾಡುವುದು ಮತ್ತು ನನ್ನೊಂದಿಗೆ ಸುತ್ತಾಡಿ, ಇದೀಗ ಇನ್ನೊಂದು ಮಹಿಳೆಯನ್ನು ಮದುವೆಯಾಗುತ್ತಿರುವ ಸತ್ಯವನ್ನು ಕೇಳಲು ನಿನಗೆ ಇಷ್ಟ ಇಲ್ಲವೆಂಬುದು ನನಗೆ ಗೊತ್ತಿದೆ. ಅದು ನಡೆಯುವುದಿಲ್ಲ ಎಂದು ನಾನು ಖಾತರಿಪಡಿಸುತ್ತೇನೆ. ಆದರೆ, ನೀವು ಮತ್ತು ನಿಮ್ಮ ಭಾವಿ ಪತಿಯನ್ನು ಭೇಟಿಯಾಗಬೇಕೆಂದು ನಾನು ಬಯಸುತ್ತೇನೆ ಮತ್ತು ಭಾವಿ ಪತಿ ನಿನ್ನನ್ನು ನಿಜವಾಗಿಯೂ ಪ್ರೀತಿಸುತ್ತಾಳೆ ಹಾಗೂ ಉಳಿದೆಲ್ಲಾ ಜೀವನ ನಿನ್ನೊಂದಿಗೆ ಇರುತ್ತಾಳೆಂದು ನನ್ನ ಮುಂದೆ ಹೇಳಬೇಕೆಂದು ನಾನು ಬಯಸುತ್ತೇನೆ ಎಂದು ರಮ್ಸಿ ಕೇಳಿಕೊಳ್ಳುವುದು ಸಂಭಾಷಣೆಯಲ್ಲಿದೆ.
ಇದನ್ನೂ ಓದಿ:ತ್ರಿಬಲ್ ಮರ್ಡರ್​ಗೆ ಬೆಚ್ಚಿಬಿದ್ದ ಸಕ್ಕರೆ ನಾಡು: ದೇವಾಲಯ ಆವರಣದಲ್ಲೇ ನಡೆಯಿತು ಭೀಕರ ಕೊಲೆ
ಇದೇ ದಾಖಲೆಗಳು ಇದೀಗ ಪೊಲೀಸರಿಗೆ ಅಸ್ತ್ರವಾಗಿದ್ದು, ಮತ್ತಷ್ಟು ದಾಖಲೆಗಳನ್ನು ಕಲೆಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ರಮ್ಸಿ ಆತ್ಮಹತ್ಯೆಯಲ್ಲಿ ಹ್ಯಾರಿಸ್​ ಕುಟುಂಬವೂ ಭಾಗಿಯಾಗಿದೆಯಾ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಿರುವುದಾಗಿ ಕೇರಳ ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ವಿಡಿಯೋ: ಹುಟ್ಟುವ ಮಗುವಿನ ಲಿಂಗ ತಿಳಿಯಲು ಜಗತ್ತನ್ನೇ ನಿಬ್ಬೆರಗಾಗಿಸಿದರು ಈ ದಂಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 4 =
Remember me
