ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಉದ್ಯಮಿ ಹಾಗೂ ಮಹೀಂದ್ರಾ ಗ್ರೂಪ್​ ಆಫ್​ ಚೇರ್ಮನ್​ ಆನಂದ್​ ಮಹೀಂದ್ರಾ ತಮ್ಮ ಕಣ್ಣಿಗೆ ಬಿದ್ದಂತಹ ವಿಶೇಷತೆಗಳನ್ನು ಜನರಿಗೆ ಆಗಾಗ ಪರಿಚಯಿಸುತ್ತಿರುತ್ತಾರೆ. ಅದರಂತೆ ಇಂದು ಮಧ್ಯಾಹ ಮಹೀಂದ್ರಾ ಅವರು ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವ ವಿಡಿಯೋ ಅನೇಕರ ಗಮನ ಸೆಳೆದಿದೆ.
ವಿಡಿಯೋದಲ್ಲಿ ಏನಿದೆ?:ಆಶ್ರಮವೊಂದರಲ್ಲಿ ಇರುವ ಎತ್ತು ಅಥವಾ ಹೋರಿಯೊಂದು ತನ್ನಷ್ಟಕ್ಕೆ ತಾನೇ ಎತ್ತಿನಬಂಡಿಯನ್ನು ಚಲಾಯಿಸಿ, ವಿವಿಧ ಕೆಲಸಗಳನ್ನು ಮಾಡುತ್ತಿರುವ ರೋಮಾಂಚನಕಾರಿ ದೃಶ್ಯಗಳಿವೆ.
ಎಲ್ಲಿಯೂ ಯಾರೊಬ್ಬರ ಸಹಾಯವನ್ನು ಕೋರದೆ ತನ್ನ ಕೆಲಸವನ್ನು ಹೋರಿ ತಾನೇ ಮಾಡಿಕೊಳ್ಳುತ್ತದೆ. ಈ ವಿಡಿಯೋವನ್ನು ಆನಂದ್​ ಮಹೀಂದ್ರಾ ಅವರು ಇಂದು ಮಧ್ಯಾಹ್ನ ಶೇರ್​ ಮಾಡಿದ್ದು, ಒಂದು ವೇಳೆ ರಾಮು (ಹೋರಿಯ ಹೆಸರು) ಚೆನ್ನಾಗಿ ಮಾತನಾಡುತ್ತಿದ್ದರೆ, ಪ್ರಪಂಚದಲ್ಲಿ ಇರುವ ಸ್ವಯಂ ಘೋಷಿತ ಪ್ರೇರಣ ಭಾಷಣಕಾರರಿಗಿಂತ ರಾಮು ಪಾಸಿಟಿವ್​ ಲೈಫ್​ ಬಗ್ಗೆ ಒಳ್ಳೆಯ ಸಲಹೆಗಳನ್ನು ನೀಡುತ್ತಾನೆ ಎಂದಿದ್ದಾರೆ.
If Ramu could speak, I bet he would give better advice on how to be ‘Life-Positive’ than every other self-proclaimed motivational speaker in the world. 👏🏽👏🏽👏🏽pic.twitter.com/Cc62GtTZJp
— anand mahindra (@anandmahindra)January 30, 2024

ಜಾಗರೂಕ್​ ಕಿಶಾನ್​ ಹೆಸರಿನ ಯೂಟ್ಯೂಬ್​ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಕೆಲವೇ ದಿನಗಳಲ್ಲಿ 70 ಸಾವಿರಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಆನಂದ್​ ಮಹೀಂದ್ರಾ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡ ಒಂದೇ ಗಂಟೆಯಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 5 ಸಾವಿರಕ್ಕೂ ಅಧಿಕ ಮಂದಿ ಲೈಕ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗರ್ಭಿಣಿ ಮೇಲೆ ಟ್ರ್ಯಾಕ್ಟರ್​ ಹರಿಸಿ ಲೋನ್​ ರಿಕವರಿ ಏಜೆಂಟ್​ನಿಂದ ಹತ್ಯೆ ಆರೋಪ: ಮೌನ ಮುರಿದ ಆನಂದ್​ ಮಹೀಂದ್ರಾ

ಅವಮಾನಿಸಿದ್ದ ಯುವ ರೈತನ ಮನೆಗೆ ಹೊಸ ಗೂಡ್ಸ್ ಜೀಪ್ ಕಳುಹಿಸಿ ಆನಂದ್​ ಮಹೀಂದ್ರಾ ಹೇಳಿದ್ದು ಹೀಗೆ…

ಪುತ್ರನಿಗಾಗಿ ವಾಹನ ಆವಿಷ್ಕರಿಸಿದ ತಂದೆಗೆ ಬಂಪರ್​ ಆಫರ್​ ನೀಡಿ ಸರ್ಕಾರವನ್ನು ಟೀಕಿಸಿದ ಆನಂದ್​ ಮಹೀಂದ್ರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
