ಬೆಂಗಳೂರು:ಸ್ಯಾಂಡಲ್​ವುಡ್​ ಕ್ವೀನ್ ಎನಿಸಿಕೊಂಡಿದ್ದ ರಮ್ಯಾ, ಸ್ಯಾಂಡಲ್​ವುಡ್ ಜತೆ ರಾಜಕೀಯವನ್ನು ತ್ಯಜಿಸಿ ದೂರದ ದೇಶಕ್ಕೆ ತೆರಳಿ ಅಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಈ ಮಧ್ಯೆ ಆಗಾಗ ತಮ್ಮ ರಾಜಕೀಯ ಜೀವನವನ್ನು ನೆನಪಿಸಿಕೊಳ್ಳುವ ರಮ್ಯಾ, ಇದೀಗ ಒಂದು ವಿಶೇಷ ಘಟನೆಯನ್ನು ವಿವರಿಸಿದ್ದಾರೆ. ರಾಹುಲ್ ಗಾಂಧಿಯೊಂದಿಗೆ ಜರ್ಮನಿಗೆ ತೆರಳಿದ್ದಾಗ ತಾವು ಮಾಡಿದ ತಪ್ಪು, ಅದರಿಂದಾದ ಸಮಸ್ಯೆಯನ್ನು ಜನರಿಗೆ ತಿಳಿಸಿದ್ದಾರೆ.
ಅದು ರಮ್ಯಾ ಅವರು ಕಾಂಗ್ರೆಸ್​ ಪಕ್ಷದ ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದ ಸಮಯ. ಆಗ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿದ್ದರು. ಆಗ ಪಕ್ಷದ ವತಿಯಿಂದ ಜರ್ಮನಿಗೆ ಸಂಸದರ ಒಂದು ನಿಯೋಗದ ಭೇಟಿಯನ್ನು ಆಯೋಜಿಸಲಾಗಿತ್ತು. ರಾಹುಲ್​ ಗಾಂಧಿ, ರಮ್ಯಾ ಸೇರಿ ಅನೇಕರು ಜರ್ಮನಿಗೆ ತೆರಳಿದ್ದರು. ಜರ್ಮನಿಯ ಬರ್ಲಿನ್​ನಲ್ಲಿದ್ದ ಮ್ಯೂಸಿಯಂ ಒಂದಕ್ಕೆ ನಾಯಕರೆಲ್ಲರು ಭೇಟಿ ನೀಡಿದ್ದರು. ಅಲ್ಲಿನ ಕೆಲವು ಸಂಸದರು ರಾಹುಲ್ ಅವರನ್ನು ಕರೆದುಕೊಂಡು ಹೋಗಿ ಮ್ಯೂಸಿಯಂನ ವಿಶೇಷತೆಗಳನ್ನು ತೋರಿಸುತ್ತಿದ್ದರು. ಆಗ ರಮ್ಯಾ ಅವರು ರಾಹುಲ್ ಅವರ ಫೋಟೋವನ್ನು ವಿವಿಧ ಭಂಗಿಗಳಲ್ಲಿ ತೆಗೆದು ಅದನ್ನು ನಮ್ಮ ಸೋಶಿಯಲ್ ಮೀಡಿಯಾ ಟೀಂಗೆ ಕಳುಹಿಸಿದ್ದರಂತೆ. ಅದನ್ನು ರಾಹುಲ್ ಗಾಂಧಿಯ ಹಲವು ಮುಖಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಯಿತು.
“ಆದರೆ ನಾವೆಂದುಕೊಂಡಂತೆ ಆ ಫೋಟೋಗಳು ಒಳ್ಳೆಯ ಅಭಿಪ್ರಾಯಗಳನ್ನು ಮೂಡಿಸಲೇ ಇಲ್ಲ. ಬೇರೆ ಪಕ್ಷಗಳು ಆ ಫೋಟೋಗಳನ್ನು ತಮ್ಮ ವಿನಾದಕ್ಕೆ ಬಳಸಿಕೊಂಡರು. ನಾನಾ ರೀತಿಯಲ್ಲಿ ಆ ಫೋಟೋಗಳನ್ನು ಟ್ರೋಲ್ ಮಾಡಲಾಯಿತು. ಕ್ಷಣ ಮಾತ್ರದಲ್ಲಿ ಫೋಟೋಗಳು ಭಾರೀ ವೈರಲ್ ಆದವು. ಆಗ ನಾನು ಮಾಡಿದ ತಪ್ಪಿನಿಂದಾಗಿ ನನಗೆ ಒಂದೆರೆಡು ದಿನ ನಿದ್ರೆಯೇ ಬಂದಿರಲಿಲ್ಲ. ಆದರೆ ಅದು ನನ್ನ ತಪ್ಪಿಗೆ ತಕ್ಕ ಶಿಕ್ಷೆಯಲ್ಲ ಎನ್ನವುದು ನನಗೆ ಗೊತ್ತಿತ್ತು. ಆಮೇಲೆ ರಾಹುಲ್ ಅವರ ಬಳಿ ಹೋಗಿ ನಾನು ಸೋಶಿಯಲ್ ಮೀಡಿಯಾ ಹೆಡ್ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ, ನನ್ನಿಂದ ತಪ್ಪಾಗಿದೆ ಎಂದು ಹೇಳಿದೆ. ಅದಕ್ಕೆ ಅವರು ನಗುತ್ತಾ, ಇಟ್ಸ್​ ಒಕೆ, ಮುಂದಿನ ಸಲ ಪೋಸ್ಟ್ ಮಾಡುವಾಗ ಕೇರ್​ಫುಲ್ ಆಗಿರು ಎಂದು ಹೇಳಿದರು. ನನಗೆ ಕಣ್ಣೀರು ಬಂದುಬಿಟ್ಟಿತು.” ಎಂದು ಹೇಳಿದ್ದಾರೆ.
ಆ ಸ್ಥಾನದಲ್ಲಿ ಬೇರೆ ಯಾರೇ ಇದ್ದಿದ್ದರೂ ನನಗೆ ರಾಜೀನಾಮೆ ಕೊಡುವಂತೆ ಹೇಳುತ್ತಿದ್ದರು. ಆದರೆ ರಾಹುಲ್ ಗಾಂಧಿ ಅವರ ಮನಸ್ಸು ದೊಡ್ಡದಿತ್ತು. ನಾನು ಸೋಶಿಯಲ್ ಮೀಡಿಯಾ ಹೆಡ್ ಆಗಿದ್ದಾಗ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರ ವಿಶಾಲ ಹೃದಯ, ಸಹಾನುಭೂತಿ, ಕ್ಷಮಿಸುವ ಒಳ್ಳೆತನ, ದ್ವೇಷಕ್ಕೆ ಬದಲು ಪ್ರೀತಿ ಹಂಚುವ ಗುಣ, ಸದಾ ಸತ್ಯವನ್ನೇ ಹೇಳುವ ಗುಣ, ಜನರಿಗಾಗಿ ಮಿಡಿಯುವ ಹೃದಯ, ದೂರದೃಷ್ಟಿ ಎಲ್ಲವೂ ಅವರನ್ನು ನಾನು ಮುಂದಿನ ನಾಯಕ ಎಂದು ಗುರುತಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ. ಅವರ ಬಗ್ಗೆ ಯಾವುದೇ ಸುಳ್ಳು ಸುದ್ದಿ ಹರಿದಾಡಿದರೂ ನಾನು ಅದನ್ನು ನಂಬುವುದಿಲ್ಲ ಎಂದು ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)
ಹೆಂಡತಿಯನ್ನು ಕೊಂದು ಅರೆಸುಟ್ಟು, ಸೂಟ್​ಕೇಸ್​ನಲ್ಲಿ ತುಂಬಿ ಒಗೆದ! ಕರೊನಾ ಬಂದು ಸತ್ತಳೆಂದು ಕಥೆ ಹೆಣೆದ!

ಹೆರಿಗೆಯಾದ ಅಕ್ಕನನ್ನು ನೋಡಲು ಹೋದ ತಂಗಿಯನ್ನೇ ರೇಪ್ ಮಾಡಿದ ಭಾವ!

11 ವಯಸ್ಸಿಗೇ ಮಗುವಿಗೆ ಜನ್ಮವಿತ್ತ ಬಾಲಕಿ! ಇದು ಹೇಗಾಗಿದ್ದು ಎಂದು ತಲೆ ಕೆಡಿಸಿಕೊಂಡಿರುವ ಕುಟುಂಬ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
