ಮುಂಬಯಿ:ಕಾನೂನು ದುರ್ಬಳಕೆ ಮಾಡಿಕೊಂಡು ಬಂಗಲೆ ಕೆಡವಿದ ಕ್ರಮವನ್ನು ಪ್ರಶ್ನಿಸಿ ನಟಿ ಕಂಗನಾ ರಾಣಾವತ್ ಬಾಂಬ್ ಹೈಕೋರ್ಟ್​ನಲ್ಲಿ ರಿಟ್​ ಪಿಟಿಷನ್ ಸಲ್ಲಿಸಿದ್ದಾರೆ. ಇದರಲ್ಲಿ 2 ಕೋಟಿ ರೂಪಾಯಿ ಪರಿಹಾರದ ಬೇಡಿಕೆಯನ್ನೂ ಅವರು ಇಟ್ಟಿದ್ದು, ಇದನ್ನು ಪಿಟಿಷನ್ ವೆಚ್ಚದೊಂದಿಗೆ ತಿರಸ್ಕರಿಸಬೇಕು ಎಂದು ಬೃಹನ್ಮುಂಬೈ ಮಹಾನಗರಪಾಲಿಕೆ (ಬಿಎಂಸಿ) ಹೈಕೋರ್ಟ್​ಗೆ ಮನವಿ ಮಾಡಿದೆ.
ದೂರುದಾರರು ನಿಯಮ ಪಾಲಿಸದೇ ಕೋರ್ಟ್ ಮೆಟ್ಟಿಲೇರಿದ್ದಾರೆ. ವಾಸ್ತವಾಂಶವನ್ನು ಮುಚ್ಚಿಟ್ಟು ಪರಿಹಾರ ಕೇಳುತ್ತಿದ್ದಾರೆ. ಅವರ ಕೇಸ್ ಯಾವುದೇ ಪರಿಹಾರಕ್ಕೆ ಅರ್ಹವಾದುದಲ್ಲ ಎಂದು ಕೋರ್ಟ್​ಗೆ ಬಿಎಂಸಿ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದೆ.
ಇದನ್ನೂ ಓದಿ:“ಆರ್​.ವಿ.ಯುವರಾಜ್ ಬಂದ್ರು ಅಂತ ಸಿಸಿಬಿ ಇನ್​ಸ್ಪೆಕ್ಟರ್​ಗೆ ಹೇಳಿ…”
ರಾಣಾವತ್ ಅವರಿಗೆರ ಸೇರಿದ ಪಾಲಿ ಹಿಲ್ ಬಂಗಲೆಯನ್ನು ಬಿಎಂಸಿ ಸೆಪ್ಟೆಂಬರ್ 9ರಂದು ಕೆಡವಿತ್ತು. ಅನುಮತಿ ತೆಗೆದುಕೊಳ್ಳದೇ ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಈ ಕ್ರಮವನ್ನು ಅದು ಕೈಗೊಂಡಿತ್ತು. ಅದೇ ದಿನ ಕಂಗನಾ ಕೋರ್ಟ್ ಮೆಟ್ಟಿಲೇರಿದ್ದರಿಂದ ಬಿಎಂಸಿಯ ನಡೆಗೆ ತಡೆ ಸಿಕ್ಕಿತ್ತು. ನ್ಯಾಯಮೂರ್ತಿ ಎಸ್​.ಜೆ.ಕಥಾವಲ್ಲಾ ಅವರಿದ್ದ ನ್ಯಾಯಪೀಠ ಈ ತಡೆ ನೀಡಿತ್ತು.
ಇದನ್ನೂ ಓದಿ:ಆರೆಸ್ಸೆಸ್ ಶಕ್ತಿ ಕೇಂದ್ರ ನಾಗಪುರದಲ್ಲಿ 9 ಹಿರಿಯ ಆರೆಸ್ಸೆಸ್ ನಾಯಕರಿಗೆ ಕರೋನಾ, ಆಸ್ಪತ್ರೆಗೆ ದಾಖಲು
ಸೆಪ್ಟೆಂಬರ್ 15ರಂದು ರಾಣಾವತ್ ರಿಟ್ ಪಿಟಿಷನ್ ದಾಖಲಿಸಿದ್ದು, ಬಿಎಂಸಿಯಿಂದ 2 ಕೋಟಿ ರೂಪಾಯಿ ಪರಿಹಾರವನ್ನು ಅಪೇಕ್ಷಿಸಿದ್ದಾರೆ. ಇದಕ್ಕೆ ಉತ್ತರವಾಗಿ ಅಡ್ವೋಕೇಟ್ ಜೋಯೆಲ್ ಕಾರ್ಲೋಸ್ ಮೂಲಕ ಬಿಎಂಸಿ ಪ್ರತಿಕ್ರಿಯೆಯನ್ನು ಸಲ್ಲಿಸಿದೆ. ಅಲ್ಲದೆ ಅದರ ನಡೆಯನ್ನು ಸಮರ್ಥಿಸಿಕೊಳ್ಳುವ ಸಮಜಾಯಿಷಿಯನ್ನೂ ಕೋರ್ಟ್​ಗೆ ಸಲ್ಲಿಕೆ ಮಾಡಿದೆ, ಮುಂದಿನ ವಿಚಾರಣೆ ಸೆ.22ಕ್ಕೆ ನಿಗದಿಯಾಗಿದೆ. (ಏಜೆನ್ಸೀಸ್)
ಬಂಧಿತ ಅಲ್​ಕೈದಾ ಉಗ್ರರ ಪ್ರವರವಿದು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eleven =
Remember me
