ಮುಂಬೈ :ಹೆಚ್ಚುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಜನರು ಜನನಿಬಿಡ ಸ್ಥಳಗಳಿಗೆ ಹೋಗುವುದನ್ನು ತಡೆಯಲು ಮತ್ತು ಸೋಂಕಿತರನ್ನು ಬೇಗ ಪತ್ತೆ ಹಚ್ಚಲು ಮುಂಬೈ ನಗರಪಾಲಿಕೆಯು ಹೊಸತೊಂದು ಮಾರ್ಗವನ್ನು ಹುಡುಕಿದೆ. ಅದೆಂದರೆ ಮಾಲ್, ಬಸ್​ ನಿಲ್ದಾಣ, ರೈಲು ನಿಲ್ದಾಣ, ಮಾರ್ಕೆಟ್, ರೆಸ್ಟೋರೆಂಟ್, ಸರ್ಕಾರಿ ಕಚೇರಿ ಮುಂತಾದೆಡೆ ರಾಂಡಮ್​ ಆಗಿ ಕರೊನಾ ಪರೀಕ್ಷೆ ನಡೆಸುವುದು. ಕಡ್ಡಾಯವಾಗಿರುವ ಈ ಪರೀಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕಾದರೂ ಜನರು ಕೆಲಸವಿಲ್ಲದೆ ಓಡಾಡುವುದನ್ನು ನಿಲ್ಲಿಸುತ್ತಾರೆ ಎಂಬುದು ಪಾಲಿಕೆಯ ಆಶಯವಿದ್ದ ಹಾಗಿದೆ.
ಬೃಹನ್​ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯು ಇಂದು ಜನನಿಬಿಡ ಪ್ರದೇಶಗಳಲ್ಲಿ ರಾಪಿಡ್ ಆ್ಯಂಟಿಜನ್ ಟೆಸ್ಟಿಂಗ್(ಆರ್​ಎಟಿ) ನಡೆಸಲು ಮಾರ್ಗಸೂಚಿಗಳನ್ನು ಜಾರಿಗೊಳಿಸಿದೆ. ಇದರ ಪ್ರಕಾರ ಮಾಲ್​ಗಳಲ್ಲಿ, ರಾಜ್ಯದ ಒಳಗೆ ಪ್ರವೇಶಿಸುವ ರೈಲ್ವೇ ನಿಲ್ದಾಣಗಳಲ್ಲಿ, ಎಂಎಸ್​ಆರ್​ಟಿಸಿ ಬಸ್ ಡಿಪೋ, ಖಾವ್ ಗಲ್ಲಿ, ಮಾರ್ಕೆಟ್ ಪ್ರದೇಶ, ಪ್ರವಾಸೀ ಸ್ಥಳಗಳು ಮತ್ತು ಸರ್ಕಾರಿ ಕಚೇರಿಗಳ ಆವರಣದಲ್ಲಿ ಇರುವ ಯಾವುದೇ ವ್ಯಕ್ತಿಯನ್ನು ನಿಲ್ಲಿಸಿ ಕರೊನಾ ಪರೀಕ್ಷೆಗೊಳಪಡಿಸುವ ಅಧಿಕಾರವನ್ನು ತನ್ನ ಸಿಬ್ಬಂದಿಗೆ ಬಿಎಂಸಿ ನೀಡಿದೆ.
ಇದನ್ನೂ ಓದಿ:8ನೇ ತರಗತಿ ಮುಗಿಸದವ ಸಿಸೇರಿಯನ್ ಮಾಡಿದ… ಮುಂದಾದದ್ದು ದೊಡ್ಡ ದುರಂತ
ಈ ರೀತಿ ಪರೀಕ್ಷೆ ಮಾಡಿಸಿಕೊಳ್ಳುವುದಕ್ಕೆ ಜನರ ಅನುಮತಿ ಬೇಕಿಲ್ಲ. ಅರ್ಥಾತ್ ಜನತುಂಬಿದ ಪ್ರದೇಶಗಳಲ್ಲಿ ಹೋದರೆ, ಬಿಎಂಸಿ ಸಿಬ್ಬಂದಿ ಪರೀಕ್ಷೆ ಮಾಡಿಸಲು ಆಯ್ಕೆ ಮಾಡಿದಲ್ಲಿ, ಅದು ಕಡ್ಡಾಯವಾಗುತ್ತದೆ. “ಯಾವೊಬ್ಬ ನಾಗರಿಕ ಪರೀಕ್ಷೆಯನ್ನು ನಿರಾಕರಿಸಿದಲ್ಲಿ, ಅದು ಸಾಂಕ್ರಾಮಿಕ ಕಾಯ್ದೆ, 1897 ರ ಅಡಿಯಲ್ಲಿ ಅಪರಾಧವಾಗುತ್ತದೆ. ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಬಿಎಂಸಿ ಹೇಳಿದೆ.
ಈ ಪ್ರಕಾರವಾಗಿ ದಿನವೊಂದಕ್ಕೆ ಮುಂಬೈನ ಪ್ರತಿಯೊಂದು ರೈಲು ನಿಲ್ದಾಣದಲ್ಲಿ 1000 ಪ್ರಯಾಣಿಕರ ಮೇಲೆ ಮತ್ತು ಪ್ರತಿಯೊಂದು ಮಾಲ್​ನಲ್ಲಿ 400 ಜನರ ಮೇಲೆ ಕಡ್ಡಾಯ ಕರೊನಾ ಪರೀಕ್ಷೆ ನಡೆಸುವ ಟಾರ್ಗೆಟ್​ಅನ್ನು ಅಧಿಕಾರಿಗಳಿಗೆ ನೀಡಲಾಗಿದೆ. ಜೊತೆಗೆ ನಗರದ ಪ್ರತಿಯೊಂದು ವಾರ್ಡ್​ನಲ್ಲಿ ಪ್ರತಿದಿನ ತಲಾ 1000 ಪರೀಕ್ಷೆಗಳನ್ನು ಮಾಡಿಸಬೇಕು ಎನ್ನಲಾಗಿದ್ದು, ಈ ಮೂಲಕ ನಗರದ 24 ವಾರ್ಡ್​ಗಳಲ್ಲಿ ಒಟ್ಟು 24,000 ಪರೀಕ್ಷೆಗಳನ್ನು ಪ್ರತಿದಿನ ನಡೆಸುವ ಸಿದ್ಧತೆ ನಡೆದಿದೆ.
ಇದನ್ನೂ ಓದಿ:ರೇಪ್ ಮಾಡಲು ಯತ್ನಿಸಿದವನ ಮರ್ಮಾಂಗವನ್ನೇ ತುಂಡರಿಸಿದ ಮಹಿಳೆ; ಬುಕ್ಕಾದವು ಎರಡು ಕೇಸು !
ಎಲ್ಲೆಡೆ ಈ ಪರೀಕ್ಷೆಗಳನ್ನು ಉಚಿತವಾಗಿ ನಡೆಸಲಿರುವ ಬಿಎಂಸಿ, ಮಾಲ್​ಗಳಲ್ಲಿ ಮಾತ್ರ ಜನರೇ ಅದರ ವೆಚ್ಚವನ್ನು ಭರಿಸಬೇಕು ಎಂದು ಹೇಳಿದೆ. ಕರೊನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ವೃಥಾ ತಿರುಗಾಡುವುದರ ಮೇಲೆ ಅಂಕುಶ ಹಾಕಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಜೊತೆಗೇ ಕರೊನಾ ಸೋಂಕು ತಗುಲಿದ ವ್ಯಕ್ತಿಯನ್ನು ಬೇಗ ಪತ್ತೆ ಹಚ್ಚಿ ಅದು ಮತ್ತಷ್ಟು ಜನಕ್ಕೆ ಹರಡದಂತೆ ತಡೆಯಲು ಇದು ಸಹಾಯಕವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಯಾರೀ ಮತ್ಸ್ಯಕನ್ಯೆ ? ಮತ್ತೊಮ್ಮೆ ನೋಡಿ…
ಮನೆ-ಸೈಟು ಮಾರಾಟದ ಮೋಸಕ್ಕೆ ಬ್ರೇಕ್! 100 ವಾರ್ಡ್‌ಗಳಲ್ಲಿ ಇ-ಆಸ್ತಿ ಸಾಫ್ಟ್​​ವೇರ್​​ ಜಾರಿ
ಇಂದು ವರ್ಲ್ಡ್ ಓರಲ್ ಹೆಲ್ತ್ ಡೇ… ನಿಮ್ಮ ಬಾಯಿಯ ಬಗ್ಗೆ ಹುಷಾರು!


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × two =
Remember me
