ಮುಂಬೈ:ವೀರ ಸಾವರ್ಕರ್​ ಅವರ ವಿರುದ್ಧ ಮಾತನಾಡಿದ ಮತ್ತು ಭಾರತ ರತ್ನಕ್ಕೆ ವಿರೋಧಿಸಿದವರನ್ನು ಟೀಕಿಸಿದ್ದ ಶಿವಸೇನಾ ಮುಖಂಡ ಸಂಜಯ್​ ರಾವತ್​ ಅವರ ಹೇಳಿಕೆಯನ್ನು ಸಾವರ್ಕರ್​ ಮೊಮ್ಮಗ ರಂಜಿತ್​ ಸಾವರ್ಕರ್​ ಸ್ವಾಗತಿಸಿದ್ದಾರೆ.
ಶಿವಸೇನೆಯು ಸಾವರ್ಕರ್​ಗೆ ಆಗುವ ಅವಮಾನವನ್ನು ಖಂಡಿಸುತ್ತ ಬಂದಿದೆ. ಸಂಜಯ್​ ರಾವತ್​ ಅವರ ಹೇಳಿಕೆ ಈ ಮಾತಿಗೆ ಪೂರಕವಾಗಿದೆ. ಈಗಲಾದರೂ ಶಿವಸೇನೆಯವರು ಕಾಂಗ್ರೆಸ್​ಗೆ ಈ ಬಗ್ಗೆ ಮನವರಿಕೆ ಮಾಡಿಕೊಡಲಿ ಎಂದಿದ್ದಾರೆ.
ವೀರ ಸಾವರ್ಕರ್​ ಅವರಿಗೆ ಭಾರತ ರತ್ನ ನೀಡಲು ವಿರೋಧಿಸುವವರನ್ನು ಅಂಡಮಾನ್​ ಜೈಲಿನಲ್ಲಿ ಎರಡು ದಿನ ಇಡಬೇಕು ಎಂದು ಶಿವಸೇನಾ ಮುಖಂಡ ಸಂಜಯ್​ ರಾವತ್​ ಇಂದು ಮುಂಜಾನೆ ಕಿಡಿ ಕಾರಿದ್ದರು.
ಸಾವರ್ಕರ್​ ಅವರನ್ನು ವಿರೋಧಿಸುವವರು ಯಾವ ಪಕ್ಷದವರೇ ಆಗಲಿ, ಯಾವ ಸಿದ್ಧಾಂತದವರೇ ಆಗಲಿ ಅವರನ್ನು ಸಾವರ್ಕರ್​ ಅವರನ್ನು ಬ್ರಿಟಿಷರು ಇರಿಸಿದ್ದ ಅಂಡಮಾನ್​ ಜೈಲಿನಲ್ಲಿ ಇಡಬೇಕು. ಆಗ ಅವರಿಗೆ ಗೊತ್ತಾಗುತ್ತದೆ, ಸಾವರ್ಕರ್​ ಅವರ ದೇಶಕ್ಕೆ ಕೊಡುಗೆ ಏನು ಎಂದು ಎಂದು ಹೇಳಿದ್ದರು.
ಈ ಮಾತುಗಳನ್ನು ಉಲ್ಲೇಖಿಸಿದ ರಂಜಿತ್​ ಸಾವರ್ಕರ್​, ರಾಹುಲ್​ ಗಾಂಧಿ ಅವರ ಮಾತುಗಳನ್ನು ಗಿಳಿ ಪಾಠದ ಹಾಗೆ ಹೇಳುವ ಕಾಂಗ್ರೆಸ್​ ತಿಳಿಯಲಿ ಎಂದಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 1 =
Remember me
