|ಹರೀಶ್ ಬೇಲೂರುಬೆಂಗಳೂರು
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಅಭ್ಯರ್ಥಿಗಳು ಮದ್ಯದ ಆಮಿಷ ಒಡ್ಡುತ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿರುವ ಬೆನ್ನಲ್ಲೇ, ಅಕ್ರಮ ಮದ್ಯ ಮಾರಾಟ, ದಾಸ್ತಾನು ಮತ್ತು ಸಾಗಾಟ ತಡೆಗೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ರ‍್ಯಾಂಕಿಂಗ್ ಮಾದರಿ ಟಾಸ್ಕ್ ಕೊಟ್ಟಿದೆ.
ರಾಜ್ಯದಲ್ಲಿ ಮತದಾನಕ್ಕೆ 23 ದಿನಗಳು ಬಾಕಿ ಇದೆ. ಕೆಲ ರಾಜಕೀಯ ಅಭ್ಯರ್ಥಿಗಳು ಮತದಾರರಿಗೆ ಆಮಿಷವೊಡ್ಡಲು ಅಡ್ಡದಾರಿಯಲ್ಲಿ ಕೋಟ್ಯಂತರ ರೂ. ಮೌಲ್ಯದ ಮದ್ಯ ಸಂಗ್ರಹಿಸುತ್ತಿದ್ದಾರೆ. ಹಾಗಾಗಿ, ಮದ್ಯ ಖರೀದಿ ಮೇಲೆ ಚುನಾವಣಾ ಆಯೋಗ ಹಾಗೂ ಇಲಾಖೆ ಕಣ್ಗಾವಲು ಇಟ್ಟಿದೆ. ಹೊಸ ರ‍್ಯಾಂಕಿಂಗ್ ಮಾದರಿ ಟಾಸ್ಕ್​ನಲ್ಲಿ ಅಕ್ರಮ ಮದ್ಯ ಮಾರಾಟ ತಡೆ, ಕೇಸ್ ದಾಖಲಿಸಲು ವಿಫಲವಾದ ಹಾಗೂ ಕಳಪೆ ಕಾರ್ಯಕ್ಷಮತೆ ತೋರುವವರ ವಿರುದ್ಧ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ.
20 ಜಿಲ್ಲೆಗಳಲ್ಲಿ ಕಳಪೆ ಸಾಧನೆ:ಬೆಳಗಾವಿ ವಿಭಾಗದ 5, ಮಂಗಳೂರು ಮತ್ತು ಹೊಸಪೇಟೆ ವಿಭಾಗದಲ್ಲಿ ತಲಾ 4, ಮೈಸೂರು, ಬೆಂಗಳೂರು ದಕ್ಷಿಣ ಮತ್ತು ಬೆಂಗಳೂರು ಉತ್ತರ ವಿಭಾಗದಲ್ಲಿ ತಲಾ 5 ಹಾಗೂ ಕಲಬುರಗಿ ವ್ಯಾಪ್ತಿಯಲ್ಲಿ ಒಂದು ಜಿಲ್ಲೆ ಸೇರಿ 20 ಜಿಲ್ಲೆಗಳು ಅಕ್ರಮ ಮದ್ಯ ಮಾರಾಟ ತಡೆಯುವಲ್ಲಿ ವಿಫಲವಾಗಿವೆ. ಈ ಜಿಲ್ಲೆಗಳಲ್ಲಿ ಅಬಕಾರಿ ಉಪ ಆಯುಕ್ತರು ಸೇರಿ ಇತರ ಸಿಬ್ಬಂದಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ವಿರುದ್ಧ ಕೇಸ್ ದಾಖಲಿಸಲು ವಿಫಲರಾಗಿದ್ದು, ಕಳಪೆ ಸಾಧನೆ ತೋರಿರುವುದು ರ‍್ಯಾಂಕಿಂಗ್ ಪಟ್ಟಿಯ ವರದಿಯಲ್ಲಿ ಕಂಡುಬಂದಿದೆ.
39 ಕೋಟಿ ರೂ. ಮದ್ಯ ವಶ:ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದ ಬಳಿಕ ಮಾ.4ರಿಂದ ಏ.4ರವರೆಗೆ ರಾಜ್ಯಾದ್ಯಂತ 39 ಕೋಟಿ ರೂ.ಮೌಲ್ಯದ 5,18,546 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 7,268 ಪ್ರಕರಣ ದಾಖಲಾಗಿದೆ. 1,351 ಗಂಭೀರ ಕೇಸ್​ಗಳು ವರದಿಯಾಗಿವೆ. 5,823 ಮಂದಿಯನ್ನು ಬಂಧಿಸಲಾಗಿದೆ. 759 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕೃಷ್ಣರಾಜ, ದೇವದುರ್ಗ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಚಾಮರಾಜಪೇಟೆ, ಕುಡಚಿ, ಧಾರವಾಡ, ಹೊಸದುರ್ಗ, ಬೆಳಗಾವಿ ದಕ್ಷಿಣ, ಅರಬಾವಿ, ರಾಜಾಜಿನಗರ, ಕಾರ್ಕಳ, ದಾವಣಗೆರೆ, ಎಚ್.ಡಿ.ಕೋಟೆ, ಮಂಗಳೂರು, ದಾವಣಗೆರೆ, ಗುಂಡ್ಲುಪೇಟೆ, ಚಾಮರಾಜನಗರ, ಯಲ್ಲಾಪುರ, ಬೆಳ್ತಂಗಡಿ, ಮಾಗಡಿ, ಶ್ರವಣಬೆಳಗೊಳ, ನೆಲಮಂಗಲ ಹಾಗೂ ಬೇಲೂರು ಸೇರಿ ರಾಜ್ಯದ ಇತರ ವಿಧಾನಸಭಾ ಕ್ಷೇತ್ರಗಳಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ತಲಾ ಹತ್ತಾರು ಕೇಸ್ ದಾಖಲಾದರೆ, ಕೆಲ ಜಿಲ್ಲೆಗಳ ಕ್ಷೇತ್ರಗಳಲ್ಲಿ ನೂರಕ್ಕೂ ಹೆಚ್ಚು ಕೇಸ್​ಗಳು ವರದಿಯಾಗಿವೆ.
ರಾಜಧಾನಿಯಲ್ಲೇ ಹೆಚ್ಚು ವಶ:ಬೆಂಗಳೂರಿನಲ್ಲಿ 20 ಕೋಟಿ ರೂ.ಗೂ ಹೆಚ್ಚು ಮೊತ್ತದ ಮದ್ಯ ವಶಪಡಿಸಿಕೊಂಡು ನೂರಾರು ಕೇಸ್ ದಾಖಲಿಸಲಾಗಿದೆ. ಕೊಪ್ಪಳ, ಚಿಕ್ಕಮಗಳೂರು, ದಾವಣಗೆರೆ, ಕೊಡಗು, ಚಿತ್ರದುರ್ಗ, ಬಳ್ಳಾರಿ ಮತ್ತು ಗದಗ ಸೇರಿ ಇತರ ಜಿಲ್ಲೆಗಳಲ್ಲಿ ಹೇಳಿಕೊಳ್ಳುವಷ್ಟು ಕೇಸ್​ಗಳು ದಾಖಲಾಗಿಲ್ಲ.
ಸಚಿವರ ಕ್ಷೇತ್ರದಲ್ಲಿ 39 ಕೇಸ್ ದಾಖಲು:ಅಬಕಾರಿ ಸಚಿವ ಕೆ. ಗೋಪಾಲಯ್ಯ ಪ್ರತಿನಿಧಿಸುವ ಮಹಾಲಕ್ಷ್ಮೀಲೇಔಟ್ ಕ್ಷೇತ್ರ ವ್ಯಾಪ್ತಿಯಲ್ಲಿ 39 ಕೇಸ್ ದಾಖಲಿಸಿ 78,38,796 ಮೌಲ್ಯದ 2,895 ಲೀ.ಮದ್ಯ ಜಪ್ತಿ ಮಾಡಲಾಗಿದೆ. 25 ಮಂದಿಯನ್ನು ಬಂಧಿಸಲಾಗಿದೆ.
ಅಕ್ರಮ ಮದ್ಯ ಮಾರಾಟ ತಡೆಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಇಂಜಿನಿಯರಿಂಗ್ ಮಾದರಿಯಲ್ಲಿ ರ‍್ಯಾಂಕಿಂಗ್ ಹಾಗೂ ಅಂಕ ನೀಡಲಾಗುತ್ತಿದೆ. ಹೆಚ್ಚು ಕೇಸ್, ಮದ್ಯ ಜಪ್ತಿ ಹಾಗೂ ಮದ್ಯ ಮಾರಾಟ ಮಾಡುವವರನ್ನು ಬಂಧಿಸಿದರೆ ಅಂಥ ಉಪ ಆಯುಕ್ತರಿಗೆ ಅಥವಾ ಜಿಲ್ಲೆಗೆ ರಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನ ನೀಡಲಾಗುತ್ತದೆ. ಕಳಪೆ ಸಾಧನೆ ಮಾಡಿದವರಿಗೆ ರಾಂಕಿಂಗ್ ವಾರು ಹಂಚಿಕೆ ಮಾಡಲಾಗುತ್ತದೆ. ಕೆಲ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪವೆಸಗಿ ಅಭ್ಯರ್ಥಿಗಳ ಪರ ಕಾರ್ಯನಿರ್ವಹಿಸುತ್ತರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ತಾನೂ ಕೋಟ್ಯಧಿಪತಿ, ಮಕ್ಕಳಿಬ್ಬರೂ ಕೋಟ್ಯಧಿಪತಿ, ಹೆಂಡತಿಯೂ ಕೋಟಿ ರೂ. ಮೌಲ್ಯದ ಚಿನ್ನಾಭರಣದ ಒಡತಿ, ಆದ್ರೆ ಸ್ವಂತ ಕಾರಿಲ್ಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
