ಮುಂಬೈ:ಬಾಲಿವುಡ್​​ನ ಕ್ಯೂಟ್​​ ಕಪಲ್​​ ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​ ಜೋಡಿ. ದಂಪತಿ ಮಗುವಿನ ನೀರಿಕ್ಷೆಯಲ್ಲಿ ಇದ್ದಾರೆ. ಆದರೆ ಈ ಮಧ್ಯೆ ಈ ಜೋಡಿ ಕುರಿತಾಗಿ ಹೊಸದೊಂದು ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸೋಷಿಯಲ್ ಮೀಡಿಯಾದಲ್ಲಿರುವ ತಮ್ಮ ವೆಡ್ಡಿಂಗ್ ಫೊಟೋಗಳನ್ನು ಡಿಲೀಟ್ ಮಾಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಶಾಕ್ ಆಗಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫುಲ್ ಆ್ಯಕ್ಟಿವ್ ಆಗಿರುವ ಈ ಸ್ಟಾರ್ ಹೀರೋ ರಣವೀರ್​ ಸಿಂಗ್​ ದೀಪಿಕಾ ಪಡುಕೋಣೆ ಜತೆಗಿನ ಎಲ್ಲಾ ಮದುವೆ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ ನಿಂದ ಡಿಲೀಟ್ ಮಾಡಿದ್ದಾರೆ. ರಣವೀರ್ ಸಿಂಗ್ ಮದುವೆ ಫೋಟೋಗಳನ್ನು ಏಕಾಏಕಿ ಡಿಲೀಟ್ ಮಾಡಿರುವುದು ಅಭಿಮಾನಿಗಳಿಗೂ ಶಾಕ್ ಆಗಿದೆ.

ರಣವೀರ್ ಸಿಂಗ್ ಅವರು ಇನ್​ಸ್ಟಾಗ್ರಾಮ್​​ನಲ್ಲಿ ಒಟ್ಟು 133 ಪೋಸ್ಟ್‌ಗಳನ್ನು ಹೊಂದಿದ್ದಾರೆ. ಆದರೆ ದೀಪಿಕಾ ಜತೆಗಿನ ಮದುವೆ ಫೋಟೋಗಳನ್ನ ಮಾತ್ರ ಡಿಲೀಟ್ ಮಾಡಿದ್ದಾರೆ. ಶಾಕಿಂಗ್ ವಿಷಯ ಏನೆಂದರೆ ಫೋಟೋಗಳಷ್ಟೇ ಅಲ್ಲ, ಮದುವೆ ವಿಡಿಯೋಗಳನ್ನೆಲ್ಲ ರಣವೀರ್ ಸಿಂಗ್ ಡಿಲೀಟ್ ಮಾಡಿದ್ದಾರೆ. ಮತ್ತೊಂದೆಡೆ, ದೀಪಿಕಾ ಪಡುಕೋಣೆ ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಅದೇ ಮದುವೆಯ ಫೋಟೋಗಳಿವೆ. ಇದರಿಂದಾಗಿ ಅನುಮಾನಗಳು ಮೂಡುತ್ತಿವೆ.
A post shared by Ranveer Singh (@ranveersingh)

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ವಾಗ್ವಾದ ನಡೆದಿದೆ, ಅದಕ್ಕಾಗಿಯೇ ರಣವೀರ್ ಸಿಂಗ್ ಮದುವೆ ಫೋಟೋಗಳನ್ನು ಅಳಿಸಿದ್ದಾರೆ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ದೀಪಿಕಾ ಸದ್ಯ ಗರ್ಭಿಣಿ. ಇಂತಹ ಸಮಯದಲ್ಲಿ ವಿಚ್ಛೇದನವನ್ನು ನಂಬಲು ಸಾಧ್ಯವಿಲ್ಲ ಎಂದು ಇತರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಬಹುಶಃ ಯಾವುದೋ ತಪ್ಪುಗಳಿಂದ ಮದುವೆಯ ಚಿತ್ರಗಳು ಕಣ್ಮರೆಯಾಗಿರಬಹುದು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಪರಸ್ಪರ ಪ್ರೀತಿಸಿ ನವೆಂಬರ್ 2018 ರಲ್ಲಿ ಇಟಲಿಯಲ್ಲಿ ವಿವಾಹವಾದರು. ಈ ಜೋಡಿ ಬರೋಬ್ಬರಿ 5 ವರ್ಷಗಳ ಕಾಲ ಸುಖವಾಗಿ ದಾಂಪತ್ಯ ನಡೆಸಿದ್ದಾರೆ. ದೀಪಿಕಾ ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಮಧ್ಯೆ ರಣವೀರ್ ಮದುವೆಯ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದರಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಯಾಕೆ ಫೋಟೋಗಳು ಏಕಾಏಕಿ ಡಿಲೀಟ್​ ಆಗಿವೆ ಎನ್ನುವುದನ್ನು ದಂಪತಿಯಿಂದ ಉತ್ತರ ಬರುವವರೆಗೂ ಕಾದು ನೋಡಬೇಕಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 1 =
Remember me
