ಮುಂಬೈ:ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್​ ಸಿಂಗ್​ ಜೋಡಿ ಈಚಿನ ತಾರಾಜೋಡಿಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇದೀಗ ರಣವೀರ್​ ಸಿಂಗ್​ ತಮ್ಮ ಅಪ್ಪನಾಗುವ ಆಸೆಯನ್ನು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೀಪಿಕಾ ಚಿಕ್ಕವರಿದ್ಧಾಗ ಇದ್ದಂತೆ ಕ್ಯೂಟ್​ ಆಗಿರುವ ಹೆಣ್ಣು ಮಗು ಆದರೆ ತಮ್ಮ ಲೈಫ್​ ಸೆಟ್​ ಆದಂತೆ ಎಂದು ಉದ್ಗರಿಸಿದ್ದಾರೆ.
ಕಲರ್ಸ್​ ಟಿವಿಯಲ್ಲಿ ಹೊಸದಾಗಿ ಮೂಡಿಬರುತ್ತಿರುವ ‘ದ ಬಿಗ್ ಪಿಚ್ಚರ್​’ ಕ್ವಿಜ್​ ಶೋನ ಹೋಸ್ಟ್​ ಆಗಿ ರಣವೀರ್​ ಸಿಂಗ್​ ಕಿರುತೆರೆ ಪ್ರವೇಶಿಸಿದ್ದಾರೆ. ಶನಿವಾರ ಆರಂಭವಾದ ಈ ಶೋನ ಪ್ರೋಮೋ ವಿಡಿಯೋದಲ್ಲಿ ರಣವೀರ್​, ಸ್ಟುಡಿಯೋ ಆಡಿಯನ್ಸ್​ ಜೊತೆ ಲೋಕಾಭಿರಾಮವಾಗಿ ಮಾತನಾಡುತ್ತಾ, “ನಿಮಗೆ ಗೊತ್ತಿರುವಂತೆ ನನಗೆ ಮದುವೆಯಾಗಿದೆ. ಕೆಲವೇ ವರ್ಷಗಳಲ್ಲಿ ನಮಗೂ ಮಕ್ಕಳಾಗುತ್ತವೆ” ಎಂದು ನಾಚಿಕೊಂಡು ಹೇಳಿದ್ದಾರೆ.


A post shared by ColorsTV (@colorstv)
ಅಷ್ಟೇ ಅಲ್ಲ, “ನಿಮ್ಮ ಭಾಬಿ(ದೀಪಿಕಾ)ಯ ಬೇಬಿ ಫೋಟೋಗಳನ್ನು ನೀವು ನೋಡಬೇಕು. ಎಷ್ಟು ಕ್ಯೂಟ್​ ಬೇಬಿ ಆಗಿದ್ದಳು. ಆ ತರಹದ ಕ್ಯೂಟ್ ಬೇಬಿ ಸಿಕ್ಕರೆ ನನ್ನ ಜೀವನ ಸೆಟ್​ ಆದಂತೆ” ಎಂದಿರುವ ರಣವೀರ್​, ತಾವು ಮಗುವಿನ ಹೆಸರುಗಳ ಪಟ್ಟಿ ಮಾಡುತ್ತಿದ್ದು, ಕ್ವಿಜ್​ ಅಭ್ಯರ್ಥಿ ಹೇಳಿದ ‘ಶೌರ್ಯ ವೀರ್​ ಸಿಂಗ್​’ ಎಂಬ ಹೆಸರನ್ನು ಆ ಪಟ್ಟಿಗೆ ಸೇರಿಸಿಕೊಳ್ಳುವುದಾಗಿಯೂ ಹೇಳಿದ್ದಾರೆ. ಈ ಬಗ್ಗೆ ದೀಪಿಕಾರ ಅಭಿಪ್ರಾಯ ಏನು ತಿಳಿಯಬೇಕಿದೆ!(ಏಜೆನ್ಸೀಸ್)
VIDEO| ಸ್ಕೂಟರಲ್ಲಿ ಹೋಗುತ್ತಿದ್ದ ಹುಡುಗಿಯನ್ನು ನಿಲ್ಲಿಸಿ ಬುರ್ಖಾ ತೆಗೆಸಿದರು! ವೈರಲ್​ ಆಯ್ತು ವಿಡಿಯೋ

ಕಿಬ್ಬೊಟ್ಟೆಗೆ ವ್ಯಾಯಾಮ, ಬೆನ್ನೆಲುಬಿಗೆ ಶಕ್ತಿ ನೀಡುವ ‘ಏಕಪಾದ ಕೌಂಡಿನ್ಯಾಸನ’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 13 =
Remember me
