ನವದೆಹಲಿ:ಸನ್ಯಾಸಿನಿ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತು ಜಾಮೀನು ಪಡೆದುಕೊಂಡಿದ್ದ ಕೇರಳದ ಜಲಂಧರ್‌ನ ಬಿಷಪ್ ಫ್ರಾಂಕೋ ಮುಳ್ಳಕಾಲ್‌ಗೆ ಕರೊನಾ ವೈರಸ್‌ ತಗುಲಿದೆ.
ಈ ಕುರಿತು ಅಧಿಕಾರಿಯೊಬ್ಬರು ಖಚಿತ ಪಡಿಸಿದ್ದಾರೆ. ಜಾಮೀನು ಪಡೆದುಕೊಂಡಿದ್ದರೂ, ಅದರ ನಿಯಮದ ಅನ್ವಯ ಕೋರ್ಟ್‌ಗೆ ಹಾಜರಾಗದಿದ್ದರಿಂದ ಮೊನ್ನೆ ಸೋಮವಾರಷ್ಟೇ ಕೋರ್ಟ್‌ ಇವರಿಗೆ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿತ್ತು.
ಇದನ್ನೂ ಓದಿ:ಸಚಿವರ ಬುಡಕ್ಕೆ ಬೆಂಕಿಯಿಟ್ಟ ಅಂತಾರಾಷ್ಟ್ರೀಯ ‘ಸ್ಮಂಗ್ಲಿಂಗ್‌ ರಾಣಿ’
ಜಾಮೀನು ನೀಡಿಕೆ ಸಂದರ್ಭದಲ್ಲಿ, ಕೆಲವೊಂದು ಷರತ್ತುಗಳನ್ನು ವಿಧಿಸಲಾಗಿತ್ತು. ಆದರೆ ಷರತ್ತು ಮೀರಿ ಒಮ್ಮೆಯೂ ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ, ಜಾಮೀನನ್ನು ರದ್ದುಪಡಿಸಲಾಗಿತ್ತು. ಅವರನ್ನು ಕೂಡಲೇ ಅರೆಸ್ಟ್‌ ಮಾಡುವ ಸಂಬಂಧ ಜಾಮೀನು ರಹಿತ ವಾರೆಂಟ್‌ ಜಾರಿ ಮಾಡಲಾಗಿತ್ತು.ಆದರೆ ಈ ನಡುವೆಯೇ ಅವರಿಗೆ ಕೊರನಾ ಸೋಂಕು ತಗುಲಿರುವ ಕುರಿತು ಮಾಹಿತಿ ನೀಡಲಾಗಿದೆ.
ಫ್ರಾಂಕೋ ಮುಳ್ಳಕಾಲ್‌ ಅವರು 2014 ರಿಂದ 2016ರ ನಡುವೆ ತಮ್ಮ ಮೇಲೆ 13 ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ಕ್ರೈಸ್ತ ಸನ್ಯಾಸಿನಿಯೊಬ್ಬರು ಆರೋಪ ಮಾಡಿದ್ದರು. ರಾಜಕೀಯ ಮತ್ತು ಹಣ ಬಲದಿಂದ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿರುವ ಅವರನ್ನು ಶಿಕ್ಷಿಸಿ, ತನಗೆ ನ್ಯಾಯ ಒದಗಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ವ್ಯಾಟಿಕನ್‌ಗೂ ಮನವಿ ಸಲ್ಲಿಸಿದ್ದರು. ಕೋರ್ಟ್‌ ಜಾಮೀನು ನೀಡಿತ್ತು.
ಆದರೆ ಷರತ್ತಿನ ಅನ್ವಯ ಅವರು ಕೋರ್ಟ್‌ಗೆ ಆಗಾಗ್ಗೆ ವಿಚಾರಣೆ ಸಮಯದಲ್ಲಿ ಹಾಜರಾಗಬೇಕಿತ್ತು. ಅವರು ಹಾಜರಾಗಿರಲಿಲ್ಲ.(ಏಜೆನ್ಸೀಸ್‌)
ಬಿಜೆಪಿ ಶಾಸಕರಿಗೆ ಆವರಿಸಿದ ಕರೊನಾ – 75 ಮಂದಿಗೆ ಪಾಸಿಟಿವ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
