ಕೋಲ್ಕತಾ:ಕೆಲವು ಮುಸ್ಲಿಂ ಪುರುಷರು ಸೇರಿ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಆಕೆಯನ್ನು ಕೊಲೆ ಮಾಡಿರುವುದಾಗಿ ದೂರಿ ಪಶ್ಚಿಮ ಬಂಗಾಳದ ಛೋಪ್ರಾ ವಿಧಾನಸಭಾ ಕ್ಷೇತ್ರದ ಸೋನಾರ್‌ಪುರದಲ್ಲಿ ಭಾರಿ ಪ್ರತಿಭಟನೆ ಶುರುವಾಗಿದೆ.
ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ 31 ಬಂದ್ ಮಾಡಿ ಸಂತ್ರಸ್ತೆಗೆ ನ್ಯಾಯ ಕೋರಿದ್ದಾರೆ. ದುಷ್ಕರ್ಮಿಗಳನ್ನು ಹಿಡಿದು ಶಿಕ್ಷಿಸುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾ ನಿರತರು ಘೋಷಿಸಿದ್ದಾರೆ. ಬಸ್ಸುಗಳನ್ನು ಧ್ವಂಸಗೊಳಿಸಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆಯೂ ನಡೆದಿದ್ದು, ಜನಸಮೂಹವನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.
ಬಾಲಕಿಯ ಕೊಲೆಗೆ ರಾಜಕೀಯ ಸ್ವರೂಪವೂ ಪಡೆದಿದ್ದು, ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸಿದೆ ಎಂದು ಬಿಜೆಪಿ ಆರೋಪಿಸಿದೆ.
ಇದನ್ನೂ ಓದಿ:ಗಡಿಯಲ್ಲಿ ಗುಂಡು ಹಾರಿಸೋಕೆ ನೇಪಾಳ ಪೊಲೀಸರೂ ಶುರುಮಾಡಿದ್ರು!: ಭಾರತೀಯನಿಗೆ ಗಾಯ
ದಿನಾಜ್‌ಪುರ ಜಿಲ್ಲೆಯ ಸೋನಾರ್‌ಪುರ ಪ್ರದೇಶದಲ್ಲಿ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಬಾಲಕಿಯನ್ನು ಮೊದಲು ಅಪಹರಿಸಿ ಬೇರೆಡೆ ಕರೆದೊಯ್ದಿರುವ ವ್ಯಕ್ತಿಗಳು ಅಲ್ಲಿ ಅತ್ಯಾಚಾರ ಮಾಡಿ ನಂತರ ಹತ್ಯೆ ಮಾಡಿದ್ದಾರೆ. ಬಾಲಕಿಯ ದೇಹವು ಸೋನಾರ್ಪುರ ಪ್ರದೇಶದ ಆಲದ ಮರದ ಬಳಿ ಪತ್ತೆಯಾಗಿದೆ.
“ನನ್ನ ತಂಗಿ ರಾತ್ರಿಯಿಂದ ನಾಪತ್ತೆಯಾಗಿದ್ದಾಳೆ. ಇಡೀ ರಾತ್ರಿ ಆಕೆಯನ್ನು ಹುಡುಕಿದ ನಂತರ, ಬೆಳಗ್ಗೆ ಅವಳ ಮೃತದೇಹವನ್ನು ಆಲದ ಮರದ ಬಳಿ ಪತ್ತೆಯಾಗಿದೆ. ಆಕೆಯ ಮೇಲೆ ಅತ್ಯಾಚಾರ ನಡೆದಿತ್ತು. ನಿನ್ನೆ ಅವಳನ್ನು ಹುಡುಕುತ್ತಿದ್ದ ಐದು ಮುಸ್ಲಿಂ ಪುರುಷರು ಆಕೆಯ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಸಹೋದರಿ ಹೇಳಿದ್ದಾಳೆ.
“ಪೊಲೀಸರು ಎರಡು ಸೈಕಲ್‌ಗಳು, ಅಧರ್ ಕಾರ್ಡ್, ಎರಡು ಚತ್ರಿ ಮತ್ತು ಸೆಲ್ ಫೋನ್ ಅನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದಾರೆ. ಅಪರಾಧಿಗಳನ್ನು ಹುಡುಕಲು ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ. ಅಪರಾಧಿಗಳನ್ನು ಹಿಡಿದು ಶಿಕ್ಷಿಸುವವರೆಗೆ ಮುಷ್ಕರ ಮುಂದುವರಿಸಲಾಗುವುದು’ ಎಂದು ದಸ್ಪರಾ ಗ್ರಾಮ ಸಭಾ ಸಮಿತಿ ಸದಸ್ಯ ಅಸಿಮ್ ಬರ್ಮನ್ ಹೇಳಿದರು.(ಏಜೆನ್ಸೀಸ್‌)
ಗಂಡನ ತೊರೆದ ಅಕ್ಕನಮಗಳ ಮದುವೆಯಾಗಿ ಪೆಟ್ರೋಲ್‌ ಸುರಿದು ಕೊಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − two =
Remember me
